65 ವರ್ಷಗಳಿಂದ ಜನರನ್ನು ಒಂದಾಗಿಸುತ್ತಿರುವ “ಭಜನೆ ” | ಕೊಕ್ಕಡದಲ್ಲೊಂದು ಸಂಭ್ರಮದ ಉತ್ಸವ |

November 17, 2021
7:53 PM

ಒಂದೆರಡಲ್ಲ…! ಬರೋಬ್ಬರಿ 65 ವರ್ಷಗಳಿಂದ ಭಜನೆ ನಡೆಯುತ್ತಿದೆ ಇಲ್ಲಿ..!, ಈ ಮೂಲಕ ಜನರು ಒಂದಾಗುತ್ತಿದ್ದಾರೆ. ಜಾತಿಯ ಬೇಧವಿಲ್ಲದೆ ಒಂದಾಗಿಸುವ ಈ ಭಜನೆ ಇಲ್ಲಿ ಒಂದು ಉತ್ಸವ..!. ಇಂತಹ ಸಂಭ್ರಮ ನಡೆಯುತ್ತಿರುವುದು ಕೊಕ್ಕಡದಲ್ಲಿ.

Advertisement
Advertisement
Advertisement
Advertisement

Advertisement

ವಿಶ್ವ ಹಿಂದೂ ಪರಿಷದ್ ಕೊಕ್ಕಡ ಮತ್ತು ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ ಇದರ ವತಿಯಿಂದ ನಡೆಯುತ್ತಿರುವ 65ನೇ ವರ್ಷದ ಸಾರ್ವಜನಿಕ ಭಜನಾ ಸಂಕೀರ್ತನೆ ನಡೆಯಿತು. ಸುಮಾರು 65 ವರ್ಷಗಳ ಹಿಂದೆ ಆರಂಭವಾದ ಈ ನಗರ ಭಜನೆಯು ಕೊಕ್ಕಡದ ಒಂದು ದೊಡ್ಡ ಉತ್ಸವ.

ಸುಮಾರು 60 ರ ದಶಕದಲ್ಲಿ, ಕೊಕ್ಕಡದಲ್ಲಿ ಹಿಂದೂ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಶಿಶಿಲದ ಬರ್ಗುಲ ನಿವಾಸಿ ದಿವಂಗತ ಪುರುಷೋತ್ತಮ ನಾಯಕ್ ಅವರ ಮುಂದಾಳತ್ವದಲ್ಲಿ ಹುಟ್ಟಿಕೊಂಡ ನಗರ ಭಜನೆಯೂ ಇವರ ಸಮಕಾಲೀನರ ಉತ್ಸಾಹದೊಂದಿಗೆ ಇದೀಗ ಭಜನಾ ಸಪ್ತಾಹದ ಮೂಲಕ ಮುಂದುವರೆದುಕೊಂಡು ಬಂದಿದೆ.

Advertisement

ದೀಪಾವಳಿ ನಂತರದ ಮೊದಲ ಷಷ್ಠಿಯಂದು ಸಂಜೆ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವರಿಗೆ ರಂಗಪೂಜೆ ಯನ್ನು ಅರ್ಪಿಸಿ ಭಜನೆ ಆರಂಭಗೊಳ್ಳುತ್ತದೆ. ಬಳಿಕ ಎರಡನೆಯ ದಿನ ಸಂಜೆ ಶಿಶಿಲದ ಬರ್ಗುಲದಲ್ಲಿರುವ ದಿವಂಗತ ಪುರುಷೋತ್ತಮ ನಾಯಕರ ಮನೆಯಲ್ಲಿರುವ ರಾಮ ಸೀತೆ ಲಕ್ಷ್ಮಣ ಮತ್ತು ಹನುಮಂತರ ಬೆಳ್ಳಿಯ ಭಾವಚಿತ್ರದೊಂದಿಗೆ ಮನೆಯಿಂದ ಕೊಕ್ಕಡದವರೆಗೆ ಶೋಭ ಯಾತ್ರೆಯ ಮೂಲಕ ವೈಭವಪೂರಿತವಾಗಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳಕ್ಕೆ ಪ್ರವೇಶಿಸುತ್ತದೆ.

Advertisement

ಪ್ರಾರ್ಥನೆಯ ಬಳಿಕ ಅಲ್ಲಿ ಭಜನೆಗಳನ್ನು ನಡೆಸಿ ಬೆಳ್ಳಿಯ ರಥದಲ್ಲಿ ದೇವರು ಸಮೇತ ಅಶ್ವತ್ಥಕಟ್ಟೆ ವರೆಗೆ ಕುಣಿತ ಭಜನೆಯ ಮೂಲಕ ಸಾಗಿ ಬಳಿಕ ಅಲ್ಲಿ ಪೂಜೆ ನೆರವೇರಿಸಿ ಕಾರ್ತಿಕ ಕಟ್ಟೆಯವರೆಗೆ ಭಜನೆಯು ಸಾಗುತ್ತದೆ. ನಂತರ ಅಲ್ಲಿಂದ ಹರಿಹರ ಕಟ್ಟೆಗೆ ಭಜನಾರ್ಥಿಗಳು ಸಾಗಿ ಮತ್ತೆ ಭಜನಾ ಮಂದಿರಕ್ಕೆ ಬಂದು ಅಲ್ಲಿ ದೇವರನ್ನು ಇರಿಸಿ, ದೇವರ ಸುತ್ತಲೂ ಕುಣಿತ ಭಜನೆ ಯನ್ನು ಆರಂಭಿಸುತ್ತಾರೆ. ಹೀಗೆ ಸುಮಾರು 3 ಗಂಟೆಗಳಿಗಿಂತ ಹೆಚ್ಚು ಕಾಲ ಭಜನೆ ಮುಂದುವರೆಯುತ್ತದೆ.

Koo App

Advertisement

ವಾರಗಳ ಕಾಲ ನಡೆಯುವ ಭಜನಾ ಸಂಕೀರ್ತನೆಯಲ್ಲಿ ಪ್ರತಿನಿತ್ಯ ಇನ್ನೂರರಿಂದ ಮುನ್ನೂರು ಜನರು ಭಾಗವಹಿಸುತ್ತಾರೆ. ಈ ಭಜನಾ ಕಾರ್ಯಕ್ರಮದ ಮೂಲಕ ಊರ ಜನರೆಲ್ಲಾ ಒಂದಾಗುತ್ತಾರೆ. ಸಂಘಟನೆಯ ದೃಷ್ಟಿಯಿಂದ ಆರಂಭವಾದ ಭಜನಾ ಕಾರ್ಯಕ್ರಮ ಇಂದಿಗೂ ಮಹತ್ವ ಪಡೆದಿದೆ. ಜನರು ಸಂಭ್ರಮದಿಂದ ಭಾಗವಹಿಸುತ್ತಾರೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror