ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗದಲ್ಲಿ ಗೊಣ್ಣೆ ಹುಳ್ಳುಗಳ ಕಾಟ ಶುರುವಾಗಿದ್ದು, ರೈತರು ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮೆಕ್ಕೆಜೋಳ, ಕಬ್ಬು, ಕೊತ್ತಂಬರಿ ಸೇರಿದಂತೆ ಎಲ್ಲ ಬೆಳೆಗಳು ಕೀಟ ಬಾಧೆಗೆ ತುತ್ತಾಗಿ ಹಾಳಾಗುತ್ತಿವೆ. ಕೀಟನಾಶಕ ಸಿಂಪಡಿಸಿದರೂ ಗೊಣ್ಣೆ ಹುಳುಗಳ ನಿಯಂತ್ರಣ ಕಂಡುಬರುತ್ತಿಲ್ಲ.
ಗೊಣ್ಣೆಹುಳ್ಳು ನಿಯಂತ್ರಣಕ್ಕೆ ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ರೈತ ಮಂಜುನಾಥ ಪರಗೌಡ ಒತ್ತಾಯಿಸಿದರು. ಗೊಣ್ಣೆಹುಳು ಕಂಡುಬಂದ ಪ್ರದೇಶಗಳಲ್ಲಿ ವಿಜ್ಞಾನಿಗಳ ಜೊತೆಗೂಡಿ ಪರಿಶೀಲನೆ ನಡೆಸಲಾಗಿದ್ದು, ಅದರ ನಿಯಂತ್ರಣಕ್ಕೆ ರೈತರಿಗೆ ಸೂಕ್ತ ಸಲಹೆ ನೀಡಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಬಿ. ಚೌಹಾಣ್ ಹೇಳಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

