#Beijingfloods | ತೀವ್ರ ಪ್ರವಾಹಕ್ಕೆ ತುತ್ತಾದ ಬೀಜಿಂಗ್ | ಚೀನಾದ ರಾಜಧಾನಿಯಲ್ಲಿ 140 ವರ್ಷಗಳಲ್ಲಿ ಅತೀ ಹೆಚ್ಚು ಮಳೆ | 744 ಮಿಮೀ ಮಳೆ ದಾಖಲು |

August 3, 2023
8:57 PM
ಚೀನಾದ ರಾಜಧಾನಿ ಸೇರಿದಂತೆ ಆಸುಪಾಸಿನ ಪ್ರಾಂತ್ಯಗಳು ಕಳೆದ 5  ದಿನಗಳಲ್ಲಿ ಭೀಕರ ಮಳೆಗೆ ತುತ್ತಾಗಿದೆ. ಸುಮಾರು 140  ವರ್ಷಗಳಲ್ಲಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ.

ಚೀನಾದ ರಾಜಧಾನಿಯು ಕಳೆದ 5  ದಿನಗಳಲ್ಲಿ ಭೀಕರ ಮಳೆಗೆ ತುತ್ತಾಗಿದೆ. ಸುಮಾರು 140  ವರ್ಷಗಳಲ್ಲಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ. ಶನಿವಾರದಿಂದ ಬುಧವಾರ ಬೆಳಿಗ್ಗೆವರೆಗೆ  744.8 ಮಿಲಿಮೀಟರ್  ಮಳೆ ದಾಖಲಾಗಿದೆ ಎಂದು ಬೀಜಿಂಗ್ ಹವಾಮಾನ ಬ್ಯೂರೋ  ತಿಳಿಸಿದೆ.

ದಾಖಲೆಯ ಮಳೆಯ ಕಾರಣದಿಂದ ಬೀಜಿಂಗ್ ಮತ್ತು ಸುತ್ತಮುತ್ತಲಿನ ಪ್ರಾಂತ್ಯದ ಹೆಬೈ ತೀವ್ರ ಪ್ರವಾಹಕ್ಕೆ ತುತ್ತಾಗಿದೆ. ನೀರು ಅಪಾಯಕಾರಿ ಮಟ್ಟಕ್ಕೆ ಏರಿತು. ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಡಿಯುವ ನೀರು ಸಾಗಿಸುವ ಪೈಪ್‌ಗಳು ಸಹ ಹಾನಿಗೊಳಗಾಗಿದೆ. ಭಾರೀ ಮಳೆಗೆ ರಸ್ತೆ, ಸಣ್ಣ ತೊರೆಗಳು ನದಿಗಳ ಮಾದರಿಯಲ್ಲಿ ನೀರು ಹರಿಯಿತು. ಬೀಜಿಂಗ್ ಸುತ್ತಮುತ್ತಲಿನ ಧಾರಾಕಾರ ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ ಬುಧವಾರ 21 ಕ್ಕೆ ಏರಿದೆ. ಹಬೈ ಪ್ರಾಂತ್ಯದಲ್ಲೂ ಭಾರೀ ಮಳೆಯ ಕಾರಣದಿಂದ ಈಗಾಗಲೇ ಸುಮಾರು 8,50,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೆಬೈ ಪ್ರಾಂತ್ಯದ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯ ಹಿಂದಿನ ದಾಖಲೆಯು 1891 ರಲ್ಲಿ ದಾಖಲಾಗಿತ್ತು. ಬೀಜಿಂಗ್ ಹವಾಮಾನ ಬ್ಯೂರೋ ಪ್ರಕಾರ ಅಂದು 609 ಮಿಲಿಮೀಟರ್  ಮಳೆ ದಾಖಲಾಗಿತ್ತು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ
October 7, 2026
11:35 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ
October 7, 2026
11:22 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?
October 7, 2026
12:40 PM
by: ಸಾಯಿಶೇಖರ್ ಕರಿಕಳ
ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ
October 7, 2026
7:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror