ಹೆಚ್ಚುತ್ತಿರುವ ಅಡಿಕೆ ವಂಚನೆ ಪ್ರಕರಣ | ಅಡಿಕೆ ಬೆಳೆಗಾರರಲ್ಲಿ ಇರಲಿ ಎಚ್ಚರ |

February 26, 2025
9:49 PM

ಅಡಿಕೆ ವ್ಯಾಪಾರ ನಡೆಸಿ ಹಣ ಕೊಡದೆ ವಂಚನೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಈ ತಿಂಗಳಲ್ಲಿ ಎರಡು ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರಿನಲ್ಲಿ ಒಂದು ಪ್ರಕರಣ ನಡೆದಿದ್ದರೆ ಇನ್ನೊಂದು ಪ್ರಕರಣ ಅಹಮದಾಬಾದ್‌ನಿಂದ ವರದಿಯಾಗಿದೆ. ಅಡಿಕೆ ಬೆಳೆಗಾರರು ಇಂತಹ ಸಮಯದಲ್ಲಿ ಎಚ್ಚರ ಇರಬೇಕಾದ್ದು ಅಗತ್ಯವಾಗಿದೆ.………ಮುಂದೆ ಓದಿ……..

Advertisement
Advertisement

ಮಂಗಳೂರು ಭಗವತೀನಗರ ಮಣ್ಣಗುಡ್ಡದಲ್ಲಿ ವಾಸವಾಗಿರುವ ಕಮಲ್‌ ಕಾಂತ್‌ ಶರ್ಮಾ ಬೆಟ್ಟಂಪಾಡಿಯಲ್ಲಿ ಪಾರಸ್‌ ಟ್ರೇಡರ್ಸ್‌ ಎಂಬ ಅಡಿಕೆ ಗಾರ್ಬಲ್‌ ನಡೆಸುತ್ತಿದ್ದರು. ಅಡಿಕೆ ವ್ಯವಹಾರವನ್ನು ಛತ್ತೀಸ್‌ಗಢದ ಲಲಿತ್‌ ಜೈನ್‌ ಮತ್ತು ಪ್ರೇಕ್ಷಾ ಜೈನ್‌ ಅವರ ಮಾಲಕತ್ವದ ಕಂಪೆನಿಯೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಲಲಿತ್‌ ಜೈನ್‌ ಮತ್ತು ಪ್ರೇಕ್ಷಾ ಜೈನ್‌ ಅವರು ಒಟ್ಟು ರೂ.2,76,00,300 ಬೆಲೆಯ ಅಡಿಕೆಯನ್ನು ಖರೀದಿಸಿಕೊಂಡು ಹಣವನ್ನು ನೀಡಿಲ್ಲ. ದೂರವಾಣಿ ಕರೆ ಮಾಡಿದಾಗ ಸ್ವೀಕರಿಸದೇ ಇದ್ದು, ಕೆಲವು ದಿನಗಳಿಂದ ಮೊಬೈಲ್‌ ಪೋನ್‌ ಸ್ವಿಚ್‌ ಆಪ್‌ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಾಗಿ ಕೆಲವೇ ದಿನದಲ್ಲಿ ರಾಜ್‌ಕೋಟ್ ಉದ್ಯಮಿಯಿಂದ 1.08 ಕೋಟಿ ರೂಪಾಯಿ ಪಡೆದು ವಂಚನೆ ನಡೆಸಿರುವ ಬಗ್ಗೆ ವರದಿಯಾಗಿದೆ. ಈ ಪ್ರಕರಣದಲ್ಲಿ
ಅಹಮದಾಬಾದ್‌ನ  ದಲ್ಲಾಳಿ ಮತ್ತು ಮೂವರು ವ್ಯಾಪಾರಿಗಳು ಸೇರಿದಂತೆ ಒಟ್ಟು ಐದು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಹಮದಾಬಾದ್‌ನಲ್ಲಿ ವಾಸಿಸುವ ಮನ್ಸೂರ್ ಅರಬಿಯಾನಿ ಎಂಬವರು ರಾಜ್‌ಕೋಟ್‌ನ ಅಡಿಕೆ ವ್ಯಾಪಾರಿ ಮಿತೇಶ್‌ಭಾಯ್ ಹರಿಲಾಲ್ ಸಯಾನಿ (41 ವರ್ಷ) ಅವರಿಂದ ಅಡಿಕೆ ಪಡೆದಿದ್ದರು. ಹಣ ಪಾವತಿಯಾಗದ ಕಾರಣದಿಂದ  1.08 ಕೋಟಿ ರೂ. ವಂಚನೆಯ ದೂರು ದಾಖಲಾಗಿದೆ.

ಅಡಿಕೆ ಧಾರಣೆ ಏರಿಳಿತ ಹಾಗೂ ಕಳೆದ ಕೆಲವು ಸಮಯಗಳಿಂದ ವಿಪರೀತ ಏರಿಕೆಯ ಸಮಯದಲ್ಲಿ ಅಪಾರ ಪ್ರಮಾಣದಲ್ಲಿ ಅಡಿಕೆ ವ್ಯವಹಾರದಲ್ಲಿ ಕೆಲವರು ನಷ್ಟ ಅನುಭವಿಸಿದ್ದರು. ಅಂದಿನಿಂದ ಅಡಿಕೆ ವಹಿವಾಟಿನಲ್ಲಿ ಕೆಲವು ವ್ಯಾಪಾರಿಗಳು ಹಳಿ ತಪ್ಪಿದ್ದರು. ಇದೀಗ ಅಡಿಕೆ ವಹಿವಾಟು ಸರಿಯಾಗಿ ನಡೆಯುತ್ತಿದ್ದರೂ ಆರ್ಥಿಕ ಮುಗ್ಗಟ್ಟು ಮುಂದುವರಿದಿದೆ. ಅಡಿಕೆ ಮಾರುಕಟ್ಟೆ ಕೂಡಾ ಚೇತರಿಕೆ ಕಾಣುತ್ತಿದೆ. ಅಡಿಕೆ ಬೆಳೆಗಾರರು ಬಿಳಿ ಚೀಟು ವಹಿವಾಟಿನಲ್ಲಿ ಎಚ್ಚರ ಇರಬೇಕಾಗಿದೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅರಣ್ಯವಾಸಿಗಳು, ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ ಜಾನುವಾರು ಮೇಯಿಸಲು ಅವಕಾಶ
July 24, 2025
11:13 PM
by: The Rural Mirror ಸುದ್ದಿಜಾಲ
ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು, ಮರಳಿನ ಅಭಾವ | ಸಂಕಷ್ಟ ಎದುರಿಸುತ್ತಿರುವ ಜನಸಾಮಾನ್ಯರು | ರಾಜ್ಯ ಸರ್ಕಾರ ಕೂಡಲೇ ಅಗತ್ಯ ಕ್ರಮಕೈಗೊಳ್ಳಲು ಸಂಸದ ಬ್ರಿಜೇಶ್‌ ಚೌಟ ಒತ್ತಾಯ |
July 24, 2025
10:40 PM
by: The Rural Mirror ಸುದ್ದಿಜಾಲ
ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಕೊಳೆರೋಗ | ಮಳೆಯಲ್ಲೂ ಇವರು ಔಷಧಿ ಸಿಂಪಡಿಸುತ್ತಾರೆ..!
July 24, 2025
4:42 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group