ಚೀನಾದ ರಾಜಧಾನಿಯು ಕಳೆದ 5 ದಿನಗಳಲ್ಲಿ ಭೀಕರ ಮಳೆಗೆ ತುತ್ತಾಗಿದೆ. ಸುಮಾರು 140 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ. ಶನಿವಾರದಿಂದ ಬುಧವಾರ ಬೆಳಿಗ್ಗೆವರೆಗೆ 744.8 ಮಿಲಿಮೀಟರ್ ಮಳೆ ದಾಖಲಾಗಿದೆ ಎಂದು ಬೀಜಿಂಗ್ ಹವಾಮಾನ ಬ್ಯೂರೋ ತಿಳಿಸಿದೆ.
Advertisement
Beijing record’s heavy rain in at least 140 years.#Beijingfloods pic.twitter.com/nACAOt6KP0
Advertisement— theruralmirror (@ruralmirror) August 3, 2023
Advertisement
ದಾಖಲೆಯ ಮಳೆಯ ಕಾರಣದಿಂದ ಬೀಜಿಂಗ್ ಮತ್ತು ಸುತ್ತಮುತ್ತಲಿನ ಪ್ರಾಂತ್ಯದ ಹೆಬೈ ತೀವ್ರ ಪ್ರವಾಹಕ್ಕೆ ತುತ್ತಾಗಿದೆ. ನೀರು ಅಪಾಯಕಾರಿ ಮಟ್ಟಕ್ಕೆ ಏರಿತು. ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಡಿಯುವ ನೀರು ಸಾಗಿಸುವ ಪೈಪ್‌ಗಳು ಸಹ ಹಾನಿಗೊಳಗಾಗಿದೆ. ಭಾರೀ ಮಳೆಗೆ ರಸ್ತೆ, ಸಣ್ಣ ತೊರೆಗಳು ನದಿಗಳ ಮಾದರಿಯಲ್ಲಿ ನೀರು ಹರಿಯಿತು. ಬೀಜಿಂಗ್ ಸುತ್ತಮುತ್ತಲಿನ ಧಾರಾಕಾರ ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 21 ಕ್ಕೆ ಏರಿದೆ. ಹಬೈ ಪ್ರಾಂತ್ಯದಲ್ಲೂ ಭಾರೀ ಮಳೆಯ ಕಾರಣದಿಂದ ಈಗಾಗಲೇ ಸುಮಾರು 8,50,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೆಬೈ ಪ್ರಾಂತ್ಯದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯ ಹಿಂದಿನ ದಾಖಲೆಯು 1891 ರಲ್ಲಿ ದಾಖಲಾಗಿತ್ತು. ಬೀಜಿಂಗ್ ಹವಾಮಾನ ಬ್ಯೂರೋ ಪ್ರಕಾರ ಅಂದು 609 ಮಿಲಿಮೀಟರ್ ಮಳೆ ದಾಖಲಾಗಿತ್ತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement