ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ಸುಳ್ಯ, ಪುತ್ತೂರು, ಕಡಬದಲ್ಲಿ ಸ್ವಯಂಪ್ರೇರಿತ ಬಂದ್ ನಡೆದಿದೆ. ಸುಳ್ಯದಲ್ಲಿ ಘಟನೆ ಖಂಡಿಸಿ ನಡೆದ ಪ್ರತಿಭಟನೆ ಹಾಗೂ ಟಯರ್ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ವೇಳೆ ಪೊಲೀಸರು ಹಾಗೂ ಹಿಂದೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಪುತ್ತೂರಿನಿಂದ ಬೆಳಗ್ಗೆ ಶವಯಾತ್ರೆ ಆರಂಭವಾಗಿದ್ದು ಪುತ್ತೂರಿನಲ್ಲಿ ಬೃಹತ್ ಯಾತ್ರೆ ನಡೆದಿದೆ. ಸಾವಿರಾರು ಜನರು ಭಾಗಿಯಾಗಿದ್ದಾರೆ.
ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ನೆಟ್ಟಾರು ಶವಯಾತ್ರೆ ಆರಂಭವಾಗಿದೆ. | ಸುಳ್ಯದಲ್ಲಿ ಬಿಗುವಿನ ವಾತಾರಣ | pic.twitter.com/AfCrHTVtEl
— theruralmirror (@ruralmirror) July 27, 2022
ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ದ.ಕ ಜಿಲ್ಲೆ ಉದ್ವಿಗ್ನಗೊಂಡಿದ್ದು, ಹಲವು ಕಡೆ ಬಿಗುವಿನ ವಾತಾವರಣ ಕಂಡುಬಂದಿದೆ. ಬೆಳಗ್ಗೆ ಪುತ್ತೂರಿನಿಂದ ಶವಯಾತ್ರೆ ಆರಂಭವಾಗಿದ್ದು ಪುಷ್ಪಾಲಂಕೃತವಾದ ಅಂಬುಲೆನ್ಸ್ ನಲ್ಲಿ ಮೆರವಣಿಗೆ ಆರಂಭವಾಗಿದೆ. ದರ್ಭೆ ಬಳಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು, ನಂತರ ಸವಣೂರು ಮಾರ್ಗವಾಗಿ ಬೆಳ್ಳಾರೆಗೆ ಶವಯಾತ್ರೆ ಹೊರಟಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ವಾಹನದ ಜೊತೆ ಸಾಗಿದ್ದಾರೆ.
ಸುಳ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ. ಕಡಬ, ಸುಬ್ರಹ್ಮಣ್ಯ, ಪಂಜ, ಗುತ್ತಿಗಾರು, ಸಂಪಾಜೆ, ಬೆಳ್ಳಾರೆ ಸೇರಿದಂತೆ ಎಲ್ಲೆಡೆಯೂ ಅಂಗಡಿಗಳು ಬಂದ್ ನಡೆಸಿದೆ.



