ಕಟಾವಿಗೆ ಬಂದ ಬೆಳೆ ಸರ್ವನಾಶವಾದರೆ ರೈತನ ಕರುಳು ಕಿತ್ತು ಬರುವುದು ಅಷ್ಟೇ ಅಲ್ಲ, ಈ ಹೊಲ ನೋಡಿದ ಯಾರಿಗೂ ವಿಷಾದ ಮೂಡದೇ ಇರದು. ಅಂತಹದ್ದೊಂದು ಘಟನೆ ಶಿರಾ ತಾಲೂಕಿನ ಹುಲಿಕುಂಟೆಯ ಬಳಿ ನಡೆದಿದೆ.
ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬಡಮಾರಲಹಳ್ಳಿ ಗ್ರಾಮದ ಗೊಣಿಹಳ್ಳಿ ಗ್ರಾಮದ ನಾಗೇಂದ್ರ ಎಂಬ ರೈತ ಜಮೀನಿನಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ ಇಡೀ ತೋಟಕ್ಕೆ ಬೆಂಕಿ ಆವರಿಸಿ ನಷ್ಟ ಸಂಭವಿಸಿದೆ. ಸುಮಾರು 4 ಎಕರೆ ಜಮೀನಿನಲ್ಲಿ ಕೊಯ್ಲಿಗೆ ಬಂದ ಬಾಳೆ ತೋಟ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಹಚ್ಚಿರುವುದು ಉದ್ದೇಶಪೂರ್ವಕವೇ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿದೆಯೇ ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಕಟಾವಿಗೆ ಬಂದ ತೋಟಕ್ಕೆ ಬೆಂಕಿ ತಗುಲಿ ಇಡೀ ಬೆಳೆ ನಷ್ಟ ಸಂಭವಿಸಿದೆ. ರೈತನಿಗೆ ಅಪಾರ ನಷ್ಟ ಸಂಭವಿಸಿದೆ.ತೋಟಗಾರಿಕೆ ಇಲಾಖೆ ಆದಷ್ಟು ಬೇಗ ಕ್ರಮ ಕೈಗೊಂಡು ಈ ರೈತರಿಗೆ ಆಗಿರುವ ನಷ್ಟವನ್ನು ತುಂಬುದ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶಿರಾ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ಒತ್ತಾಯಿಸಿದ್ದಾರೆ.
Fire broke out in the banana plantation of a farmer named Nagendra of Gonihalli village of Badamaralahalli village of Hulikunte Hobali in Shira taluk. As a result, the entire plantation was engulfed in fire and banana cultivation was lost.