ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಾರ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ಮೊದಲ ಬಾರಿಗೆ ಬನಾರಸಿ ಮಾವುಗಳನ್ನು ಲಂಡನ್, ದುಬೈ ಮತ್ತು ಪ್ರಪಂಚದ ಇತರ ಭಾಗಗಳಿಗೆ ರಫ್ತು ಮಾಡಲಾಗುತ್ತಿದೆ.
ವಾರಣಾಸಿಯಿಂದ ಲಂಡನ್ ಮತ್ತು ದುಬೈಗೆ ಕ್ರಮವಾಗಿ 3 ಮೆಟ್ರಿಕ್ ಟನ್ ವರೆಗೆ ಮಾವಿನ ಹಣ್ಣನ್ನು ರವಾನೆ ಮಾಡಲಾಗಿದೆ. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 520 ಮೆಟ್ರಿಕ್ ಟನ್ ಪ್ರಾದೇಶಿಕ ಅಕ್ಕಿ, 3 ಮೆಟ್ರಿಕ್ ಟನ್ ತಾಜಾ ತರಕಾರಿಗಳು ಮತ್ತು 80 ಮೆಟ್ರಿಕ್ ಟನ್ ಪ್ರಾದೇಶಿಕ ಅಕ್ಕಿಯನ್ನು ಕ್ರಮವಾಗಿ ಕತಾರ್, ಲಂಡನ್ ಮತ್ತು ಆಸ್ಟ್ರೇಲಿಯಾಕ್ಕೆ ರಫ್ತು ಮಾಡಲಾಗಿದೆ.
ಇದರ ನೆರವಿನೊಂದಿಗೆ ಉತ್ತರ ಪ್ರದೇಶದ ಪೂರ್ವಾಂಚಲ್ ಪ್ರದೇಶವು ವಾರಣಾಸಿ ಕೃಷಿ ರಫ್ತು ಕೇಂದ್ರದ ಅಭಿವೃದ್ಧಿ ಮೂಲಕ ಭಾರತದ ಕೃಷಿ ಉತ್ಪನ್ನಗಳ ರಫ್ತಿಗೆ ಹೊಸ ಕೇಂದ್ರವಾಗಿ ಹೊರಹೊಮ್ಮಿತು. ಕಳೆದ ಆರು ತಿಂಗಳಲ್ಲಿ ಸುಮಾರು 20,೦೦೦ ಮೆಟ್ರಿಕ್ ಟನ್ ಕೃಷಿ ಉತ್ಪನ್ನವನ್ನು ಪೂರ್ವಾಂಚಲ್ ಪ್ರದೇಶದಿಂದ ರಫ್ತು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.