ಕಾಡುಮಲ್ಲೇಶ್ವರಂನಲ್ಲಿ ನ.12 ರಿಂದ ಕಡಲೆಕಾಯಿ ಪರಿಷೆ | ಕಡಲೆಕಾಯಿ ಮಾರಾಟಕ್ಕೆ 400 ಮಳಿಗೆ : ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಕಲ ವ್ಯವಸ್ಥೆ – ಬಿ.ಕೆ. ಶಿವರಾಂ

November 10, 2022
10:43 PM

ಕಾಡು ಮಲ್ಲೇಶ್ವರ ಬಳಗದಿಂದ ಇದೇ 12 ರಿಂದ 14 ರ ವರೆಗೆ ಮೂರು ದಿನಗಳ ಕಾಲ ಮಲ್ಲೇಶ್ವರಂನ ಕಾಡು ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ 6ನೇ ವಿಜೃಂಭಣೆಯ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.

Advertisement

ಬೆಂಗಳೂರು ನಗರದ ಜನರಿಗೆ ಗ್ರಾಮೀಣ ಸಂಸ್ಕೃತಿ, ಜೀವನ ಪದ್ಧತಿಯನ್ನು ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ಕಡಲೆಕಾಯಿ ಪರಿಷೆ ಆಯೋಜಿಸುತ್ತಿದ್ದು, ಕಾರ್ತಿಕ ಮಾಸದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಪರಿಷೆ ನಡೆಯಲಿದೆ ಎಂದು ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಮತ್ತು ಸಾಮಾಜಿಕ ಕಾರ್ಯಕರ್ತ ಅನೂಪ್ ಅಯ್ಯಂಗಾರ್, ಕಾಡು ಮಲ್ಲೇಶ್ವರ ದೇವಸ್ಥಾನ ಬಳಗದ ಕಾರ್ಯಕರ್ತ ಚಂದ್ರಶೇಖರ ನಾಯ್ಡು ಮಾಹಿತಿ ನೀಡಿದರು.

ಬಿ.ಕೆ. ಶಿವರಾಂ ಮಾತನಾಡಿ, ಆಧುನಿಕ ಬದುಕಿನಲ್ಲಿ ಜಾತ್ರೆ, ಸಂತೆ ಕಣ್ಮರೆಯಾಗುತ್ತಿದ್ದು, ಇದರಿಂದ ಕೃಷಿಕರು ಬೆಳೆದ ವಸ್ತುಗಳ ಮಾರಾಟ ಕುಸಿತವಾಗಿದೆ. ಈ ಬಾರಿ ಆಯೋಜಿಸಿರುವ ಪರಿಷೆಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ರೈತರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಇದಕ್ಕಾಗಿ 400 ಮಳಿಗೆಗಳಿಗೆ ಅವಕಾಶ ಕಲ್ಪಿಸಿದ್ದು, ರೈತರು ತಾವು ಬೆಳೆದ ಕಡಲೆಕಾಯಿ, ಅವರೆಕಾಯಿ ಮಾರಾಟ ಮಾಡಲು, ಮಂಡ್ಯ ರೈತರಿಗೆ ಬೆಲ್ಲದ ಅಂಗಡಿ ತೆರೆಯಲು, ಎಲ್ಲಾ ಕೃಷಿ ಉತ್ಪನಗಳ ಮಾರಾಟಕ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅಲೆಮಾರಿ ಜನಾಂಗ, ಬೀದಿ ಬದಿ ವ್ಯಾಪಾರಿಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ಮಳಿಗೆಗಳು ಉಚಿತವಾಗಿದೆ. 8ನೇ ಕ್ರಾಸ್ ನಿಂದ 16 ನೇ ಕ್ರಾಸ್ ವರೆಗೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ತಿಂಡಿ, ತಿನಿಸು ತಯಾರಿಸಲು ಫುಡ್ ಕೋರ್ಟ್ ನಿರ್ಮಿಸಲಾಗುತ್ತಿದೆ. ಕಾಡು ಮಲ್ಲೇಶ್ವರ ದೇವಾಸ್ಥಾನದಲ್ಲಿ ಕಡಲೆಕಾಯಿಯಿಂದ ಆಲಂಕಾರ ಮಾಡಲಾಗುತ್ತಿದೆ. ಜೊತೆಗೆ ಆಂಧ್ರ ಪ್ರದೇಶದ ಓಂಗೋಲ್ ನಿಂದ ಎರಡು ದೇಶೀಯ ಗೂಳಿಗಳನ್ನು ತರಲಾಗಿದೆ. ಈ ಗೂಳಿಗಳನ್ನು ಕಾಡು ಮಲ್ಲೇಶ್ವರದಲ್ಲಿ ಸಾಕಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ರೈತರ ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿಯೇ ವಿದ್ಯುತ್ ನೀಡಲು ತೀರ್ಮಾನ
May 4, 2025
10:37 PM
by: The Rural Mirror ಸುದ್ದಿಜಾಲ
ಹೀಟ್‌ವೇವ್‌ ಸಂಕಷ್ಟದಲ್ಲಿ ತೆಲಂಗಾಣ-ಹೈದರಾಬಾದ್‌ |
May 4, 2025
10:33 PM
by: The Rural Mirror ಸುದ್ದಿಜಾಲ
ಜೀವನದಿ ಕಾವೇರಿ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆ | ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಚಾಲನೆ
May 4, 2025
2:35 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04-05-2025 | ಕೆಲವು ಕಡೆ ಮಳೆ ನಿರೀಕ್ಷೆ | ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣ |
May 4, 2025
11:59 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group