Opinion

ಜಾಗತಿಕ ತಾಪಮಾನ ನಮ್ಮ ಮನ ಮನೆ ದೇಹ ಮನಸ್ಸು ಸುಡುವ ಮುನ್ನ……

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಎಂದೋ ಆಗಬಹುದು ಎಂದು ಊಹಿಸಿದ್ದ ಜಾಗತಿಕ ತಾಪಮಾನದ(Global Warming) ಬಿಸಿ(Heat) ಈಗ ಭಾರತದೊಳಗೆ(India), ಕರ್ನಾಟಕವನ್ನು(Karnataka) ಪ್ರವೇಶಿಸಿ ನಮ್ಮ ನಮ್ಮ ಮನೆಯೊಳಗೆ ದೇಹ ಸುಡುವಷ್ಟು ಹತ್ತಿರ ಬಂದಿದೆ…. ಅದರ ದುಷ್ಪರಿಣಾಮಗಳು ಮುಂದೆಂದೂ ಆಗಬಹುದು ಎಂದು ಇಡೀ ಆಡಳಿತ ವ್ಯವಸ್ಥೆ ಮತ್ತು ಸಮಾಜ ಭಾವಿಸಿತ್ತು. ಆದರೆ ಅದು ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿ ಅತ್ಯಂತ ತೀವ್ರವಾಗಿ ನಮ್ಮನ್ನು ಕಾಡಲು ಪ್ರಾರಂಭಿಸಿದೆ….

Advertisement

ಹಣ ಕೇಂದ್ರಿತ ಅಭಿವೃದ್ಧಿಯ ಹಿಂದೆ ಬಿದ್ದ ಮಾನವ ಸಮಾಜ ಪರಿಸರವನ್ನು ನಿರ್ಲಕ್ಷಿಸಿರುವುದು ಮಾತ್ರವಲ್ಲ ನಾಶಪಡಿಸುವುದನ್ನು ನಿರಂತರವಾಗಿ ಮಾಡುತ್ತಾ ಸಾಗಿದ್ದರ ಫಲಿತಾಂಶ ಈಗ ನಾವು ಅನುಭವಿಸಬೇಕಾಗಿದೆ….. ಗಾಳಿ ನೀರು ಆಹಾರ ಕಲುಷಿತವಾಗುತ್ತಿರುವುದಕ್ಕಿಂತ ಅಪಾಯಕಾರಿಯಾಗಿ ವಾತಾವರಣದಲ್ಲಿ ಉಷ್ಣ ತಾಪಮಾನ ಹೆಚ್ಚಾಗುತ್ತಿರುವುದು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ….  ಮೊದಲು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ತೀವ್ರ ತಾಪಮಾನ ಈಗ ರಾಜ್ಯದ ಎಲ್ಲಾ ಕಡೆ ಏಕಪ್ರಕಾರವಾಗಿ ವರದಿಯಾಗುತ್ತಿದೆ. ಬಹುತೇಕ 40 ಡಿಗ್ರಿ ಸೆಲ್ಸಿಯಸ್ ನ ಆಸು ಪಾಸಿನಲ್ಲಿ ಕರ್ನಾಟಕ ರಾಜ್ಯ ಕುದಿಯುತ್ತಿದೆ…..

ಪ್ರಾಕೃತಿಕವಾಗಿ, ಸ್ವಾಭಾವಿಕವಾಗಿ ಸಂಭವಿಸುವ ವೈಪರೀತ್ಯ ಗಳಿಗೆ ದೇಹ ಮತ್ತು ಮನಸ್ಸು ಹೇಗೋ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಆದರೆ ಮನುಷ್ಯನ ದುರಾಸೆಯಿಂದ ನಿರ್ಮಿತವಾದ ವ್ಯತ್ಯಾಸಗಳಿಗೆ ಸ್ವತ ಮನುಷ್ಯನೇ ನಿಯಂತ್ರಣ ಕಳೆದುಕೊಂಡು ಆಘಾತಕ್ಕೆ ಒಳಗಾಗುತ್ತಾನೆ……. ಆದರೆ ಈ ವಿದ್ಯಮಾನಗಳಿಗೆ ನೇರವಾಗಿ ಯಾರನ್ನೋ ಹೊಣೆ ಮಾಡುವುದು ಅಷ್ಟು ಉತ್ತಮ ಅಭಿಪ್ರಾಯವಲ್ಲ. ಏಕೆಂದರೆ ಇಡೀ ವ್ಯವಸ್ಥೆಯ ಪ್ರತಿ ಮಾನವ ಜೀವಿಯು ಇದರ ಜವಾಬ್ದಾರಿಯನ್ನು, ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ……

ಜನಸಂಖ್ಯೆಯ ಹೆಚ್ಚಳ, ಎಲ್ಲೆಂದರಲ್ಲಿ ಟಾರು – ಸಿಮೆಂಟ್ ರಸ್ತೆಗಳು, ಮಿತಿಮೀರಿದ ವಾಹನಗಳು, ಎಲ್ಲೆಲ್ಲೂ ಹವಾನಿಯಂತ್ರಿತ ವ್ಯವಸ್ಥೆ, ಹೊಗೆ ಉಗುಳುವ ಫ್ಯಾಕ್ಟರಿಗಳು, ಎಲ್ಲವನ್ನು ಸುಟ್ಟು ಭಸ್ಮ ಮಾಡುವ ಹಪಾಹಪಿತನ ಹೀಗೆ ಒಂದು ಕಡೆ ಮನುಷ್ಯ ತನ್ನ ಅನುಕೂಲಕರ ಸೌಲಭ್ಯಕ್ಕಾಗಿ ಅಭಿವೃದ್ಧಿಯ ಹೆಸರಿನಲ್ಲಿ ಈ ರೀತಿಯ ಹುಚ್ಚಾಟಗಳನ್ನು ಮಾಡುತ್ತಿದ್ದರೆ, ಮತ್ತೊಂದು ಕಡೆ ಈ ಎಲ್ಲಾ ಅಭಿವೃದ್ಧಿಯ ಮಾನದಂಡಗಳನ್ನು ಪೂರೈಸಲು ಪರಿಸರದ ಮೇಲೆ ನಿರಂತರ ಅತ್ಯಾಚಾರ ಅಂದರೆ ಕಾಡು ನಾಶ, ಕೆರೆಗಳ ನಾಶ, ಪ್ರಾಣಿ ಪಕ್ಷಿಗಳ ನಾಶ, ನಗರಗಳ ಗಿಡಮರಗಳಿಗೆ ಕೊಡಲಿ ಏಟು, ಅನಾವಶ್ಯಕ ಅಪಾರ್ಟ್ಮೆಂಟ್ ಸಂಸ್ಕೃತಿ, ತನ್ನ ಶ್ರೀಮಂತಿಕೆ ಪ್ರದರ್ಶನಕ್ಕಾಗಿ ವಾಹನಗಳ ಖರೀದಿ ಹೀಗೆ ಊಹಿಸಲು ಅಸಾಧ್ಯವಾದ ಅನೇಕ ತಪ್ಪುಗಳು, ಇದರೆಲ್ಲದರ ಪರಿಣಾಮ ಇಡೀ ವಾತಾವರಣದ ಉಷ್ಣಾಂಶ ಪ್ರತಿವರ್ಷ ಹೆಚ್ಚಾಗುತ್ತಾ ಬಂದು ಈಗ ಅದು ತನ್ನ ಮಿತಿಯನ್ನು ಮೀರಿದೆ……

ಧೂಳು, ಹೊಗೆ, ಬಿಸಿಲ ತಾಪ, ಉಷ್ಣಾಂಶ ಏರಿಕೆ ಇವೆಲ್ಲವೂ ಮನುಷ್ಯನ ದೇಹದ ಮೇಲೆ ಗಂಭೀರ ಪರಿಣಾಮ ಬೀರಿ ಮನಸ್ಸುಗಳು ಸಂಕುಚಿತಗೊಂಡು ಒಂದು ರೀತಿ ಅಸಹನೀಯ ವಾತಾವರಣದಲ್ಲಿ ಜೀವಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ….. ಈಗಲೂ ಕಾಲ ಮಿಂಚಿಲ್ಲ. ಏನನ್ನಾದರೂ ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಖಂಡಿತವಾಗಿಯು ಜಾಗತಿಕ ತಾಪಮಾನದ ಪ್ರಮಾಣವನ್ನು ಅದರೊಂದಿಗೆ ನಮ್ಮ ರಾಜ್ಯದ ಉಷ್ಣಾಂಶವನ್ನು ಕಡಿಮೆಗೊಳಿಸುವ ಅಥವಾ ಹೆಚ್ಚಾಗದಂತೆ ತಡೆಯುವ ಅನೇಕ ಸೂತ್ರಗಳು, ಕಾರ್ಯಯೋಜನೆಗಳು ಈಗಲೂ ಇವೆ…..

ಜನರಿಗೆ, ರಾಜಕೀಯ ಪಕ್ಷಗಳಿಗೆ, ಸರ್ಕಾರಗಳಿಗೆ, ಅಧಿಕಾರಿಗಳಿಗೆ ಇಚ್ಛಾಶಕ್ತಿ ಮಾತ್ರ ಬೇಕಾಗಿದೆ. ಅದಿಲ್ಲದೆ ಏನೋ ಉಡಾಫೆಯಾಗಿ ದಿನದೂಡುತ್ತಾ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಕೋವಿಡ್ – 19 ಗಿಂತ ಭಯಂಕರ ದುಷ್ಪರಿಣಾಮವನ್ನು ಈ ತಾಪಮಾನ ನಮಗೆ ಉಂಟು ಮಾಡಬಹುದು…. ಈ ನಿಟ್ಟಿನಲ್ಲಿ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ಉಷ್ಣಾಂಶ ಏರಿಕೆಯನ್ನು ತಡೆಗಟ್ಟಲು ಶೀಘ್ರವಾಗಿ ಯುದ್ಧೋಪಾದಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂಬುದನ್ನು ಅವರ ಚುನಾವಣಾ ಭರವಸೆಯ ಪಟ್ಟಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿ ರಾಜ್ಯದ ಎಲ್ಲಾ ಪ್ರಜ್ಞಾವಂತ, ಪ್ರಬುದ್ಧ ಮನಸ್ಸುಗಳು, ಪರಿಸರ ಪ್ರೇಮಿಗಳು ಇದೆ ಏಪ್ರಿಲ್ 6 ರಂದು, ಶನಿವಾರ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ,  ರಾಜಕೀಯ ಪಕ್ಷಗಳಿಗೆ ಒತ್ತಾಯಿಸುವ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಾಗತಿಕ ಮಟ್ಟದಲ್ಲಿ ಅಲ್ಲದಿದ್ದರು ನಮ್ಮ ರಾಜ್ಯದ ಮಟ್ಟಿಗಾದರೂ ಪರಿಸರ ಉಳಿಸಿ, ತಾಪಮಾನ ತಡೆಯುವ ಕೆಲಸಕ್ಕೆ ಅಳಿಲುಸೇವೆ ಮಾಡಲಾಯಿತು….

ಬರಹ :
ವಿವೇಕಾನಂದ. ಎಚ್. ಕೆ.
, 9844013068
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ

ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…

46 minutes ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ..

8 hours ago

ಭಾರತದಿಂದ ‘ಆಪರೇಷನ್ ಸಿಂಧೂರ್’ | ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ ನಾಶ | 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ |

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…

9 hours ago

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

1 day ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 day ago