ಗ್ರಾಮೀಣ ಭಾಗಗಳು ಸೊರಗಲು ಹಾಗೂ ಅಭಿವೃದ್ಧಿಗೊಳ್ಳಲು ಅಧಿಕಾರಿಗಳೇ ಪ್ರಮುಖ ಕಾರಣವಾಗುತ್ತಾರೆ. ಒಂದು ಗ್ರಾಮೀಣ ಭಾಗದಲ್ಲಿ ಅಧಿಕಾರಿಯೊಬ್ಬ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಕನಿಷ್ಟ 5 ವರ್ಷ ಅದೇ ಅಧಿಕಾರಿ ಗ್ರಾಮದ ಅಭಿವೃದ್ಧಿಗಾಗಿ ಉಳಿಸಿಕೊಳ್ಳಬೇಕು ಎನ್ನುವುದು ಗ್ರಾಮದ ಜನರ ಒತ್ತಾಯ.
ಇದೀಗ ಅಂತಹದ್ದೇ ಒಂದು ಒತ್ತಾಯ ಕೊಲ್ಲಮೊಗ್ರದಲ್ಲಿ ಕೇಳಿದೆ. ಸುಳ್ಯ ತಾಲೂಕಿನ ಕಟ್ಟಕಡೆಯ ಗ್ರಾಮ ಕೊಲ್ಲಮೊಗ್ರ. ಅಭಿವೃದ್ಧಿಯ ನಿರೀಕ್ಷೆ ಈ ಗ್ರಾಮದಕ್ಕೆ ಸಾಕಷ್ಟು ಇದೆ. ಇಲ್ಲಿನ ಗ್ರಾಪಂ ಪಿಡಿಒ ಅವರು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದರು. ಇದೇ ಸಮಯದಲ್ಲಿ ವರ್ಗಾವಣೆಯಾಗಿದೆ. ಈಗ ಗ್ರಾಮಸ್ಥರು ಕೇಳುವ ಪ್ರಶ್ನೆ ಹೀಗಿದೆ,…
ಯಾಕೆ ಹೀಗೆ..? ಇದು ಒಂದೊಂದು ಬಾರಿ ಬರುವ ಪ್ರಶ್ನೆ..! ಆದರೆ ಕೆಲವಷ್ಟು ಗ್ರಾಮಗಳಲ್ಲಿ.. ಇದು ನಿರಂತರ ಪ್ರಶ್ನೆಯಾಗಿದೆ. ಅದು ಆ ಊರಿಗೆ ಬಡಿದ ಗರ ಎಂಬ ತೀರ್ಮಾನಕ್ಕೆ ಬರಬೇಕೇ ?. ಅನೇಕ ಸಮಸ್ಯೆಗಳ ಆಗರವಾಗಿದ್ದ ಸುಳ್ಯ ತಾಲೂಕು ಕೊಲ್ಲಮೊಗ್ರ ಗ್ರಾಮಕ್ಕೆ ಆಶಾಕಿರಣವಾಗಿ ಗ್ರಾಮ ಪಂಚಾಯತ್ ಪಿಡಿಒ ಆಗಿ ಅಧಿಕಾರ ಸ್ವೀಕರಿಸಿ ಈ ಊರಿನ ಸರ್ವತೋಮುಖ ಅಭಿವೃದ್ಧಿಗೆ ವಿಘ್ನಗಳನ್ನು ಎದುರಿಸಿ ಬಹು ಮುಖ್ಯ ಪಾತ್ರವನ್ನು ಶಕ್ತಿ ಮೀರಿ ನಿಭಾಯಿಸಿಕೊಂಡು ಬಂದ ಪಿಡಿಒ ಅವರನ್ನು ವರ್ಗಾವಣೆ ಆದೇಶ ಬಂದಿದೆ. ಇನ್ನು ಕೆಲ ವರುಷವಾದರೂ ಇವರ ಸೇವೆ ಈ ಗ್ರಾಮ ಅಪೇಕ್ಷಿಸುತ್ತದೆ.ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಬೇಕೆಂದು ವಿನಂತಿಸುತ್ತೇವೆ ಎಂದು ಗ್ರಾಮದ ಜನರು ಹೇಳುತ್ತಾರೆ.
ಒಂದು ವೇಳೆ ಇಲಾಖೆಗಳ ನಿಯಮದಂತೆ ವರ್ಗಾವಣೆ ಇರುವುದೇ ಆಗಿದ್ದರೆ, ಮುಂದೆ ಬರುವ ನೂತನ ಪಿಡಿಒ ಅವರು ಕೂಡಾ ಗ್ರಾಮೀಣ ಅಭಿವೃದ್ಧಿಗಾಗಿ ಹಿಂದಿನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎನ್ನುವುದು ಕೂಡಾ ಜನರ ನಿರೀಕ್ಷೆ.