ನಾಗಪುರದ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರು ಕಳಪೆ ಅಡಿಕೆಯ ಸರಬರಾಜು ಪತ್ತೆ ಕಾರ್ಯಾಚರಣೆ ಮಾಡಿದ್ದರು. ಈ ಸಂದರ್ಭ ಸುಮಾರು 8 ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ತಿನ್ನಲು ಯೋಗ್ಯವಲ್ಲ ಎಂದು ಆಹಾರ ಮತ್ತು ಔಷಧ ಆಡಳಿತ ಇಲಾಖೆಗೆ (ಎಫ್ ಡಿಎ) ಹೇಳಿದೆ.
ವಶಪಡಿಸಿಕೊಂಡ ಸುಮಾರು 8 ಕೋಟಿ ಮೌಲ್ಯದ ಅಡಿಕೆಯ ಮಾದರಿ ತೆಗೆದುಕೊಳ್ಳಲಾಗಿದ್ದು ಎಲ್ಲಾ ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿವೆ. ಅಂದರೆ ಈ ಅಡಿಕೆ ತಿನ್ನಲು ಯೋಗ್ಯವಿಲ್ಲ ಎಂದು ಆಹಾರ ಮತ್ತು ಔಷಧ ಆಡಳಿತ ಇಲಾಖೆ ಹೇಳಿತ್ತು. ಈ ನಡುವೆ ಕಳ್ಳದಾರಿಯ ಮೂಲಕ ದೇಶದ ವಿವಿದೆಡೆಗೆ ಅದೇ ಮಾದರಿಯ ಅಡಿಕೆ ಬರುತ್ತಿದೆ. ಪೊಲೀಸರಿಗೆ ಸುಳಿವು ಸಿಗದಂತೆ ಹಲವು ಕಡೆಗೆ ಸಾಗಿಸುವುದು ಹಾಗೂ ಗ್ರಾಮೀಣ ಭಾಗಗಳಲ್ಲಿ ಅಡಿಕೆ ದಾಸ್ತಾನು ಮಾಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಆಮದು ಮಾಡಿದ ಅಡಿಕೆಯನ್ನು ಕೆಲವು ಕಡೆ ಸುರಿದು ಇಲ್ಲಿನ ಅಡಿಕೆ ಜೊತೆ ಸೇರಿಸಿ ಮಾರಾಟ ಮಾಡಲಾಗುತ್ತಿದೆ.
ಆದರೆ ಮುಂಬೈ ಕೆಲವು ಪ್ರದೇಶದ ವ್ಯಾಪಾರಿಗಳು ತಪ್ಪು ಮಾಹಿತಿ ನೀಡಿ ಬೇರೆ ಬೇರೆ ಬಂದರಿನಲ್ಲಿ ಸರಕುಗಳನ್ನು ಆರ್ಡರ್ ಮಾಡುತ್ತಾರೆ. ಪ್ಲಾಸ್ಟಿಕ್ ಸರಕುಗಳ ಹೆಸರಿನಲ್ಲಿ 4.60 ಕೋಟಿ ರೂ. ಹಾಗೂ ಅದೇ ರೀತಿ ಮುಂದ್ರಾ ಬಂದರಿನಿಂದ ಕಂಟೈನರ್ ಗಳಲ್ಲಿ ಸರಕು ತರಲಾಗುತ್ತಿದೆ. ಈ ರೀತಿಯ ಕಳಪೆ ಅಡಿಕೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಅಡಿಕೆ ಆಮದು ಮೇಲೆ ಶೇ.100 ಸುಂಕ ಇದ್ದದೂ ಕದ್ದು ಆಮದು ಮಾಡಲಾಗುತ್ತಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ. ಕೆಲವು ಇಲಾಖೆಗಳೂ ಮೌನವಾಗಿದೆ. ಹೀಗಾಗಿ ಅಡಿಕೆ ಆಮದು ಭಾರತದ ಕೃಷಿಕರ ಮೇಲೆ ಪರಿಣಾಮ ಬೀರುವುದು ನಿಶ್ಚಿತ.