Opinion

ಮೇವು ಬೆಳೆಗಳ ಕುರಿತ ಅತ್ಯುತ್ತಮ ಮಾಹಿತಿ | ಮೇವು ಹುಲ್ಲನ್ನು ಹೇಗೆ ಬೆಳೆದರೆ ಉತ್ತಮ..? | ಏನು ಗೊಬ್ಬರ ಕೊಟ್ಟರೆ ಒಳ್ಳೆಯದು..?

Share

ಬಹುತೇಕ ಮೇವು ಬೆಳೆಗಳು(fodder crops) ಹೆಸರು ಬೇರೆ ಬೇರೆಯಾದರೂ ಗುಣ ಒಂದೇ. ನೀರಿನ ಲಭ್ಯತೆ, ಗೊಬ್ಬರ ನೀಡಿಕೆ(Water availability, fertilizer application) ಮೇವಿನ ಗುಣಮಟ್ಟದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಕಟಾವು ತಡವಾದರೆ ಬಹುತೇಕ ಎಲ್ಲ ಮೇವಿನ ಬೆಳೆಯೂ ಕಡ್ಡಿಯಾಗುತ್ತದೆ. ಬಹುವಾರ್ಷಿಕ ಮೇವಿನ ಬೆಳೆಗಳನ್ನು(perennial fodder crops) ರೈತರು(Farmer) ಆಯ್ಕೆ ಮಾಡಿಕೊಳ್ಳುವಾಗ ಬುಡದಲ್ಲಿ ಹೆಚ್ಚು ಚಿಪ್ಪು ಒಡೆದು ದಡಿ ಅಥವಾ ಕಾಂಡ(stem) ಗಟ್ಟಿಯಾಗದ ತಳಿ ಆಯ್ಕೆ ಮಾಡುವುದೊಳಿತು.

Advertisement

ನನಗೊಬ್ಬರು ಹಸಿ ಹುಲ್ಲು ಕೊಡುತ್ತೇನೆ ಎಂದು ಕರೆದಿದ್ದರು. ಹೋಗಿ ನೋಡಿದರೆ ಹುಲ್ಲು ಹದಿನೈದು ಅಡಿ ಎತ್ತರವಿದೆ. ವಿಪರ್ಯಾಸವೆಂದರೆ ಮೇಲಿನ ಐದು ಅಡಿ ಹುಲ್ಲು ಬಿಟ್ಟರೆ ಉಳಿದ ಕಾಂಡ ಗಟ್ಟಿಯಾಗಿ ಹೋಗಿದೆ. ಇಂತಹ ಹುಲ್ಲನ್ನು ಸಂಸ್ಕರಣೆ ಮಾಡಿ ಮೇವಾಗಿ ಬಳಸಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ದೇಸಿ ತಳಿ ಹಸುಗಳು ಈ ಗಟ್ಟಿ ಕಾಂಡವನ್ನು ಪುಡಿ ಮಾಡಿದರೂ ತಿನ್ನುವುದಿಲ್ಲ. ರೈತ ಬಾಂಧವರು,.. ಮೇವಿನ ತಳಿಗಿಂತ ಮೇವನ್ನು ಹಂತ ಹಂತವಾಗಿ ಕಟಾವು ಮಾಡುವುದನ್ನು ಅಂದಾಜು ಮಾಡಿ ಮೇವಿನ ಬೆಳೆ ನೆಡಬೇಕು. ಮಂಗನ ಕಾಟ ಇರುವ ಕಡೆಯಲ್ಲಿ ಈ ಮೇವಿನ ಸುಳಿಯನ್ನ ಮಂಗ ಮುರಿಯುತ್ತದೆ ಎಂಬುದನ್ನು ಗಮನಿಸಬೇಕು.

ಮೇವಿನ ಬೆಳೆಗೆ ಸ್ಲರಿ ಅತ್ಯುತ್ತಮ ಗೊಬ್ಬರ: ಸ್ಲರಿಯನ್ನು ಆಗಾಗ ಕೊಟ್ಟರೆ ಅತ್ಯುತ್ತಮ. ಮೇವಿನ ಬೆಳೆಯನ್ನು ಹೆಚ್ಚು ಎತ್ತರವಾಗಿ ಬೆಳೆಯಗೊಡದೇ ಹೆಚ್ಚು ಅಗಲವಾಗಿ ಚಿಪ್ಪು ಒಡೆಯುವಂತೆ ಬೆಳೆಸಬೇಕು. ಮೇವಿನ ಬೆಳೆಗೆ ನೀರಾವರಿಯನ್ನು ವ್ಯವಸ್ಥೆ ಮಾಡಬೇಕು. ಕೆಲವು ಮೇವಿನ ಬೆಳೆಯನ್ನು ತಜ್ಞರು ಹೆಚ್ಚು ನಿರಂತರವಾಗಿ ಪಶುಗಳಿಗೆ ನೀಡಬಾರದು ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಬರೀ ಒಂದೇ ಬಗೆಯ ಮೇವನ್ನು ನೀಡುವುದರ ಬದಲಾಗಿ ಸ್ವಲ್ಪ ಒಣ ಹುಲ್ಲನ್ನು ಪಶುಗಳಿಗೆ ನೀಡುವುದು ಉತ್ತಮ. ಅನುಭವಿಗಳ ಪ್ರಕಾರ ನೇಪಿಯರ್ ಮುಂತಾದ ಮೇವಿನ ಬೆಳೆಗಳು ಸೈಲೇಜ್ ಗೆ ಉತ್ತಮವಲ್ಲ. ಈ ಬಗೆಯ ಮೇವಿನ ಬೆಳೆಗಳನ್ನು ಹೆಚ್ಚು ದಿನ ಸ್ಟೋರೇಜ್ ಮಾಡಿಡಲು ಬರುವುದಿಲ್ಲ.

ಹೆಚ್ಚು ಇಂತಹ ಮೇವಿನ ಬೆಳೆಗಳನ್ನು ಬೆಳೆದು ಪಶು ಸಂಗೋಪನೆ ಮಾಡುವವರು ಅವಶ್ಯವಾಗಿ ಹುಲ್ಲು ಪುಡಿ ಮಾಡುವ ಯಂತ್ರ ಬಳಸುವುದು ಉತ್ತಮ. ಈ ಮೇವಿನ ಅನೇಕ ತಳಿಗಳ ಹುಲ್ಲು ಮೈ ಕೈ ಕೊಯ್ಯುತ್ತದೆ. ಈ ಬಗ್ಗೆ ಗಮನಿಸಿ ತಳಿ ಆಯ್ಕೆ ಮಾಡಬಹುದು. ಇಂತಹ ಬಹುವಾರ್ಷಿಕ ಮೇವಿನ ಬೆಳೆಗಳ ಬೀಜಕ್ಕಿಂತ ಕಟಿಂಗ್ ಗಳು ನೆಡಲು ಉತ್ತಮ. ‌‌‌ಇಂತಹ ಕಟಿಂಗ್ ಗಳನ್ನು ಆರು ಇಂಚು ಆರು ಇಂಚು ಅಂತರ ಮಧ್ಯೆ ಒಂದೂವರೆ ಅಡಿ ಓಣಿ ಮಾಡಿ ನೆಡುವ ಕ್ರಮ ಉತ್ತಮ. ನೀರು ಬಸಿದು ಹೋಗುವ ವ್ಯವಸ್ಥೆ ಇದ್ದರೆ ಒಳ್ಳೆದು. ಮೇವಿನ ಬೆಳೆಗಳಿಗೆ ಬಹುತೇಕ ರೈತರು ಯೂರಿಯಾ ನೀಡುತ್ತಾರೆ. ಆದರೆ ಬರೀ ಯೂರಿಯಾ ನೀಡುತ್ತಾ ಹೋದರೆ ಭೂಮಿ ಬಹಳ ವೇಗವಾಗಿ ಬೆಟ್ಟು ಆಗಿ ಬರಡಾಗುತ್ತದೆ. ಸ್ವಲ್ಪ ಸ್ವಲ್ಪ ಪ್ರಮಾಣದ ಸಾವಯವ ಗೊಬ್ಬರ ವಿಶೇಷವಾಗಿ ಸ್ಲರಿ ಗೊಬ್ಬರ ನೀಡಿದರೆ ಬಹುವಾರ್ಷಿಕ ಮೇವು ಖಂಡಿತವಾಗಿಯೂ ಬಹಳಷ್ಟು ವರ್ಷ ನಿರಂತರವಾಗಿ ಮೇವು ಕಟಿಂಗ್ ಕಟಾವಿಗೆ ಲಭ್ಯವಾಗುತ್ತದೆ.

ರೈತ ಬಾಂಧವರೇ.. ಈ ಮೇವಿನ ಕಟಿಂಗ್ ನ್ನು ಕಡ್ಡಾಯವಾಗಿ ನೆಲಕ್ಕೆ ಸಮವಾಗಿ ಕಟಾವು ಮಾಡಬೇಕು. ಯಾವುದೇ ಕಾರಣಕ್ಕೆ ನೆಲದಿಂದ ಮೇಲೆ ಹುಲ್ಲು ಕಟ್ ಮಾಡಿದರೆ ಅಂತಹ ಮೇವಿನ ಬೆಳೆ ವಿಫಲವಾಗುತ್ತದೆ ಎಚ್ಚರಿಕೆ. ಮನೆಯಿಂದ ದೂರದಲ್ಲಿ ಇಂತಹ ಮೇವಿನ ಬೆಳೆಗಳನ್ನು ಬೆಳೆಯುವವರು ಮನೆಗೆ ಮೇವನ್ನು ಕಟಾವು ಮಾಡುವವರು ಚಿಕ್ಕ ಪ್ರಮಾಣದಲ್ಲಿ ಮಾತ್ರ ಬೈಕ್, ಸೈಕಲ್ ಮತ್ತು ತಲೆ ಹೊರೆಯಲ್ಲಿ ತರಬಹುದು. ಇಂತಹ ಹೈಬ್ರೀಡ್ ಮೇವಿನ ಬೆಳೆಗಳನ್ನು ದೊಡ್ಡ ಹೊರೆ ಮಾಡಿ ಬೈಕ್ ಸೈಕಲ್ ಮತ್ತು ತಲೆ ಹೊರೆಯಲ್ಲಿ ಸಾಂಪ್ರದಾಯಿಕ ಗದ್ದೆ ತೋಟದ ಕಳೆ ಹುಲ್ಲಿನಂತೆ ತರಲು ಅಸಾಧ್ಯ. ಹುಲ್ಲಿನ ಎಸಳು ದಡಿ
(ಕಾಂಡ) ತೂಕ ಇರುವುದರಿಂದ ಈ ಬಗೆಯ ಸಾಗಾಟ ಕಷ್ಟ. ಬಹು ವಾರ್ಷಿಕ ಮೇವಿನ ಬೆಳೆಗಳನ್ನು ಅಡಿಕೆ ಇತರ ತೋಟಗಾರಿಕೆ ಬೆಳೆಯಂತೆ ಯೋಜಿಸಿ ಬೆಳೆಯುವುದು ಉತ್ತಮ…

Most of the multi cutting fodder crops have different names but the quality is the same. Water availability, fertilizer application have a big impact on forage quality. If harvesting is delayed, almost all fodder crops become stubble. When farmers choose perennial fodder crops, they choose varieties that do not break the shell much at the base and the stem is not hard.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

2026 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು

2026 ಜೂನ್ ವೇಳೆಗೆ ಎತ್ತಿನಹೊಳೆ ನೀರು ತುಮಕೂರು ತಲುಪಲಿದೆ ಎಂದು ಗೃಹ ಸಚಿವ…

48 minutes ago

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಒಂದೆರೆಡು ಕಡೆ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ,…

2 hours ago

ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ

ಹಾವೇರಿ ಜಿಲ್ಲೆಯಲ್ಲಿರುವ 17 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳಿಗೆ 21 ಬಾಡಿಗೆ…

2 hours ago

ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ಹವಾಮಾನ ವರದಿ | 10-04-2025 | ಎ.18 ರ ತನಕವೂ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಮಳೆ

11.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

17 hours ago

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು

ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…

22 hours ago