MIRROR FOCUS

ಜಾನುವಾರು ಮಾರಾಟಕ್ಕೆ ನಿಂತ ಬೆಂಗಳೂರಿನ ಗೆಳತಿಯರು | ನಾಲ್ಕೇ ವರ್ಷದಲ್ಲಿ ವಾರ್ಷಿಕ 550 ಕೋಟಿ ವಹಿವಾಟು ..! | ಹಿಂದಿನ ಕುಲ್ಕುಂದ ಜಾತ್ರೆಯ ವೈಭವ ಮೀರಿಸಿದ ನಾರಿಮಣೀಯರು ಯಾರು…? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಬ್ರಹ್ಮಣ್ಯ(Subrahmanya) ಕುಲ್ಕುಂದ ಜಾತ್ರೆ(Kulkunda jatre) ಅಂದ್ರೆ ಅದು ಜಾನುವಾರು ವ್ಯಾಪಾರ ಮೇಳ(Cattle Fair). ಇಲ್ಲಿ ಜಾನುವಾರುಗಳ ಕೊಡು-ಕೊಳ್ಳುವಿಕೆ ಹಿಂದಿನ ಕಾಲದಿಂದಲೂ ಭಾರಿ ಜೋರಾಗೆ ನಡೆಯುತ್ತಿತ್ತು. ಕಾಲಾನಂತರ ಈ ವ್ಯಾಪಾರ ಸ್ಥಗಿತಗೊಂಡಿತು. ಆದರೆ ಅಂತಹದ್ದೇ ಮಾದರಿಯಲ್ಲಿ ಜಾನುವಾರು ವ್ಯಾಪಾರವನ್ನು(Business) ಯಾವುದೇ ಜಾತ್ರೆ ಮಾಡದೇ ಕೇವಲ ಡಿಜಿಟಲ್‌(Digital) ಮೂಲಕ ನಡೆದಿದೆ. ಈ ವ್ಯಾಪಾರಕ್ಕೆ ಕೈ ಹಾಕಿದವರು ಬೆಂಗಳೂರು(Bengaluru) ಮೂಲದ  ಇಬ್ಬರು ಹುಡುಗಿಯರು(Girls) ಅನ್ನೋದೆ ವಿಶೇಷ. ಇದು ಸ್ಟಾರ್ಟ್ ಅಪ್(Start up) ಜಗತ್ತು. ಯಾರು ಏನು ಬೇಕಾದರು ಸ್ಟಾರ್ಟ್‌ ಮಾಡಬಹುದು. ಹಾಗಾಗಿ, ಗೆಳತಿಯರಿಬ್ಬರು ರೈತರಿಗೆ(Farmer) ಜಾನುವಾರು ಖರೀದಿ-ಮಾರಾಟಕ್ಕೆ(Cattle buy and sale) ನೆರವು ನೀಡಲು ಈ ಸ್ಟಾರ್ಟ್ ಅಪ್ ಅನ್ನು ಆರಂಭಿಸಿದರು. ಅದೀಗ ಈಗ ವಾರ್ಷಿಕ  550 ಕೋಟಿ ರೂ. ವಹಿವಾಟು ನಡೆಸುತ್ತಿದೆ.

Advertisement
Advertisement

ಉದ್ಯಮ ಪ್ರಾರಂಭಿಸುವ ಸಂದರ್ಭದಲ್ಲಿ ಸಾಕಷ್ಟು ಅಡೆತಡೆಗಳು ಎದುರಾಗೋದು ಸಹಜ. ಆದರೆ, ಅವೆಲ್ಲವನ್ನೂ ಎದುರಿಸಿ ಮುನ್ನಡೆದಾಗ ಯಶಸ್ಸು ಸಿಗುತ್ತದೆ. ಪುಟ್ಟದಾಗಿ ಉದ್ಯಮ ಪ್ರಾರಂಭಿಸಿ, ಆ ಬಳಿಕ ದೊಡ್ಡ ಯಶಸ್ಸು ಕಂಡವರು ಅನೇಕರಿದ್ದಾರೆ. ಇದು ಸ್ಟಾರ್ಟ್ ಅಪ್ ಗಳಿಗೂ ಅನ್ವಯಿಸುತ್ತದೆ. ಪುಟ್ಟದಾಗಿ ಪ್ರಾರಂಭಿಸಿದ ಸ್ಟಾರ್ಟ್ ಅಪ್ ದೊಡ್ಡ ಮಟ್ಟದ ಯಶಸ್ಸು ಕಂಡ ಅನೇಕ ನಿದರ್ಶನಗಳು ಕಾಣಸಿಗುತ್ತವೆ. ಬೆಂಗಳೂರು ಮೂಲದ  ‘ಆನಿಮಲ್'(Animall) ಕೂಡ ಇದಕ್ಕೆ ಉತ್ತಮ ನಿದರ್ಶನ.

ಬೆಂಗಳೂರು ಮೂಲದ ಈ ಸ್ಟಾರ್ಟ್ ಅಪ್ ಒಂದು ಪುಟ್ಟ ಕೋಣೆಯಲ್ಲಿ ಪ್ರಾರಂಭವಾಯಿತು. ಇಬ್ಬರು ಗೆಳತಿಯರು ಪ್ರಾರಂಭಿಸಿದ ಈ ಸಂಸ್ಥೆ ಇಂದು ವಾರ್ಷಿಕ 550 ಕೋಟಿ ರೂ. ವಹಿವಾಟು ನಡೆಸುತ್ತಿದೆ. 2019ರಲ್ಲಿ ಆನಿಮಲ್ ಪ್ರಾರಂಭವಾದ ಬಳಿಕ ಈ ತನಕ 8.5 ಲಕ್ಷ ಪ್ರಾಣಿಗಳನ್ನು ಈ ಪ್ಲಾಟ್ ಫಾರ್ಮ್ ಮೂಲಕ ಮಾರಾಟ ಮಾಡಲಾಗಿದೆ. 2019ರಲ್ಲಿ ಪ್ರಾರಂಭವಾದ ಬಳಿಕ ಆನಿಮಲ್ ಅಪ್ಲಿಕೇಷನ್ ಮೂಲಕ ಈ ತನಕ ಒಟ್ಟು ಅಂದಾಜು 4,000 ಕೋಟಿ ರೂ. ಮೌಲ್ಯದ ವಹಿವಾಟು ನಡೆದಿದೆ.

ರೈತರು ಹಾಗೂ ಅವರ ಜಾನುವಾರುಗಳ ನಡುವಿನ ಬಾಂಧವ್ಯ ಭಾರತದ ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುತ್ತದೆ. ಆದರೂ ದೇಶದಲ್ಲಿ ಜಾನುವಾರು ಮಾರುಕಟ್ಟೆ ಮಾತ್ರ ಸಂಘಟಿತ ರೂಪದಲ್ಲಿ ಕಾಣಸಿಗೋದಿಲ್ಲ. ಇದನ್ನು ಅರ್ಥೈಸಿಕೊಂಡ ಐಐಟಿ ದೆಹಲಿ ಹಳೆಯ ವಿದ್ಯಾರ್ಥಿಗಳಾದ ನೀತು ಯಾದವ್ ಹಾಗೂ ಕೀರ್ತಿ ಜಾಂಗ್ರ ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ಜಾನುವಾರು ಮಾರಾಟಕ್ಕೆ ಅವಕಾಶ ಕಲ್ಪಿಸುವ ಹೊಸ ಯೋಚನೆಯೊಂದನ್ನು ಮಾಡಿದರು. ಇದರ ಫಲವಾಗಿ ‘ಆನಿಮಲ್’ ಎಂಬ ಸಂಸ್ಥೆ ರೂಪ ತಾಳಿತು. ಗುರುಗ್ರಾಮವನ್ನು ಮೂಲವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಹಾಲಿನ ಉದ್ಯಮದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿದೆ.

ಆನಿಮಲ್ ಸಂಸ್ಥೆಯನ್ನು ಸ್ನೇಹಿತೆಯರಾದ ನೀತು ಯಾದವ್ ಹಾಗೂ ಕೀರ್ತಿ ಜಂಗ್ರ ಜೊತೆಗೆ ಅನುರಾಗ್ ಬಿಸೋಯಿ, ಲಿಬಿನ್ ವಿ ಬಾಬು, ನೀತು ವೈ ಹಾಗೂ ಸಂದೀಪ್ ಮಹಾಪಾತ್ರ ಎಂಬ ಆರು ಮಂದಿ ಸೇರಿ ಸ್ಥಾಪಿಸಿದರು. ಈ ಸಂಸ್ಥೆಯ ಏಂಜೆಲ್ ಹೂಡಿಕೆದಾರರು ಶಾದಿ ಡಾಟ್ ಕಾಮ್ ಸ್ಥಾಪಕರಾದ ಅನುಪಮ್ ಮಿತ್ತಲ್, ಝೊಮ್ಯಾಟೋ ಸ್ಥಾಪಕ ಹಾಗೂ ಸಿಇಒ ದೀಪೇಂದ್ರ ಗೋಯೆಲ್ . ಇವರ ಜೊತೆಗೆ ಅಂಜಲಿ ಬನ್ಸಾಲ್, ಮೋಹಿತ್ ಕುಮಾರ್ ಹಾಗೂ ಶಹಿಲ್ ಬರೌ ಕೂಡ ಸೇರಿದ್ದಾರೆ.

Advertisement

ಕೇವಲ ಮೂರು ತಿಂಗಳ ಅವಧಿಯಲ್ಲಿ 50 ಲಕ್ಷ ರೂ. ಬಂಡವಾಳದೊಂದಿಗೆ ನೀತು ಹಾಗೂ ಕೀರ್ತಿ 2019ರ ನವೆಂಬರ್ ನಲ್ಲಿ ‘ಆನಿಮಲ್’ ಸ್ಟಾರ್ಟ್ ಅಪ್ ಪ್ರಾರಂಭಿಸಿದರು. ಇವರಿಬ್ಬರ ತಂಡಕ್ಕೆ ಅನುರಾಗ್ ಬಿಸೋಯ್ ಹಾಗೂ ಲಿಬಿನ್ ವಿ. ಬಾಬು ಸೇರ್ಪಡೆಗೊಂಡರು.  ಹೈನುಗಾರರ ಜೀವನಮಟ್ಟ ಸುಧಾರಿಸುವ ಹಾಗೂ ಜಾನುವಾರುಗಳ ಮಾರಾಟವನ್ನು ಸರಳಗೊಳಿಸೋದು ಆನಿಮಲ್ ಸಂಸ್ಥೆ ಉದ್ದೇಶ. ‘

ಆನಿಮಲ್’ ಸಂಸ್ಥೆಯ ಪೂರ್ಣ ಹೆಸರು ‘ಆನಿಮಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್’. ಹಸುಗಳು ಹಾಗೂ ಎಮ್ಮೆಗಳ ಖರೀದಿ ಹಾಗೂ ಮಾರಾಟದ ಆನ್ ಲೈನ್ ವ್ಯವಹಾರಕ್ಕೆ ಈ ಪ್ಲಾರ್ಟ್ ಫಾರ್ಮ್ ಅವಕಾಶ ಕಲ್ಪಿಸಿದೆ. ಇದು ಜಾನುವಾರುಗಳ ಟ್ರೇಡಿಂಗ್ ಹಾಗೂ ‘ಲಿಸ್ಟಿಂಗ್ ಗೆ’ ಇರುವ ಆನ್ ಲೈನ್ ಮಾರುಕಟ್ಟೆ ಆಗಿದೆ. ಈ ಅಪ್ಲಿಕೇಷನ್ ಮೂಲಕ ನೀವು ಇರುವ ಪ್ರದೇಶದ 100 ಕಿ.ಮೀ. ವ್ಯಾಪ್ತಿಯಲ್ಲಿ ಮಾರಾಟಕ್ಕಿರುವ ಪ್ರಾಣಿಗಳ ಹಾಗೂ ಖರೀದಿದಾರರ ಮಾಹಿತಿ ಪಡೆಯಬಹುದು. ಅವರೊಂದಿಗೆ ಸಂಪರ್ಕ ಕೂಡ ಸಾಧಿಸಬಹುದು.

ಆನಿಮಲ್ ಪ್ರಾರಂಭಿಕ ದಿನಗಳಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ನಂತರದ ದಿನಗಳಲ್ಲಿ ಎಮ್ಮೆಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಜನರು ಇವರಿಗೆ ಹೆಚ್ಚಿನ ಆರ್ಡರ್ ನೀಡಲು ಪ್ರಾರಂಭಿಸಿದರು. ಇದರಿಂದ ಉದ್ಯಮದಲ್ಲಿ ಸಾಕಷ್ಟು ಪ್ರಗತಿ ಕಂಡುಬಂತು. ಈ ಸಂಸ್ಥೆಯ ಏಂಜೆಲ್ ಹೂಡಿಕೆದಾರರಲ್ಲಿ ಶಾದಿ ಡಾಟ್ ಕಾಮ್ ಸ್ಥಾಪಕರಾದ ಅನುಪಮ್ ಮಿತ್ತಲ್, ಝೊಮ್ಯಾಟೋ ಸ್ಥಾಪಕ ಹಾಗೂ ಸಿಇಒ ದೀಪೇಂದ್ರ ಗೋಯೆಲ್ . ಇವರ ಜೊತೆಗೆ ಅಂಜಲಿ ಬನ್ಸಾಲ್, ಮೋಹಿತ್ ಕುಮಾರ್ ಹಾಗೂ ಶಹಿಲ್ ಬರೌ ಕೂಡ ಸೇರಿದ್ದಾರೆ. ಪ್ರಸ್ತುತ ಅಂದಾಜು 80ಲಕ್ಷ ರೈತರು ಆನಿಮಲ್ ಜೊತೆಗೆ ತೊಡಗಿಕೊಂಡಿದ್ದಾರೆ. ಆನಿಮಲ್ ನಿಂದ ಈ ತನಕ  850,000 ಪ್ರಾಣಿಗಳನ್ನು ಖರೀದಿಸಲಾಗಿದೆ. ಅಲ್ಲದೆ, ಆನಿಮಲ್ ಮೂಲಕ ಪ್ರತಿ ತಿಂಗಳು ಅಂದಾಜು 350 ಕೋಟಿ ರೂ. ವಹಿವಾಟು ನಡೆಸಲಾಗುತ್ತಿದೆ.

  • ಅಂತರ್ಜಾಲ ಮಾಹಿತಿ

A remarkable rise in revenue has resulted from the establishment of the online cattle marketplace “Animall” by two IIT Delhi students. According to Startup Pedia, the platform’s revenue was estimated at 7.4 crore for FY22 and has now increased to an astounding Rs 565 crore.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪುಟ್ಟ ಚಿಟ್ಟೆ | ಭಾವ ತಟ್ಟಿದ ದಿಟ್ಟೆ

ಬಣ್ಣದ ಜೀವಿಗಳನ್ನು ಸೃಷ್ಟಿಸಿರುವ ಜಡವನ್ನೂ ಜೀವವನ್ನಾಗಿ ಪರಿವರ್ತಿಸಬಲ್ಲ ತಾಕತ್ತುಳ್ಳ ಪರಮಾತ್ಮನೇ ಅಲ್ವೇ ಪರಮಕಲಾವಿದ?

5 minutes ago

ಸಂತೆಯಲ್ಲಿ ಸಾಗುತ್ತಿರುವ ನಾವು

ಇಂದಿನ ಜಗತ್ತಿನಲ್ಲಿ ನಿರ್ದಿಷ್ಟ ಜೀವನ ದೃಷ್ಠಿಯನ್ನು ಹೊಂದಿರಲು ಸಾಧ್ಯವಿಲ್ಲ. ಅದು ಆಗಾಗ ಬದಲಾಗುವ…

2 hours ago

ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮೀನುಗಾರಿಕೆ ವಲಯದ ಪ್ರಗತಿ ಹಾಗೂ ಭವಿಷ್ಯದ…

5 hours ago

ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ |

ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಪ್ರಸ್ತುತ ಕೃಷಿ ಉತ್ಪಾದನೆಯ…

5 hours ago

ಮೇ 18 ರ ನಂತರ ರಾಹು ಕಾಟದಿಂದ ಈ 5 ರಾಶಿಯವರಿಗೆ ಕಷ್ಟಗಳು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago

ಅಡಿಕೆ ಹಾಳೆಯ ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ | ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳೇನು..?

ಅಡಿಕೆ ನಿಷೇಧದ ತೂಗುಗತ್ತಿಯ ಮೇಲೆಯೇ ಉದ್ಯಮವನ್ನು ಮುನ್ನಡೆಸಬೇಕಾಗುತ್ತದೆ.ಇನ್ನಾದರೂ ಕಠಿಣ ಪರಿಶ್ರಮದೊಂದಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ…

15 hours ago