ಒಂದು ಬದಿಯಲ್ಲಿ ವಿಭಿನ್ನ ರೀತಿಯ ಮಾವಿನ ಹಣ್ಣುಗಳು, ಮತ್ತೊಂದು ಬದಿಯಲ್ಲಿ ಘಮ್ ಎನ್ನುವ ಹಲಸಿನ ಹಣ್ಣುಗಳು. ನಿಮಗೆ ಯಾವುದು ಬೇಕೋ ಅದನ್ನು ಖರೀದಿ ಮಾಡಬಹುದು. ಈ ಅವಕಾಶ ಸಿಗುವುದು ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಮಾವಿನ ಮೇಳದಲ್ಲಿ. ಈ ಮೇಳದಲ್ಲಿ ಯಾವೆಲ್ಲ ಬಗೆಯ ಹಣ್ಣುಗಳಿದೆ ಹಾಗೂ ಬೆಲೆಗಳೆಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣನ್ನು ಇಷ್ಟ ಪಡದವರು ಯಾರಿದ್ದಾರೆ ಹೇಳಿ? ಅದರ ರುಚಿ ಚಪ್ಪರಿಸಿದವರೇ ಹೆಚ್ಚು. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸಿಗುವ ಈ ಹಣ್ಣು ಎಂದರೆ ಸಾಕು ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಒಳ್ಳೆಯ ತಳಿಯ ಮಾವು ಹುಡುಕಲು ಪರದಾಡಬೇಕಾಗುತ್ತದೆ. ಆದರೆ ಈ ಮಾವಿನ ಮೇಳದ ಕಾರಣದಿಂದ ಒಂದೇ ಸೂರಿನಡಿ ಎಲ್ಲವೂ ಸಿಗುತ್ತದೆ.
ಸಸ್ಯಕಾಶಿ ಲಾಲ್ಬಾಗ್ನಲ್ಲಿ ಪ್ರತಿವರ್ಷದಂತೆ ಈ ವರ್ಷ ಸಹ ಮಾವು ಹಾಗೂ ಹಲಸಿನ ಮೇಳ ಆರಂಭವಾಗಿದ್ದು, ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ತೋಟಾಗಾರಿಕೆ ಇಲಾಖೆ ಈ ಮೇಳವನ್ನು ಆಯೋಜಿಸುತ್ತದೆ. ವೆರೈಟಿ ಮಾವು ಹಾಗೂ ಹಲಸಿನ ಹಣ್ಣುಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ.
ರಾಜ್ಯದ ನಾನಾ ಕಡೆಯಿಂದ ರೈತರು ತಾವು ಬೆಳೆದಿರುವ ಮಾವು ಹಲಸಿನ ಹಣ್ಣನ್ನು ಇಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ಇನ್ನು ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಅಂತಾ ಹಣ್ಣಿನ ದರವನ್ನ ತೋಟಾಗಾರಿಕೆ ಇಲಾಖೆಯೇ ನಿಗದಿ ಮಾಡಿರುತ್ತದೆ.
ಅಕಾಲಿಕ ಮಳೆ ಮತ್ತು ಬಿಸಿಗಾಳಿಯಿಂದ ರಾಜ್ಯದಲ್ಲಿ ಮಾವಿನ ಇಳುವರಿ ಕಡಿಮೆಯಾಗಿತ್ತು, ಹಾಗಾಗಿ ಈ ಮಳೆ ಮಾವಿನ ಮೇಳ ನಡೆಯುವುದೇ ಅನುಮಾನ ಎನ್ನಲಾಗುತ್ತಿತ್ತು. ಆದರೆ ಸದ್ಯ ಮೇಳ ಆರಂಭವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೇಡಿಕೆ ಪೂರೈಸುವುದು ಕಷ್ಟವಾಗುತ್ತದೆ ಎಂದು ಹಾಪ್ಕಾಮ್ಸ್, ಅಧಿಕಾರಿಗಳು ತಿಳಿಸಿದ್ದಾರೆ.
ರಸ್ಪುರಿ, ಬಾದಾಮಿ, ಮತ್ತು ಅಲ್ಫೋನ್ಸೋ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದ್ದು, ಮಲ್ಲಿಕಾ, ಬಂಗನಪಲ್ಲಿ ಮತ್ತು ಸಿಂಧೂರ ಹಣ್ಣು ಹೆಚ್ಚಾಗಿ ಸಿಗುತ್ತಿದೆ. ಇನ್ನು ಈ ಮೇಳದಲ್ಲಿ ಲಭ್ಯವಿರುವ ಪ್ರತಿಯೊಂದು ಹಣ್ಣನ್ನು ಸಹ ನಗರದ ಪ್ರತಿಯೊಂದು ಹಾಪ್ಕಾಮ್ಸ್ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಇಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣು ಮೇಳದಲ್ಲಿ ಸಿಗಲಿದ್ದು, ವಿವಿಧ ದರಗಳನ್ನು ನಿಗಧಿ ಮಾಡಿದೆ.
ಈ ಬಾರಿ ಮೇಳದಲ್ಲಿ ಮಾವಿನ ಹಣ್ಣು ಕೆಜಿಗೆ ₹32 ರಿಂದ ಸಹ ಲಭ್ಯವಿದ್ದು ₹215 ವರೆಗೆ ಹಣ್ಣುಗಳ ಬೆಲೆ ಇರುತ್ತದೆ. ಇನ್ನು ಇಲ್ಲಿ ಹಲಸಿನ ಹಣ್ಣು ಕೆಜಿಗೆ ₹25 ರೂ ನಿಗದಿಯಾಗಿದ್ದು, ಹಲಸಿನ ಹಣ್ಣಿನಲ್ಲಿ ಸಹ ಹಲವಾರು ರೀತಿಯ ವಿಧಗಳು ಇಲ್ಲಿ ನಿಮಗೆ ಸಿಗುತ್ತದೆ.
ಇನ್ನು ಮೇಳದಲ್ಲಿ ಹಣ್ಣುಗಳಾದ ಇಮಾಮ್ ಪಸಂದ್ – 149, ಮಲ್ಲಿಕಾ – 108, ಬಾದಾಮಿ – 132, ಸಕ್ಕರೆ ಗುತ್ತಿ – 122, ಸಿಂಧೂರ – 52, ರಸ್ಪುರಿ – 112, ದಶೆರಿ – 126, ಕಲಾಪಡ- 139, ಮಲ್ಗೋವಾ – 144, ತೋತಾಪುರಿ – 31, ಅಮರಪಲ್ಲಿ – 126, ಬೈಗಂಪಲ್ಲಿ-52, ಕೇಸರ್ -104 ರೂಪಾಯಿ ಎಂದು ನಿಗದಿ ಮಾಡಲಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement