ಒಂದು ಆಹ್ವಾನ….! | ಒಂದು ಟ್ವೀಟ್….!‌ | ವಿದೇಶದಲ್ಲೂ ಸದ್ದು ಮಾಡಿತು ರಿಪಬ್ಲಿಕ್‌ ಆಫ್‌ ಭಾರತ್‌ |

September 6, 2023
3:36 PM

ಪ್ರಧಾನಿ ಸಹಿತ ಸಂಪುಟದ ಯಾವುದೇ ಸಚಿವರು ಮಾತನಾಡಲಿಲ್ಲ…!.ಜಿ20 ಶೃಂಗಸಭೆಗೆ ರಾಷ್ಟ್ರಪತಿಗಳು ಗಣ್ಯರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ ರಿಪಬ್ಲಿಕ್‌ ಆಫ್‌ ಭಾರತ್‌ ಎಂದು ಕಂಡಿತು. ಅಸ್ಸಾಂ ಮುಖ್ಯಮಂತ್ರಿ ಟ್ವೀಟ್‌ ಮಾಡುತ್ತಾ, ದೇಶದ ಎಲ್ಲಾ ರಾಜ್ಯಗಳೂ ಇದನ್ನು ಬಯಸುತ್ತದೆ ಎಂದರು. ಅಷ್ಟೇ…!. ಎಲ್ಲೆಡೆಯೂ ಸದ್ದು ಮಾಡಿದೆ ಭಾರತ..!

Advertisement
Advertisement

ಈ ಎಲ್ಲಾ ಚರ್ಚೆಗಳ ನಡುವೆಯೇ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅರುಣಾಗ್ ಠಾಕೂರ್ ಅವರು ಭಾರತದ ಹೆಸರು ಬದಲಾವಣೆಯ ಮಾತು ವದಂತಿ ಎಂದು ಹೇಳಿದ್ದಾರೆ. ಭಾರತ್ ಬಗ್ಗೆ ಯಾರಾದರೂ ಆಕ್ಷೇಪಿಸಿದರೆ ಅದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು  ಹೇಳಿದ್ದಾರೆ.

ಭಾರತ… ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ.  ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು 130 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇದೀಗ ರಿಪಬ್ಲಿಕ್‌ ಆಫ್‌ ಭಾರತ್‌’ ಎಂದು ಮರುನಾಮಕರಣ ಮಾಡುವ ಹೊಸ ನಿರ್ಣಯವನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಯಿದೆ ಎಂಬುದು ಚರ್ಚೆಯ ವಿಷಯ. ಇದೀಗ ಹಲವು ಆಯಾಮಗಳಿಂದಲೂ ಚರ್ಚೆ ನಡೆದಿದೆ, ನಡೆಯುತ್ತಿದೆ.

‘ಇಂಡಿಯಾ’ ಎಂಬ ಪದವು ‘ಇಂಡಸ್’ ಪದದಿಂದ ಬಂದಿದೆ, ಇದು ಟಿಬೆಟ್, ಭಾರತದ ಜಮ್ಮು ಮತ್ತು ಕಾಶ್ಮೀರದ ಮೂಲಕ ಹರಿಯುವ ಮತ್ತು ಪಾಕಿಸ್ತಾನದ ಹೆಚ್ಚಿನ ಭಾಗವನ್ನು ಹಾದುಹೋಗುವ ಸಿಂಧೂ ನದಿಯ ಹೆಸರನ್ನು ಹೊಂದಿದೆ. ಗ್ರೀಕರು ಮತ್ತು ಇರಾನಿಯನ್ನರು ಇದನ್ನು ‘ಹಿಂಡೋಸ್’ ಅಥವಾ ‘ಇಂಡೋಸ್’ ಎಂದು ಕರೆದರು, ಅಂದರೆ ಸಿಂಧೂ ಎಂಬ ನದಿಯ ಪೂರ್ವಕ್ಕೆ ಭೂಮಿ. ಡಚ್, ಫ್ರೆಂಚ್ ಮತ್ತು ಬ್ರಿಟಿಷರ ವಸಾಹತುಶಾಹಿ ವಿಜಯಗಳ ನಂತರ, ಇದನ್ನು ಭಾರತ ದೇಶಕ್ಕೆ ಬಳಸಲಾಯಿತು.
ಪ್ರಾಚೀನ ಭಾರತೀಯ ಗ್ರಂಥವಾದ ವಿಷ್ಣು ಪುರಾಣದಲ್ಲಿ , ಭಾರತ ಎಂಬ ಹೆಸರನ್ನು ಸಮುದ್ರದ ಉತ್ತರಕ್ಕೆ ಮತ್ತು ಹಿಮ ಪರ್ವತಗಳ ದಕ್ಷಿಣಕ್ಕೆ ಇರುವ ಭೂಪ್ರದೇಶವೆಂದು ಉಲ್ಲೇಖಿಸಲಾಗಿದೆ. ಇದು ಹೇಳುತ್ತದೆ:

ಉತ್ತರಂ ಯತ್ಸಮುದ್ರಸ್ಯ ಹಿಮದ್ರೇಶ್ಚೈವ ದಕ್ಷಿಣಾಂ
ವರ್ಷಂ ತದ್ಭಾರತಂ ನಾಮ ಭಾರತೀ ಯತ್ರ ಸಂತತಿಃ ॥

Advertisement

ಅಂದರೆ “ಸಾಗರದ ಉತ್ತರಕ್ಕೆ ಮತ್ತು ಹಿಮಭರಿತ ಪರ್ವತಗಳ ದಕ್ಷಿಣಕ್ಕೆ ಇರುವ ದೇಶವನ್ನು ಭಾರತಂ ಎಂದು ಕರೆಯಲಾಗುತ್ತದೆ; ಅಲ್ಲಿ ಭರತನ ವಂಶಸ್ಥರು ವಾಸಿಸುತ್ತಿದ್ದಾರೆ. ಸಾಂವಿಧಾನಿಕವಾಗಿ, ಭಾರತ ಎಂಬುದು ದೇಶದ ಅಧಿಕೃತ ಸಂಸ್ಕೃತ ಹೆಸರು, ಭಾರತ್ ಗಣರಾಜ್ಯ; ರಿಪಬ್ಲಿಕ್ ಆಫ್ ಇಂಡಿಯಾ.

ಇಲ್ಲಿಯವರೆಗೆ, ಭಾರತ್ ಮತ್ತು ಭಾರತ ಎಂಬ ಹೆಸರುಗಳನ್ನು ಹೆಚ್ಚಾಗಿ ಪರಸ್ಪರ ಬದಲಿಯಾಗಿ ಬಳಸಲಾಗುತ್ತದೆ ಮತ್ತು ಭಾರತ್ ಅನ್ನು ಭಾರತ ಪದದ ಸ್ಥಳೀಯ ಅನುವಾದ ಎಂದು ಅರ್ಥೈಸಲಾಗುತ್ತದೆ. ಭಾರತೀಯ ನಾಗರಿಕರಿಗೆ ನೀಡಲಾದ ಪಾಸ್‌ಪೋರ್ಟ್‌ಗಳು ಸಹ ಭಾರತ್ ಗಣರಾಜ್ಯ ಹಿಂದಿಯಲ್ಲಿ ಮತ್ತು ರಿಪಬ್ಲಿಕ್ ಆಫ್ ಇಂಡಿಯಾ ಇಂಗ್ಲಿಷ್‌ನಲ್ಲಿ ಅಧಿಕೃತ ಹೆಸರುಗಳನ್ನು ಹೊಂದಿವೆ. ಬ್ರಿಟಿಷರು ಇಂಡಿಯಾ ಅಂತಾ ಹೆಸರು ಇಟ್ಟಿದ್ದರು. ಅದನ್ನೇ ಈವರೆಗೆ ಬಳಸಿಕೊಂಡು ಬರಲಾಗುತ್ತಿತ್ತು.

ಇಂಡಿಯಾ ಬದಲು ದೇಶದ ಹೆಸರನ್ನು `ರಿಪಬ್ಲಿಕ್‌ ಆಫ್‌ ಭಾರತ್‌’ ಎಂದು ಕರೆಯಬೇಕು ಎಂಬುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಲಹೆ ನೀಡಿದ್ದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಣಯಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಜಿ20 ಶೃಂಗಸಭೆಗೆ ರಾಷ್ಟ್ರಪತಿಗಳು ಗಣ್ಯರಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ `ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ `ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಿದ ನಂತರ ಈ ಚರ್ಚೆ ಹುಟ್ಟಿಕೊಂಡಿದೆ.

ಇದುವರೆಗಿನ ಹಲವು ಬದಲಾವಣೆಗಳೂ ಇದೇ ಮಾದರಿ ಆಗಿದೆ. ಸರ್ಕಾರದ, ಆಡಳಿತದ ಪ್ರತಿನಿಧಿಗಳು ಯಾವುದನ್ನೂ ಅಂತಿಮ ಕ್ಷಣದವರೆಗೆ ಮಾಹಿತಿ ನೀಡಿರಲಿಲ್ಲ. ಅದಕ್ಕೂ ಮುನ್ನ ಸುದ್ದಿಯಾಗುತ್ತದೆ ಚರ್ಚೆಯಾಗುತ್ತದೆ. ಅದರ ಎಲ್ಲಾ ಆಯಾಮಗಳ ಅಭಿಪ್ರಾಯ ಸಂಗ್ರಹವಾಗುತ್ತದೆ. ಅಗತ್ಯ ಇರುವ ಕಡೆ ತಿದ್ದುಪಡಿಯಾಗಿ , ಜನಪರವಾಗಿ ಜಾರಿಯಾಗುತ್ತದೆ…!. ಈಗಲೂ ಅದೇ ಮಾದರಿ ಬದಲಾವಣೆ ಆಗುತ್ತದಾ ಎನ್ನುವ ಬಲವಾದ ಅಭಿಪ್ರಾಯ ಇದೆ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ
May 24, 2025
11:10 AM
by: ದ ರೂರಲ್ ಮಿರರ್.ಕಾಂ
50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18
May 24, 2025
10:37 AM
by: The Rural Mirror ಸುದ್ದಿಜಾಲ
ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು
May 24, 2025
9:56 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?
May 24, 2025
9:13 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group