ಕಾರಿನ ಸನ್‌ರೂಫ್ ಮೂಲಕ ನಿಂತು ಬಾಲಕ ಪ್ರಯಾಣ ಮಾಡುತ್ತಿದ್ದ ವೇಳೆ ರೈಲ್ವೆ ಹೈಟ್ ಬ್ಯಾರಿಯರ್‌ಗೆ ತಲೆ ಬಡಿದು ಗಂಭೀರ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಜಿಕೆವಿಕೆ ರಸ್ತೆಯಲ್ಲಿ ನಡೆದಿದೆ.
ಪೊಲೀಸ್ ಮಾಹಿತಿ ಪ್ರಕಾರ, ಕಾರಿನಲ್ಲಿ ಸನ್‌ರೂಫ್ ಮೂಲಕ ನಿಂತಿದ್ದ ಬಾಲಕನಿಗೆ ರೈಲ್ವೆ ಹೈಟ್ ಬ್ಯಾರಿಯರ್‌ಗೆ ತಲೆ ಬಡಿದು ನೆಲಕ್ಕುರುಳಿದ. ತಕ್ಷಣವೇ ಸ್ಥಳೀಯರು ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು, ಬಾಲಕನ ತಲೆಗೆ ಗಂಭೀರ ಗಾಯವಾಗಿದೆ. ಸನ್‌ರೂಫ್‌ನಲ್ಲಿ ನಿಂತು ಹೊರಗೆ ನೋಡುವುದು ರೋಚಕವಾದರೂ ಜೀವಕ್ಕೆ ಅಪಾಯಕಾರಿಯಾಗಿದೆ. ತಂತಿ, ಬ್ಯಾರಿಯರ್ ಅಥವಾ ಇತರ ಅಡ್ಡಿಗಳಿಂದ ಗಂಭೀರ ಅಪಾಯ ಉಂಟಾಗಬಹುದು, ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪಾಲಕರು ಮಕ್ಕಳನ್ನು ವಾಹನದ ಒಳಗಡೆ ಸುರಕ್ಷಿತವಾಗಿ ಕುಳ್ಳಿರಿಸಬೇಕು, ಸನ್‌ರೂಫ್‌ನಲ್ಲಿ ನಿಲ್ಲಿಸಲು ಬಿಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..

