Advertisement
ಸುದ್ದಿಗಳು

ನ 19 | ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ | ಭಾರತದಾದ್ಯಂತ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಸಾಧ್ಯತೆ |

Share

ನವೆಂಬರ್ 19 (ನಾಳೆ) ರಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘವು (ಎಐಬಿಇಎ) ಮುಷ್ಕರ ನಡೆಸುತ್ತಿದ್ದು, ಇದರಿಂದ ರಾಷ್ಟ್ರದಾದ್ಯಂತ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.‌

ಬ್ಯಾಂಕ್ ನೌಕರರ ಸಂಘದಲ್ಲಿ ಸಕ್ರಿಯರಾಗಿದ್ದಕ್ಕಾಗಿ  ಬ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ಬಲಿಪಶು ಮಾಡುವುದು ಹಾಗೂ ಉದ್ಯೋಗ ಹೊರಗುತ್ತಿಗೆಯನ್ನು  ವಿರೋಧಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿದ್ದಾರೆ.

ಬ್ಯಾಂಕ್ ಗಳ ಖಾಸಗೀಕರಣದ ವಿರುದ್ಧ ಮತ್ತು ಬ್ಯಾಂಕ್ ನೌಕರರ ಸುರಕ್ಷತೆ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಒಂದು ದಿನದ ಮುಷ್ಕರ ನಡೆಸಲು ನಿರ್ಧರಿಸಿದೆ. ಅಲ್ಲದೆ ಹಲವಾರು ಬ್ಯಾಂಕ್ ಗಳು ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಹೊರಗುತ್ತಿಗೆಗೆ ನೀಡುತ್ತಿವೆ. ಇದರಿಂದ ಗ್ರಾಹಕರ ಖಾಸಗಿತನ ಮತ್ತು ಹಣ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ದೂರಿದೆ. ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಹಾಗೂ ಐಡಿಬಿಐ ಬ್ಯಾಂಕ್ ಗಳು ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡುತ್ತಿವೆ ಎಂದು ಒಕ್ಕೂಟ ಹೇಳಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 26.09.2026 | ಸೆ.28ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು: ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿಯುವ ಮುನ್ನವೇ ಮಳೆಯ ವಾತಾವರಣದಲ್ಲಿ ಬದಲಾವಣೆಯ ಲಕ್ಷಣಗಳು…

2 hours ago

ಜಿಐ ಮಾನ್ಯತೆಯ ‘ಗುಲ್ಬರ್ಗಾ ತೊಗರಿ ಬೇಳೆ’ಗೆ ಮಾಲ್ಡೀವ್ಸ್‌ ಮಾರುಕಟ್ಟೆ – ರಫ್ತಿಗೆ ಕೇಂದ್ರದ ಅನುಮತಿ

ಜಿಐ ಮಾನ್ಯತೆ ಪಡೆದ ‘ಗುಲ್ಬರ್ಗಾ ತೊಗರಿ ಬೇಳೆ’ಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲು ಕೇಂದ್ರ…

6 hours ago

ನಾಗರಿಕ ಪ್ರಜ್ಞೆ ಎಂದರೆ ಕಾನೂನು ಪಾಲನೆ ಮಾತ್ರವಲ್ಲ – ನಮ್ಮ ನಡವಳಿಕೆಯೇ ಸಮಾಜದ ಕನ್ನಡಿ

ನಾಗರಿಕ ಪ್ರಜ್ಞೆ ಎಂದರೆ ಕಾನೂನಿನ ಭಯದಿಂದ ನಿಯಮ ಪಾಲಿಸುವುದಷ್ಟೇ ಅಲ್ಲ; ಇತರರ ಹಕ್ಕು,…

6 hours ago

ಹಾಲಿನ ದರ ಕನಿಷ್ಠ ₹10 ಹೆಚ್ಚಳಕ್ಕೆ ಕೆಎಂಎಫ್‌ ಮನವಿ – ಹೈನುಗಾರರಿಗೆ ಏನು ಪ್ರಯೋಜನ..? ಗ್ರಾಹಕರಿಗೆ ಎಷ್ಟು ಹೊರೆ..?

ರಾಜ್ಯದಲ್ಲಿ ಹಾಲಿನ ದರವನ್ನು ಕನಿಷ್ಠ ಲೀಟರ್‌ಗೆ ₹10 ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಸರ್ಕಾರಕ್ಕೆ…

8 hours ago

ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು

ಹಳೆಯ ನೋವು, ಕೋಪ, ತಿರಸ್ಕಾರ ಮತ್ತು ನಿರೀಕ್ಷೆಗಳ ಭಾರವನ್ನು ಹೊಸ ಸಂಬಂಧಗಳ ಮೇಲೆ…

21 hours ago

ರೈತರಿಗೆ ವಿದ್ಯುತ್‌ ಶಾಕ್ – ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ- ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ

ಮಳೆ ಕೊರತೆ ಮತ್ತು ಜಲವಿದ್ಯುತ್ ಉತ್ಪಾದನೆ ಕುಸಿತದ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ…

1 day ago