Advertisement
ಸುದ್ದಿಗಳು

ಗ್ರಾಮೀಣ ಭಾಗದಲ್ಲಿ ಬೇಕಿದೆ ಸಮರ್ಥ ಅಧಿಕಾರಿಗಳು | ಜನರ ಬೇಡಿಕೆ |

Share

ಗ್ರಾಮೀಣ ಭಾಗಗಳು ಸೊರಗಲು ಹಾಗೂ ಅಭಿವೃದ್ಧಿಗೊಳ್ಳಲು ಅಧಿಕಾರಿಗಳೇ ಪ್ರಮುಖ ಕಾರಣವಾಗುತ್ತಾರೆ. ಒಂದು ಗ್ರಾಮೀಣ ಭಾಗದಲ್ಲಿ ಅಧಿಕಾರಿಯೊಬ್ಬ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಕನಿಷ್ಟ 5 ವರ್ಷ ಅದೇ ಅಧಿಕಾರಿ ಗ್ರಾಮದ ಅಭಿವೃದ್ಧಿಗಾಗಿ ಉಳಿಸಿಕೊಳ್ಳಬೇಕು ಎನ್ನುವುದು  ಗ್ರಾಮದ ಜನರ ಒತ್ತಾಯ.

ಇದೀಗ ಅಂತಹದ್ದೇ ಒಂದು ಒತ್ತಾಯ ಕೊಲ್ಲಮೊಗ್ರದಲ್ಲಿ ಕೇಳಿದೆ. ಸುಳ್ಯ ತಾಲೂಕಿನ ಕಟ್ಟಕಡೆಯ ಗ್ರಾಮ ಕೊಲ್ಲಮೊಗ್ರ. ಅಭಿವೃದ್ಧಿಯ ನಿರೀಕ್ಷೆ ಈ ಗ್ರಾಮದಕ್ಕೆ ಸಾಕಷ್ಟು ಇದೆ. ಇಲ್ಲಿನ ಗ್ರಾಪಂ ಪಿಡಿಒ ಅವರು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದರು. ಇದೇ ಸಮಯದಲ್ಲಿ ವರ್ಗಾವಣೆಯಾಗಿದೆ. ಈಗ ಗ್ರಾಮಸ್ಥರು ಕೇಳುವ ಪ್ರಶ್ನೆ ಹೀಗಿದೆ,…

ಯಾಕೆ ಹೀಗೆ..? ಇದು ಒಂದೊಂದು ಬಾರಿ ಬರುವ ಪ್ರಶ್ನೆ..! ಆದರೆ ಕೆಲವಷ್ಟು ಗ್ರಾಮಗಳಲ್ಲಿ.. ಇದು ನಿರಂತರ ಪ್ರಶ್ನೆಯಾಗಿದೆ. ಅದು ಆ ಊರಿಗೆ ಬಡಿದ ಗರ ಎಂಬ ತೀರ್ಮಾನಕ್ಕೆ ಬರಬೇಕೇ ?. ಅನೇಕ ಸಮಸ್ಯೆಗಳ ಆಗರವಾಗಿದ್ದ ಸುಳ್ಯ ತಾಲೂಕು ಕೊಲ್ಲಮೊಗ್ರ ಗ್ರಾಮಕ್ಕೆ ಆಶಾಕಿರಣವಾಗಿ ಗ್ರಾಮ ಪಂಚಾಯತ್‌ ಪಿಡಿಒ ಆಗಿ ಅಧಿಕಾರ ಸ್ವೀಕರಿಸಿ ಈ ಊರಿನ ಸರ್ವತೋಮುಖ ಅಭಿವೃದ್ಧಿಗೆ ವಿಘ್ನಗಳನ್ನು ಎದುರಿಸಿ ಬಹು ಮುಖ್ಯ ಪಾತ್ರವನ್ನು ಶಕ್ತಿ ಮೀರಿ ನಿಭಾಯಿಸಿಕೊಂಡು ಬಂದ ಪಿಡಿಒ ಅವರನ್ನು ವರ್ಗಾವಣೆ ಆದೇಶ ಬಂದಿದೆ. ಇನ್ನು ಕೆಲ ವರುಷವಾದರೂ ಇವರ ಸೇವೆ ಈ ಗ್ರಾಮ ಅಪೇಕ್ಷಿಸುತ್ತದೆ.ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಬೇಕೆಂದು ವಿನಂತಿಸುತ್ತೇವೆ ಎಂದು ಗ್ರಾಮದ ಜನರು ಹೇಳುತ್ತಾರೆ.

ಒಂದು ವೇಳೆ ಇಲಾಖೆಗಳ ನಿಯಮದಂತೆ ವರ್ಗಾವಣೆ ಇರುವುದೇ ಆಗಿದ್ದರೆ, ಮುಂದೆ ಬರುವ ನೂತನ ಪಿಡಿಒ ಅವರು ಕೂಡಾ ಗ್ರಾಮೀಣ ಅಭಿವೃದ್ಧಿಗಾಗಿ ಹಿಂದಿನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ ಎನ್ನುವುದು ಕೂಡಾ ಜನರ ನಿರೀಕ್ಷೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

20 hours ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

20 hours ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

21 hours ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

21 hours ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

1 day ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

2 days ago