ಅಂದದ ಹಾಗೂ ಬಲು ರುಚಿಯ ಚಂದ್ರ ಬಾಳೆಹಣ್ಣು| ಕೆಂಪು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಲಾಭವಿದೆ..?

January 6, 2024
3:20 PM

ಚಂದ್ರ ಬಾಳೆ ಅಥವಾ ಕೆಂಪು ಬಾಳೆ(Red Banana) ಇದರ ಬಗ್ಗೆ ನಿಮಗೆ ಹೇಳಬೇಕು. ಸಾಮಾನ್ಯವಾಗಿ ಹಳದಿ ಹಾಗೂ ಹಸಿರು ಬಾಳೆಹಣ್ಣುಗಳು(Banana) ಮಾರುಕಟ್ಟೆಯಲ್ಲಿ(Market) ಕಾಣಲು ಸಿಗುತ್ತವೆ. ಕೆಂಪು ಬಾಳೆಹಣ್ಣು ಹೆಚ್ಚಾಗಿ ಕಂಡು ಬರುವುದಿಲ್ಲ. ಕೆಂಪು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಲಾಭವಿದೆ ಬನ್ನಿ ತಿಳಿಯೋಣ.

Advertisement

ಕೆಂಪು ಬಾಳೆಹಣ್ಣು ಹಳದಿ ಬಾಳೆಹಣ್ಣಿಗಿಂತ ಸ್ವಲ್ಪ ಮೃದು ಹಾಗೂ ಸಿಹಿಯಾಗಿರುತ್ತದೆ. ಇದು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಈ ಜಾತಿಯ ಬಾಳೆಹಣ್ಣು ಪೂರ್ವ ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕಾ, ಮತ್ತು ಯುನೈಟೆಡ್ ಅರಬ್ ಹೇರಳವಾಗಿ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಇದನ್ನು ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಉತ್ಪಾದಿಸಲಾಗುತ್ತದೆ. ಇತ್ತೀಚೆಗೆ ನಮ್ಮ ಕರ್ನಾಟಕದಲ್ಲಿಯೂ ಬೆಳೆಯುತ್ತಾರೆ. ಕೆಂಪು ಬಾಳೆಹಣ್ಣು ರುಚಿಕರವಾಗಿರುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ಪಡೆದುಕೊಂಡಿದೆ.

ಬಣ್ಣ ಹಾಗೂ ಹೆಸರಿನಲ್ಲಿ ವಿಭಿನ್ನವಾಗಿದ್ದರೂ, ಎಲ್ಲಾ ರೀತಿಯ ಪೋಷಕಾಂಶಗಳು ಬಹುತೇಕ ಒಂದೇ ಆಗಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಬಿಟಮಿನ್ ಬಿ 6 ಇದರಲ್ಲಿ ಹೇರಳವಾಗಿ ಕಂಡು ಬರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಒದಗಿಸುತ್ತದೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ. ಕ್ಯಾನ್ಸರ್, ಹೃದ್ರೋಗ, ಹಾಗೂ ಮಧುಮೇಹ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ನೆರವಾಗುತ್ತವೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. ಈ ಬಾಳೆ ಹಣ್ಣಿನ ಪ್ರಭೇದಗಳಲ್ಲಿ ಪೊಟ್ಯಾಶಿಯಂ ಬಹುತೇಕ ಹೆಚ್ಚಾಗಿ ಕಂಡು ಬರುತ್ತದೆ. ಮತ್ತು ಸೋಡಿಯಂ ಕಡಿಮೆ ಇರುವುದರಿಂದ ರಕ್ತದೋತ್ತಡವನ್ನು ಇದು ನಿಯಂತ್ರಿಸುತ್ತದೆ. ಕಣ್ಣುಗಳ ಆರೋಗ್ಯಕ್ಕೆ ಕೆಂಪು ಬಾಳೆಹಣ್ಣು ಹಳದಿ ಬಾಳೆ ಹಣ್ಣಿಗಿಂತ ಹೆಚ್ಚು ಕ್ಯಾರೋಟಿನ್ ನಾಯ್ಡ್ ಗಳನನ್ನು ಒಳಗೊಂಡಿದೆ. ಹಾಗಾಗಿ ಇದು ಕಣ್ಣಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಕೆಂಪು ಬಾಳೆಹಣ್ಣು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಇದು ನಿವಾರಿಸುವುಲ್ಲದೇ, ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅತಿಸಾರದ ಸಂದರ್ಭದಲ್ಲಿ ಬಾಳೆಹಣ್ಣು ಸೇವಿಸುವುದು ಉತ್ತಮ. ಕೆಂಪು ಬಾಳೆಹಣ್ಣು ಸೇವಿಸುವುದರಿಂ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಬಹುದು. ಕೆಂಪು ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿ ಕಂಡು ಬರುತ್ತದೆ.

ಈ ಬಾಳೆಯ 100 ಗ್ರಾಂ ತೂಕದ ಹಣ್ಣಿನಲ್ಲಿ :-
ನೀರು – 74.91 ಗ್ರಾಂ
ಶಕ್ತಿ – 89 ಕ್ಯಾಲೋರಿಗಳು
ಕೊಬ್ಬು – 0.33 ಗ್ರಾಂ
ಪ್ರೋಟೀನ್ –  1.09 ಗ್ರಾಂ
ಕಾರ್ಬೋಹೈಡ್ರೇಟ್ – 22.84 ಗ್ರಾಂ
ಫೈಬರ್ – 2.6 ಗ್ರಾಂ
ಸಕ್ಕರೆ – 12.23 ಗ್ರಾಂ
ಕ್ಯಾಲ್ಸಿಯಂ – 5 ಮಿ.ಗ್ರಾಂ
ಕಬ್ಬಿಣ – 0. 26 ಮಿ.ಗ್ರಾಂ
ಮೆಗ್ನೇಶಿಯಂ – 27 ಮಿ.ಗ್ರಾಂ
ರಂಜಕ – 22 ಮಿ.ಗ್ರಾಂ
ವಿಟಮಿನ್ ಸಿ – 8.7 ಮಿ.ಗ್ರಾಂ
ವಿಟಮಿನ್ ಬಿ 6 – 0.367 ಮಿ.ಗ್ರಾಂ.

ಕೆಂಪು ಬಾಳೆಹಣ್ಣನ್ನು ಯಾವಾಗ ಮತ್ತು ಎಷ್ಟು ಸೇವಿಸಬೇಕು?: ಕೆಂಪು ಬಾಳೆಹಣ್ಣನ್ನು ಬಳಕೆಯನ್ನು ಹಲವು ವಿಧದಲ್ಲಿ ಮಾಡಬಹುದು. ಆದ್ರೆ ಅದನ್ನು ಎಷ್ಟು ಪ್ರಮಾಣದಲ್ಲಿ ಸೇವಿಸುವುದು ಸೂಕ್ತ ಎಂಬುದು ಮುಖ್ಯ. ಕೆಂಪು ಬಾಳೆಹಣ್ಣನ್ನು ಯಾವುದೇ ಸಮಯದಲ್ಲಾದರೂ ಸೇವಿಸಬಹುದು. ಆದರೆ ಅದನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ವಯಸ್ಸು ಮತ್ತು ಆರೋಗ್ಯಕ್ಕೆ ಅನುಗುಣವಾಗಿ ತಿನ್ನಬಹುದು.

ಬರಹ :
 ರಜಿತ್ ಗೌಡ ಬೇಸೂರ್
, ಕೃಷಿಕ.

Moon banana or red banana should tell you about it. Usually yellow and green bananas are available in the market. Red banana is not often found. Let’s know what are the benefits of eating red banana.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ
April 16, 2025
9:41 PM
by: ಡಾ.ಚಂದ್ರಶೇಖರ ದಾಮ್ಲೆ
ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ
April 16, 2025
8:40 PM
by: ದ ರೂರಲ್ ಮಿರರ್.ಕಾಂ
ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group