ರಾಜ್ಯದ ಎಲ್ಲ ಜಿಲ್ಲೆಗಳ ಆರ್ಥಿಕ ಸಮೀಕ್ಷೆಯನ್ನು ನಡೆಸಿ ತಲಾ ಆದಾಯವನ್ನೂ ಪ್ರಕಟಿಸಲಾಗಿದೆ. ಈ ಪೈಕಿ ರಾಜ್ಯ ರಾಜಧಾನಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಇಡೀ ದೇಶದಲ್ಲೇ ಆರ್ಥಿಕವಾಗಿ ಮುಂಚೂಣಿಯಲ್ಲಿರುವ ರಾಜ್ಯ, ಕರ್ನಾಟಕದಲ್ಲಿ ಯಾವುದೇ ಯೋಜನೆ ಘೋಷಿಸಿದರೂ ಇಡೀ ದೇಶ ಒಮ್ಮೆ ತಿರುಗಿ ನೋಡುತ್ತೆ. ಕರ್ನಾಟಕದಲ್ಲೂ ಬೆಂಗಳೂರು ನಗರ ದೇಶದ ಇತರ ನಗರಗಳಿಗಿಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ.
ಅಂದ ಹಾಗೆ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಇಡೀ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ತಲಾ ಆದಾಯ 3,70,834 ರೂ. ಆಗಿದೆ. ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿ ಉಡುಪಿಯಿದೆ. ಚಿಕ್ಕಮಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು 4 ಮತ್ತು 5ನೇ ಸ್ಥಾನದಲ್ಲಿವೆ. ಇನ್ನು ತಲಾ ಆದಾಯದಲ್ಲಿ ಕೊನೆಯ ಐದನೇ ಸ್ಥಾನದಲ್ಲಿ ಯಾದಗಿರಿ, ಕೊಪ್ಪಳ, ಬೆಳಗಾವಿ, ಬೀದರ್, ಕಲಬುರಗಿ ಜಿಲ್ಲೆಗಳಿವೆ.
ಕರ್ನಾಟಕ ಸರ್ಕಾರದ 2022-23 ರ ಕರ್ನಾಟಕದ ಆರ್ಥಿಕ ಸಮೀಕ್ಷೆಯ ಪ್ರಕಾರ ಕರ್ನಾಟಕದ ತಲಾ ಆದಾಯ 3,01,673 ಲಕ್ಷ. ಶಿಕ್ಷಣ, ಕೃಷಿ, ಕೈಗಾರಿಕೆಗಳು, ಸೇವೆಗಳು ಮತ್ತು ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳ ಆಧಾರದ ಮೇಲೆ ಈ ಆರ್ಥಿಕ ಸಮೀಕ್ಷೆ ಸಿದ್ಧಪಡಿಸಲಾಗಿದೆ.
ಅಂದ ಹಾಗೆ ಈ ಆರ್ಥಿಕ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ತಲಾ ಆದಾಯವನ್ನೂ ಸಹ ಪ್ರಕಟಿಸಲಾಗಿದೆ. ಈ ಪೈಕಿ ರಾಜ್ಯ ರಾಜಧಾನಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ.
ಬೆಂಗಳೂರು ನಗರ ಜಿಲ್ಲೆಯ ತಲಾ ಆದಾಯ 6,21,131 ಲಕ್ಷವಾಗಿದೆ. ಅಂದರೆ ಬೆಂಗಳೂರು ನಗರ ನಿವಾಸಿಗಳ ತಲಾ ಆದಾಯ 6,21,131 ಲಕ್ಷವಾಗಿದೆ. ಬೆಂಗಳೂರನ್ನು ಬಿಟ್ಟು ರಾಜ್ಯದ ಇತರ ಯಾವ ಜಿಲ್ಲೆಯ ಆದಾಯವೂ 4 ಲಕ್ಷ ದಾಟಿಲ್ಲ.
ಇಡೀ ರಾಜ್ಯದಲ್ಲಿ ಕಲಬುರಗಿ ಜಿಲ್ಲೆಯ ತಲಾ ಆದಾಯ ಅತೀ ಕಡಿಮೆಯಿದೆ. ಕಲ್ಯಾಣ ಕರ್ನಾಟಕ ಕೇಂದ್ರವಾದ ಕಲಬುರಗಿಯ ತಲಾ ಆದಾಯ 1,24,998 ರೂ. ಆಗಿದೆ.