ಬಂಡೀಪುರದಲ್ಲಿ ಜಾಗತಿಕ ಹುಲಿ ಘರ್ಜನೆ….! 23 ದೇಶಗಳ ಪ್ರತಿನಿಧಿಗಳ ಮಹಾಸಮ್ಮೇಳನ

February 9, 2026
1:17 PM

ವಿಶ್ವದ ಗಮನ ಸೆಳೆಯುವ ಮಹತ್ವದ ಬೆಳವಣಿಗೆಯಲ್ಲಿ, Bandipur National Parkನಲ್ಲಿ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಹುಲಿ ಮೈತ್ರಿ (Global Tiger Alliance) ಶೃಂಗಸಭೆ ನಡೆಯುತ್ತಿದೆ. 23 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುತ್ತಿರುವ ಈ ಶೃಂಗಸಭೆ ದೇಶದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಮಹತ್ವದ ಕಾರ್ಯಕ್ರಮವಾಗಿದೆ.

ಉದ್ಘಾಟನಾ ಕಾರ್ಯಕ್ರಮವು ಮೇಲುಕಾಮನಹಳ್ಳಿಯಲ್ಲಿ  ಮಧ್ಯಾಹ್ನ ನಡೆಯಲಿದೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ಪ್ರಭಾಕರನ್ ತಿಳಿಸಿದ್ದಾರೆ.

ಶೃಂಗಸಭೆಯಲ್ಲಿ ರಷ್ಯಾ, ಶ್ರೀಲಂಕಾ, ಕಾಂಗೋ, ಭೂತಾನ್, ಮಲೇಷ್ಯಾ, ಕಾಂಬೋಡಿಯಾ, ಕಜಕಿಸ್ತಾನ್, ಮೆಕ್ಸಿಕೋ, ಮಂಗೋಲಿಯಾ ಸೇರಿದಂತೆ ಒಟ್ಟು 23 ರಾಷ್ಟ್ರಗಳ ಅರಣ್ಯ ಇಲಾಖೆ ಅಧಿಕಾರಿಗಳು, ವನ್ಯಜೀವಿ ತಜ್ಞರು ಹಾಗೂ ಸಂಶೋಧಕರು ಭಾಗವಹಿಸಲಿದ್ದಾರೆ.

 ಪ್ರಮುಖ ಚರ್ಚೆಗಳು ಏನು? : ಹುಲಿ ಸಂರಕ್ಷಣೆಯಲ್ಲಿ ಜಾಗತಿಕ ಸಹಕಾರ, ಅಕ್ರಮ ಬೇಟೆ ವಿರುದ್ಧ ಕಠಿಣ ಕ್ರಮಗಳು, ಮಾನವ–ವನ್ಯಜೀವಿ ಸಂಘರ್ಷ ಪರಿಹಾರ, ಹವಾಮಾನ ಬದಲಾವಣೆಯ ಪರಿಣಾಮ, ಸಂಶೋಧನಾ ಮಾಹಿತಿಗಳ ಹಂಚಿಕೆ ನಡೆಯಲಿದೆ.

ಬಂಡೀಪುರವು ನೀಲ್‌ ಗಿರಿ ಜೈವವೈವಿಧ್ಯ ವಲಯದ ಪ್ರಮುಖ ಭಾಗವಾಗಿದ್ದು, ಭಾರತದಲ್ಲಿ ಹುಲಿ ಸಂರಕ್ಷಣೆಯ ಮಾದರಿಯಾಗಿದೆ. ಈ ಶೃಂಗಸಭೆ ಮೂಲಕ ಹೊಸ ಕಾರ್ಯಯೋಜನೆ ರೂಪುಗೊಳ್ಳುವ ನಿರೀಕ್ಷೆಯಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ
October 12, 2026
12:17 PM
by: ದ ರೂರಲ್ ಮಿರರ್.ಕಾಂ
ಬರಗಾಲದಲ್ಲೂ ಬೆಳೆ ಉಳಿಸಿದ ಸಾವಯವ ಕೃಷಿ – ಸಾವಯವ ಕೃಷಿ ಅಬ್ಬರಿಸಿ ಬರುವುದಿಲ್ಲ- ಮುಗ್ಗರಿಸಿ ಬೀಳುವುದಿಲ್ಲ..!
October 12, 2026
7:30 AM
by: ಮಹೇಶ್ ಪುಚ್ಚಪ್ಪಾಡಿ
ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ
October 11, 2026
10:37 AM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ
October 11, 2026
10:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror