ಬಿಸಿ ರೋಡ್‌ -ಮಾಣಿ ರಸ್ತೆ ಅವ್ಯವಸ್ಥೆ | ಬಸ್ಸಿನಲ್ಲಿದ್ದ ಯುವಕ ಆಸ್ಪತ್ರೆಗೆ ದಾಖಲಾದ….! | ಯಾರು ಹೊಣೆ ? ಸಾಮಾನ್ಯ ಜನರಿಗೆ ಧ್ವನಿಯಾಗುವವರು ಯಾರು ?

August 20, 2022
2:31 PM

ಮಂಗಳೂರಿನಿಂದ ಪುತ್ತೂರಿಗೆ ಕೆ ಎಸ್‌ ಆರ್‌ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಳ್ಯದ ತಾಲೂಕಿನ ಬೆಳ್ಳಾರೆಯ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಣ ರಸ್ತೆ ಅವ್ಯವಸ್ಥೆ. ಆ ರಸ್ತೆಯಲ್ಲೂ ಬಸ್ಸು ಚಾಲಕನ ಅಜಾಗರೂಕತೆಯ ಬಸ್ಸು ಚಾಲನೆ. ಈಗ ಆಸ್ಪತ್ರೆಗೆ ದಾಖಲಾದ ಯುವಕನ ಬದುಕಿನ ಪ್ರಶ್ನೆಗೆ ಯಾರು ಹೊಣೆ ? ಇಲಾಖೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣವೇ ಸ್ಪಂದಿಸಬೇಕಿದೆ.

ಸುಳ್ಯ ತಾಲೂಕಿನ ಬೆಳ್ಳಾರೆಯ ವಿಜಯ ಕುಮಾರ್‌ ಎಂಬವರು ಸುಳ್ಯದಲ್ಲಿ ಮೊಬೈಲ್‌ ಅಂಗಡಿ ಇರಿಸಿಕೊಂಡಿದ್ದರು. ಕಾರ್ಯನಿಮಿತ್ತ ಮಂಗಳೂರಿಗೆ ಹೋಗಿ ವಾಪಾಸ್‌ ಬೆಳ್ಳಾರೆಗೆ ಆಗಮಿಸುತ್ತಿದ್ದರು. ವಾಪಾಸ್‌ ಬರುವಾಗ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಕುಳಿತಿದ್ದರು. ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾಗ ಕಲ್ಲಡ್ಕ ಬಳಿ ರಸ್ತೆ ಅವ್ಯವಸ್ಥೆಯ ನಡುವೆಯೂ ಬಸ್ಸು ಚಾಲಕ ವೇಗವಾಗಿ ಚಲಾಯಿಸುತ್ತಿದ್ದ ಕಾರಣ ಹಾಗೂ ರಸ್ತೆ ಗುಂಡಿಯಿಂದ ಕೂಡಿದ್ದರಿಂದ ಬಸ್ಸು ರಸ್ತೆಯ ಗುಂಡಿಗೆ ಬಿದ್ದಿದೆ. ಈ ಸಮಯದಲ್ಲಿ ಪ್ರಯಾಣಿಕ ವಿಜಯ ಕುಮಾರ್‌ ಅವರು ಬಸ್ಸಿನಲ್ಲಿ ಎತ್ತಿ ಹಾಕಿದ ಅನುಭವಾಗಿ ದೇಹದಲ್ಲಿ ಸೊಂಟದಿಂದ ಕೆಳಭಾಗದ ಸ್ಪರ್ಶ ಕಳೆದುಕೊಂಡಿದೆ. ತಕ್ಷಣವೇ ವಿಜಯ್‌ ಅವರು ಬೊಬ್ಬೆ ಹೊಡೆದ ಬಳಿಕ ಬಸ್ಸು ನಿಲ್ಲಿಸಿದ ಚಾಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಇದೀಗ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ಅವರಿಗೆ ಸರ್ಜರಿ ನಡೆಸಬೇಕಾಗಿದೆ. ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸರ್ಜರಿ ಬಳಿಕವೂ ಸುಧಾರಣೆ ಬಗ್ಗೆ ಮುಂದೆ ಯೋಚಿಸಬೇಕಾಗಿದೆ.

ಬಿ ಸಿ ರೋಡು-ಕಲ್ಲಡ್ಕ ರಸ್ತೆ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಪ್ರಯಾಣಿಕರು, ಸಾರ್ವಜನಿಕರು ಹೇಳಿದ್ದರೂ ಇದುವರೆಗೂ ಯಾವುದೇ ಇಲಾಖೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಬಸ್ಸು ಚಾಲಕರೂ ಕೂಡಾ ಆ ಹೊಂಡದ ರಸ್ತೆಯಲ್ಲಿ ವೇಗವಾಗಿ ಬಸ್ಸು ಚಾಲನೆ ಮಾಡುತ್ತಾ ಸಾಗುವುದರ ಬಗ್ಗೆಯೂ ಸಾರ್ವಜನಿಕರು ದೂರಿದ್ದಾರೆ. ಆದರೆ ಯಾವ ಅವ್ಯವಸ್ಥೆ ಬಗ್ಗೆಯೂ ಎಲ್ಲಾ ಜನಪ್ರತಿನಿಧಿಗಳು ಮೌನವಹಿಸಿದ್ದರು. ಇದೀಗ ಬೆಳ್ಳಾರೆಯ ವಿಜಯ ಕುಮಾರ್‌ ಅವರಿಗೆ ಆಗಿರುವ ದೈಹಿಕ ಸಮಸ್ಯೆಗೆ ಯಾರು ಹೊಣೆ ? ಮೊಬೈಲ್‌ ಅಂಗಡಿ ಹೊಂದಿರುವ ಅವರು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ತಾನು ಮಾಡದ ತಪ್ಪಿಗೆ, ಇಲಾಖೆಯ ಅವ್ಯವಸ್ಥೆಯಿಂದ ಆಗಿರುವ ಈ ದುರಂತದಿಂದ ಅವರ ಮುಂದಿನ  ಬದುಕಿನ ಪ್ರಶ್ನೆ ಏನು ? ಇಲಾಖೆಗಳು ಈ ಬಗ್ಗೆ ತಕ್ಷಣವೇ ಸೂಕ್ತ ಕ್ರಮಗೊಳ್ಳಬೇಕು, ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲಾಖೆಗಳ, ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಜನಸಾಮಾನ್ಯರಿಗೆ ಆಗುವ ಇಂತಹ ತೊಂದರೆಗಳಿಗೆ ಇಲಾಖೆಗಳು ಹಾಗೂ ಗುತ್ತಿಗೆದಾರರೇ ಹೊಣೆಯಾಗಬೇಕು ಎಂದು ವಿಜಯ ಮಿತ್ರರು ಹೇಳಿದ್ದಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡು ತಪ್ಪಲಲ್ಲಿ ಧಾರಾಕಾರ ಮಳೆ – ಹಲವು ಕಡೆ ಕೆಲವೇ ಗಂಟೆಯಲ್ಲಿ 100 ಮಿಮೀ ದಾಟಿದ ಮಳೆ
August 25, 2026
1:40 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |25-08-2026 | ಕರಾವಳಿ, ಮಲೆನಾಡಿನಲ್ಲೂ ಬಿಡುವಿನ ಅವಧಿ ಹೆಚ್ಚಳ -ಕೆಲವೆಡೆ ಉತ್ತಮ ಮಳೆ – ರಾಜ್ಯದಲ್ಲಿ ಮಳೆ ಪರಿಸ್ಥಿತಿ ಹೇಗೆ..?
August 25, 2026
1:04 PM
by: ಸಾಯಿಶೇಖರ್ ಕರಿಕಳ
ಕರಾವಳಿಗೆ ವಾಡಿಕೆ ಮಳೆ, ಮಲೆನಾಡು ದಾಟದ ಮುಂಗಾರು ಮೋಡ..!
August 25, 2026
12:13 PM
by: ದ ರೂರಲ್ ಮಿರರ್.ಕಾಂ
ಬೆಲೆ ಏರಿಕೆಯನ್ನಷ್ಟೇ ನೋಡುವುದಲ್ಲ ; ಮುಂದಿನ ಮಾರುಕಟ್ಟೆಯನ್ನು ನಿರ್ಮಿಸುವ ಕಾಲ
August 25, 2026
10:38 AM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror