ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
ರಾಜೇಂದ್ರ ಮಲ್ಲಪ್ಪ ಎಂಬ ಕೃಷಿಕ ಈಗ ಗಮನ ಸೆಳೆದಿರುವ ರೈತ. ಹೊಸ ಬಗೆಯ ಬೇಸಾಯ ನಡೆಸುವ ಮೂಲಕ ಕಬ್ಬು, ಹುರುಳಿ, ಕಡಲೆ ಬೆಳೆಯ ಕೃಷಿಯಲ್ಲಿ ತೊಡಗಿರುವ ರೈತ. ರಾಸಾಯನಿಕ ಹಾಗೂ ಕೊಟ್ಟಿಗೆ ಗೊಬ್ಬರ ಬಳಸದೆ ಕಟಾವು ಮಾಡಿದ ಬೆಳೆಯಲ್ಲಿ ಉಳಿಯುವ ಕೃಷಿ ಕೂಳೆಯನ್ನು ಉಳುಮೆ ಮಾಡುವ ಮೂಲಕ ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಿದ್ದಾರೆ.
ಈ ಮೊದಲು ರಾಸಾಯನಿಕ ಹಾಗೂ ಗೋಬರ್ ಗ್ಯಾಸ್ ತ್ಯಾಜ್ಯವನ್ನು ಸಹ ಬಳಸುತ್ತಿದ್ದೆವು. ಆದರೆ ಈಗ ಯಾವುದೇ ರಾಸಾನಿಕ ಬಳಸದೆ ಉತ್ತಮ ಫಸಲು ತೆಗೆಯುತ್ತಿರುವುದಾಗಿ ರೈತ ರಾಜೇಂದ್ರ ಮಲ್ಲಪ್ಪ ಹೇಳುತ್ತಾರೆ. ಅಂದರೆ ಈ ಮಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತದೆ. ಸಹಜವಾಗಿಯೇ ಬೆಳೆಯುವ ಗಿಡಗಳನ್ನು ಮತ್ತೆ ಭೂಮಿಗೆ ಲಭ್ಯವಾಗುವ ಹಾಗೆ ಮಾಡಬೇಕು. ಈ ಕಾರಣದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಎನ್ನುತ್ತಾರೆ ಅವರು.
ಯಾವುದೇ ರಾಸಾಯನಿಕಗಳನ್ನು ಬಳಸದೆ ವಿಶೇಷ ಕೃಷಿ ಪದ್ಧತಿಯಿಂದ ಉತ್ತಮ ಇಳುವರಿ ಪಡೆಯಲಾಗಿದೆ ಎನ್ನುವುದು ನಾವು ಪರೀಕ್ಷಿಸಿದಾಗ ತಿಳಿಯುತ್ತದೆ ಎನ್ನುತ್ತಾರೆ ರೈತ ರೈತ ಸಂಜಯ್. ಅಂದರೆ ಭೂಮಿಗೆ ರಾಸಾಯನಿಕವೇ ಯಥೇಚ್ಛವಾಗಿ ಬೇಕಾಗಿಲ್ಲ ಎನ್ನುವುದು ಈ ಮೂಲಕ ಅರಿವಾಗುತ್ತದೆ ಎನ್ನುತ್ತಾರೆ.