ನಮ್ಮ ರಾಜ್ಯದ ಅದೆಷ್ಟೋ ದೇವಾಲಯಗಳು ಮೂಲಭೂತ ಸೌಲಭ್ಯವಿಲ್ಲದೆ ವಂಚಿತವಾಗಿವೆ. ಕೆಲವು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದ್ರೂ ಮೂಲ ಸೌಲಭ್ಯದ ಕೊರತೆ ಕಾಡುತ್ತಿದೆ. ಆದರೆ ಈಗ ರಾಜ್ಯದ ಪ್ರಮುಖ ದೇವಾಲಯಗಳಿಗೆ ಎರಡು ತಿಂಗಳ ಒಳಗಾಗಿ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯ ನೀಡಲಾಗುವುದು. ತಸ್ತೀಕ್ ಹಣ ನೇರವಾಗಿ ಅರ್ಚಕರಿಗೆ ತಲುಪುವ ವ್ಯವಸ್ಥೆ ಸಂಪೂರ್ಣ ರೀತಿಯಲ್ಲಿ ಜಾರಿ ಮಾಡುತ್ತೇವೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.
ಪ್ರಮುಖ ದೇಗುಲಗಳಲ್ಲಿ ಆನ್ ಲೈನ್ ಸೇವೆಗಾಗಿ ಆ್ಯಪ್ ಶೀಘ್ರ ಬಿಡುಗಡೆ ಮಾಡಲಾಗುತ್ತೆ. ದೇವಾಲಯಗಳ ಚಿರ ಆಸ್ತಿ ಸರ್ವೇ ಮಾಡಿ ಒತ್ತುವರಿ ಆಗಿದ್ರೆ ತೆರವು ಕಾರ್ಯ ಆಗುತ್ತೆ ಎಂದು ತಿಳಿಸಿದೆ. ಮುಜರಾಯಿ ಇಲಾಖೆ ಅಡಿಯಲ್ಲಿ ಬರುವ ದೇವಾಲಯಕ್ಕೆ ಸಂಬಂಧಿಸಿದಂತೆ ಖಡಕ್ ಸೂಚನೆ ಕೊಟ್ಟಿದ್ದಾರೆ ಸಚಿವ ರಾಮಲಿಂಗರೆಡ್ಡಿ. ಹಳೆಯ ದೇವಾಲಯಗಳಿಗೆ ಕ್ರಮಬದ್ಧವಾಗಿ ಮತ್ತೆ ಕೊಠಡಿ ನಿರ್ಮಾಣ ಮಾಡಲು ಸೂಚಿಸಿದ್ದಾರೆ.
ಮುಜರಾಯಿ ಇಲಾಖೆ ಖಡಕ್ ಸೂಚನೆ ಏನು?
ಸಿಸಿ ಕ್ಯಾಮರಾ ಅಳವಡಿಕೆ ಮಾಡಬೇಕು, ದೇವಾಲಯದ ಆವರಣದ 100 ಮೀಟರ್ ವರೆಗೂ ತಂಬಾಕು ಅಂಗಡಿ ತೆರೆಯುವಂತಿಲ್ಲ., ಶೌಚಾಲಯಕ್ಕೆ ಹೋಗುವ ಭಕ್ತರಿಂದ ಹಣ ತೆಗೆದುಕೊಳ್ಳುವಂತಿಲ್ಲ., ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ,
ಶೌಚಾಲಯ, ದೇವಾಲಯದ ಆವರಣ ಸ್ವಚ್ಚವಾಗಿ ಇಡುವುದು ಕಡ್ಡಾಯ., ಎಲ್ಲರಿಗೂ ಕಾಣುವಂತೆ ಹುಂಡಿ ಇಡುವುದು ಕಡ್ಡಾಯ., ಈ ಹಣವನ್ನು ದೇವಾಲಯದ ಅಭಿವೃದ್ಧಿಗೆ ವ್ಯಯ ಮಾಡಲಾಗುವುದು.
( ಅಂತರ್ಜಾಲ ಮಾಹಿತಿ)
ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649
ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…
ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490