ಬೆಂಗಳೂರಿನಲ್ಲಿ ಮನೆ ಮುಂದೆ ವಾಹನ ಪಾರ್ಕಿಂಗ್ ಮಾಡಬೇಕಾದರೆ ಹಣ ಕಟ್ಟಬೇಕು ಎಂಬ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯ ಎಂಟು ವಲಯಗಳಿಗೆ ಅನ್ವಯವಾಗುವಂತೆ ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಹೊಸ ಪಾರ್ಕಿಂಗ್ ಕಾಯಿದೆ ಜಾರಿಗೆ ತರಲು ಸರ್ಕಾರ ಸಿದ್ದತೆ ನಡೆಸಿದೆ . ಈ ಕಾಯಿದೆ ಪ್ರಕಾರ ಮನೆ ಮಾಲೀಕರು ತಮ್ಮ ಎದುರಿನ ರಸ್ತೆ ಪಕ್ಕ ಪಾರ್ಕಿಂಗ್ ಮಾಡಲು ಹಣ ಪಾವತಿ ಮಾಡಬೇಕು. ವಾರ್ಷಿಕವಾಗಿ 3 ಸಾವಿರದಿಂದ 5 ಸಾವಿರ ರೂ ಹಣ ನೀಡಿ ಪರವಾನಗಿ ಪಡೆಯಬೇಕು ಎಂಬ ನಿಯಮವನ್ನು ಸದ್ಯದಲ್ಲೇ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಬಿಬಿಎಂಪಿ ಹೊಸ ಪಾರ್ಕಿಂಗ್ ಟೆಂಡರ್ ಕಾಯಿದೆ ಜಾರಿಗೆ ತರಲು ಮುಂದಾಗಿದ್ದು, ನಗರದ 8 ವಲಯಗಳಿಗೆ ಟೆಂಡರ್ ಕರೆದಿದೆ.ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಪೇ ಅಂಡ್ ಪಾರ್ಕಿಂಗ್ ಪಾಲಿಸಿ ಜಾರಿ ಮಾಡುವ ಬಗ್ಗೆ ಹಲವು ಬಾರಿ ಚರ್ಚಿಸಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel