ಕಾಡು ಮಲ್ಲೇಶ್ವರ ಬಳಗದಿಂದ ಇದೇ 12 ರಿಂದ 14 ರ ವರೆಗೆ ಮೂರು ದಿನಗಳ ಕಾಲ ಮಲ್ಲೇಶ್ವರಂನ ಕಾಡು ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ 6ನೇ ವಿಜೃಂಭಣೆಯ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.
ಬೆಂಗಳೂರು ನಗರದ ಜನರಿಗೆ ಗ್ರಾಮೀಣ ಸಂಸ್ಕೃತಿ, ಜೀವನ ಪದ್ಧತಿಯನ್ನು ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ಕಡಲೆಕಾಯಿ ಪರಿಷೆ ಆಯೋಜಿಸುತ್ತಿದ್ದು, ಕಾರ್ತಿಕ ಮಾಸದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಪರಿಷೆ ನಡೆಯಲಿದೆ ಎಂದು ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಮತ್ತು ಸಾಮಾಜಿಕ ಕಾರ್ಯಕರ್ತ ಅನೂಪ್ ಅಯ್ಯಂಗಾರ್, ಕಾಡು ಮಲ್ಲೇಶ್ವರ ದೇವಸ್ಥಾನ ಬಳಗದ ಕಾರ್ಯಕರ್ತ ಚಂದ್ರಶೇಖರ ನಾಯ್ಡು ಮಾಹಿತಿ ನೀಡಿದರು.
ಬಿ.ಕೆ. ಶಿವರಾಂ ಮಾತನಾಡಿ, ಆಧುನಿಕ ಬದುಕಿನಲ್ಲಿ ಜಾತ್ರೆ, ಸಂತೆ ಕಣ್ಮರೆಯಾಗುತ್ತಿದ್ದು, ಇದರಿಂದ ಕೃಷಿಕರು ಬೆಳೆದ ವಸ್ತುಗಳ ಮಾರಾಟ ಕುಸಿತವಾಗಿದೆ. ಈ ಬಾರಿ ಆಯೋಜಿಸಿರುವ ಪರಿಷೆಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ರೈತರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಇದಕ್ಕಾಗಿ 400 ಮಳಿಗೆಗಳಿಗೆ ಅವಕಾಶ ಕಲ್ಪಿಸಿದ್ದು, ರೈತರು ತಾವು ಬೆಳೆದ ಕಡಲೆಕಾಯಿ, ಅವರೆಕಾಯಿ ಮಾರಾಟ ಮಾಡಲು, ಮಂಡ್ಯ ರೈತರಿಗೆ ಬೆಲ್ಲದ ಅಂಗಡಿ ತೆರೆಯಲು, ಎಲ್ಲಾ ಕೃಷಿ ಉತ್ಪನಗಳ ಮಾರಾಟಕ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಲೆಮಾರಿ ಜನಾಂಗ, ಬೀದಿ ಬದಿ ವ್ಯಾಪಾರಿಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ಮಳಿಗೆಗಳು ಉಚಿತವಾಗಿದೆ. 8ನೇ ಕ್ರಾಸ್ ನಿಂದ 16 ನೇ ಕ್ರಾಸ್ ವರೆಗೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ತಿಂಡಿ, ತಿನಿಸು ತಯಾರಿಸಲು ಫುಡ್ ಕೋರ್ಟ್ ನಿರ್ಮಿಸಲಾಗುತ್ತಿದೆ. ಕಾಡು ಮಲ್ಲೇಶ್ವರ ದೇವಾಸ್ಥಾನದಲ್ಲಿ ಕಡಲೆಕಾಯಿಯಿಂದ ಆಲಂಕಾರ ಮಾಡಲಾಗುತ್ತಿದೆ. ಜೊತೆಗೆ ಆಂಧ್ರ ಪ್ರದೇಶದ ಓಂಗೋಲ್ ನಿಂದ ಎರಡು ದೇಶೀಯ ಗೂಳಿಗಳನ್ನು ತರಲಾಗಿದೆ. ಈ ಗೂಳಿಗಳನ್ನು ಕಾಡು ಮಲ್ಲೇಶ್ವರದಲ್ಲಿ ಸಾಕಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…