ಭಾರತ್‌ ಅಕ್ಕಿ, ಗೋಧಿ ಹಿಟ್ಟಿನ ಬೆನ್ನಲ್ಲೇ ಬರ್ತಿದೆ ಭಾರತ್ ಮಸೂರ್ ದಾಲ್ | ಕೇಂದ್ರ ಸರ್ಕಾರದಿಂದ ಹಣದುಬ್ಬರವನ್ನು ನಿಯಂತ್ರಿಸುವ ಪ್ಲಾನ್ |

February 29, 2024
1:38 PM

ಕೇಂದ್ರ ಸರ್ಕಾರ(Central Govt) ಒಂದಾದ ಮೇಲೊಂದರಂತೆ ಜನಪರ ಯೋಜನೆಗಳನ್ನು(Scheme) ಜಾರಿಗೆ ತರುತ್ತಿದೆ. ದಿನನಿತ್ಯ ಬಳಕೆ ಆಹಾರ ಸಾಮಾಗ್ರಿಗಳ(Foodstuffs)  ಬೆಳೆ ಹೆಚ್ಚಳವಾದ(Price hike) ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತ್ ಅಟ್ಟಾ(Bharat Atta) ಮತ್ತು ಭಾರತ್‌ ಅಕ್ಕಿಯನ್ನು(Bharat Rice) ಕಡಿಮೆ ಬೆಳೆಯಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಈಗ ಕೇಂದ್ರ ಸರ್ಕಾರವು ಭಾರತ್ ಮಸೂರ್ (Lentil) ದಾಲ್ ಅನ್ನು ಮಾರಾಟ ಪ್ರಾರಂಭಿಸಲು ಯೋಜಿಸುತ್ತಿದೆ. ಆದರೆ, ಅದು ಯಾವುದೇ ರಿಯಾಯಿತಿ ಇಲ್ಲದೇ ಪ್ರತಿ ಕೆಜಿಗೆ ಸುಮಾರು ₹ 89, ಆಗಿರುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

ಸಾಮಾನ್ಯವಾಗಿ ಭಾರತ್ ಬ್ರ್ಯಾಂಡ್ ಭಾರೀ ರಿಯಾಯಿತಿಗಳನ್ನು ಒಳಗೊಂಡಿರುತ್ತದೆ. ಹಣದುಬ್ಬರ ನಿಯಂತ್ರಣದಲ್ಲಿರುವಾಗ ಮತ್ತು ಸರ್ಕಾರಿ ಸ್ಟಾಕ್‌ಗಳಲ್ಲಿ ಭಾರೀ ಪ್ರಮಾಣದ ಮಸೂರ್‌ ದಾಲ್‌ ಇದ್ದರೂ ಸಹ ಮಸೂರ್ ಬೆಲೆ ಹೆಚ್ಛಾಗಿದೆ ಎಂದೇ ಹೇಳಬಹುದು. ಮಸೂರ್ ದಾಲ್‌ನ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆ ಬುಧವಾರ ಕೆಜಿಗೆ ₹93.5 ಆಗಿತ್ತು.

ಮಸೂರ್‌ ದಾಲ್‌ನ ಸಂಸ್ಕರಣೆ ಮತ್ತು ವಿತರಣೆ ಹೇಗಾಗುತ್ತದೆ? : ಮೊದಲ ಹಂತದಲ್ಲಿ, NAFED (ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್) ಮತ್ತು NCCF (ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್) 25,000 ಟನ್ ಬೇಳೆಯನ್ನು ಸಂಸ್ಕರಿಸಿ ಪ್ಯಾಕ್ ಮಾಡುತ್ತದೆ ಮತ್ತು ಅದನ್ನು ದೇಶಾದ್ಯಂತ ಕೇಂದ್ರೀಯ ಭಂಡಾರ್ ಮೂಲಕ ವಿತರಿಸಲಾಗುತ್ತದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಕುರಿತು ಅಧಿಕಾರಿಗಳ ಅಭಿಪ್ರಾಯವೇನು?: ಮಾರ್ಚ್ ಮೊದಲ ವಾರದಿಂದ ಮಸೂರ್‌ ದಾಲ್‌ಗಳು ಸಿದ್ಧವಾದ ನಂತರ ಮಾರಾಟ ಪ್ರಾರಂಭವಾಗುವ ನಿರೀಕ್ಷೆಯಿದೆ. ಮಸೂರ್ ದಾಲ್ ಬೆಲೆ ಹೆಚ್ಚಿಲ್ಲದಿದ್ದರೂ, ನಮ್ಮ ಬ್ರಾಂಡ್‌ನ ಸಾಮಾಗ್ರಿಗಳನ್ನು ಹೆಚ್ಚಿಸಲು ನಾವು ಅದನ್ನು ‘ಭಾರತ್’ ಬ್ರಾಂಡ್‌ನಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದೇವೆ. ಆದ್ದರಿಂದ, ನಾವು ರಿಯಾಯಿತಿ ದರದಲ್ಲಿ ಮಸೂರ್ ದಾಲ್ ಅನ್ನು ನೀಡುವುದಿಲ್ಲ. ಮಾರುಕಟ್ಟೆಯ ಬೆಲೆಯನ್ನು ಸುಮಾರು ₹ 89 ಕೆಜಿಗೆ ಇರಿಸಲು ನಿರ್ಧರಿಸಿದ್ದೇವೆ ”ಎಂದು ಅಧಿಕಾರಿ ಹೇಳಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, “ನಾವು ನಮ್ಮ ಸ್ಟಾಕ್‌ನಲ್ಲಿ ಸುಮಾರು 720,000 ಟನ್‌ಗಳಷ್ಟು ಮಸೂರ್ ದಾಲ್‌ ಅನ್ನು ಹೊಂದಿದ್ದೇವೆ, ಹೆಚ್ಚಾಗಿ PSF (ಬೆಲೆ ಸ್ಥಿರೀಕರಣ ನಿಧಿ) ನಲ್ಲಿದೆ. ಕಳೆದ ಕ್ಯಾಲೆಂಡರ್ ವರ್ಷದಲ್ಲಿ, ಭಾರತವು ಸುಮಾರು 3.1 ಮಿಲಿಯನ್ ಟನ್ ಮಸೂರ್‌ ದಾಲ್‌ ಅನ್ನು ಆಮದು ಮಾಡಿಕೊಂಡಿದೆ, ಅದರಲ್ಲಿ ಅರ್ಧದಷ್ಟು ಮಸೂರ್, ಹೆಚ್ಚಾಗಿ ಕೆನಡಾ ಮತ್ತು ಆಸ್ಟ್ರೇಲಿಯಾದಿಂದ ಬಂದಿದೆ” ಎಂದಿದ್ದಾರೆ.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಅವರೇನು ಹೇಳ್ತಿದಾರೆ?:  ಭಾರತ್ ಮಸೂರ್ ದಾಲ್ 1 ಕೆಜಿ ಪ್ಯಾಕ್‌ಗಳಲ್ಲಿ ಲಭ್ಯವಿರುತ್ತದೆ. ಹಣದುಬ್ಬರವನ್ನು ನಿಯಂತ್ರಿಸುವ ಚಿಲ್ಲರೆಯ ಮಧ್ಯಪ್ರವೇಶದ ಭಾಗವಾಗಿ, ಸರ್ಕಾರವು ಭಾರತ್ ಅಕ್ಕಿಯನ್ನು ₹ 29 ಕ್ಕೆ, ಭಾರತ್ ಹಿಟ್ಟನ್ನು ₹ 27.50 ಕ್ಕೆ ಮತ್ತು ಭಾರತ್ ದಾಲ್ (ಚನಾ) ಪ್ರತಿ ಕೆಜಿಗೆ ₹ 60 ಆಗಿದ್ದು NAFED, NCCF ಮತ್ತು ಕೇಂದ್ರೀಯ ಭಂಡಾರ್ ಮೂಲಕ ಮಾರಾಟ ಮಾಡುತ್ತಿದೆ. ಮೊಬೈಲ್ ವ್ಯಾನ್‌ಗಳು ಮತ್ತು ಇ-ಕಾಮರ್ಸ್ ಸೈಟ್‌ಗಳು ಸೇರಿದಂತೆ ರಿಟೇಲ್ ಪಾಯಿಂಟ್‌ಗಳ ಸಂಖ್ಯೆಯನ್ನು ಅಸ್ತಿತ್ವದಲ್ಲಿರುವ 8,000 – 9,000 ರಿಂದ ಸುಮಾರು 18,000 ಕ್ಕೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯೂಷ್ ಗೋಯಲ್ ಈ ಹಿಂದೆ ಹೇಳಿದ್ದಾರೆ. ಜನವರಿಯಲ್ಲಿ, ಆಹಾರ ಹಣದುಬ್ಬರವು ಒಟ್ಟಾರೆ ಗ್ರಾಹಕ ಬೆಲೆಯ ಅರ್ಧದಷ್ಟು ಭಾಗವನ್ನು ಒಳಗೊಂಡಿದ್ದು, ಅದು 8.30% ರಷ್ಟು ಆಗಿತ್ತು, ಇದು ಡಿಸೆಂಬರ್ 2023 ರಲ್ಲಿ 9.53% ರಷ್ಟು ಕಡಿಮೆಯಾಗಿದೆ. ಬುಧವಾರ, ಅಖಿಲ ಭಾರತ ಚಿಲ್ಲರೆ ಮಟ್ಟದಲ್ಲಿ ಮಸೂರ್ ದಾಲ್ ಬೆಲೆಗಳು ಕಳೆದ ತಿಂಗಳಿಗೆ ಸಮನಾಗಿ ಉಳಿದಿವೆ ಆದರೆ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ ತಿಂಗಳಿಗಿಂತ 0.8% ಕಡಿಮೆಯಾಗಿದೆ ಎಂದು ವರದಿ ಮಾಡಿವೆ.

– ಅಂತರ್ಜಾಲ ಮಾಹಿತಿ

The Central Government is working to provide Bharat Atta (Bharat Atta) and Bharat Akki (Bharat Rice) to the people in short crop. Now the central government is planning to sell Bharat masoor (lentil) dal. However, it will be ₹ 89 per kg without any discount, a senior official told the news media.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ
April 14, 2025
7:28 AM
by: ದ ರೂರಲ್ ಮಿರರ್.ಕಾಂ
ಜೂ.30 ರಿಂದ ಮಂಡ್ಯ ಮೈಶುಗರ್ ಕಾರ್ಖಾನೆಯಲ್ಲಿ  ಕಬ್ಬು ಅರೆಯುವ ಪ್ರಕ್ರಿಯೆ ಆರಂಭ
April 14, 2025
6:20 AM
by: The Rural Mirror ಸುದ್ದಿಜಾಲ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ | ಸಚಿವ ಅಮಿತ್‌ ಶಾ ಹೇಳಿಕೆ
April 14, 2025
6:16 AM
by: The Rural Mirror ಸುದ್ದಿಜಾಲ
ಈ 5 ವಸ್ತು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುವುದು ಗ್ಯಾರಂಟಿ
April 14, 2025
6:06 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group