ಕೃಷಿ ಕ್ರಾಂತಿ ಆರಂಭವಾಗುವುದು ಹೀಗೆ….! | ಆಗ್ರೋ ಸಂಸ್ಥೆಯ ಈ ಕಾರ್ಯಕ್ರಮದಲ್ಲಿ ಇಷ್ಟೊಂದು ಕೃಷಿಕರು ಸೇರಿದ್ದೇಕೆ..?

March 8, 2024
2:24 PM
ಒಂದು ಕೃಷಿ ವ್ಯಾಪಾರ ಸಂಸ್ಥೆ ರೈತರೊಂದಿಗೆ ಹೆಚ್ಚು ವ್ಯಾಪಾರ ಮಾಡಿ ಲಾಭ ಮಾಡಿಕೊಳ್ಳಬಹುದು. ಆದರೆ ರೈತರೊಂದಿಗೆ ಸ್ನೇಹ, ಪ್ರೀತಿ ಹಾಗೂ ಸೇವಾ ಬದ್ಧತೆ ಉಳಿಸಿಕೊಳ್ಳುವುದು ಕೂಡಾ ಬಹುಮುಖ್ಯ. ಹಾಗಿದ್ದಾಗಲೇ ತಮ್ಮ ಸಂಸ್ಥೆಯ ಕಾರ್ಯಕ್ರಮಕ್ಕೆ ರೈತರನ್ನು ಆಹ್ವಾನಿಸಿದಾಗ ಸಭೆ ಪೂರ್ತಿಕೃಷಿಕರೂ ಇರಲು ಸಾಧ್ಯ. ಅಂತಹದ್ದೊಂದು ಕಾರ್ಯಕ್ರಮ ನಡೆದದ್ದು ಸುಳ್ಯದಲ್ಲಿ...

ಹಲವು ಸಲ ಕೃಷಿ ಕ್ರಾಂತಿಯ ಬಗ್ಗೆ ಮಾತುಗಳು ಕೇಳುತ್ತವೆ. ಒಂದು ಸಂಸ್ಥೆಯೂ ಕೃಷಿ ಕ್ರಾಂತಿಗೆ ಕಾರಣವಾಗುತ್ತದೆ. ಕೃಷಿಕ ತಾನು ಬೆಳೆದ ಹಾಗೂ ತನಗೆ ನೆರವಾದ ಸಂಸ್ಥೆಗಳನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾನೆ. ಇದಕ್ಕೊಂದು ಉದಾಹರಣೆ ಸುಳ್ಯದಲ್ಲಿ ಕಂಡಿತು. ಸುಳ್ಯದ ಭಾರತ್‌ ಆಗ್ರೋ ಸರ್ವೀಸಸ್‌ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದು. ನಡು ಮಧ್ಯಾಹ್ನದಿಂದ ತಡರಾತ್ರಿಯವರೆಗೆ ನಡೆದ ಕಾರ್ಯಕ್ರಮದ ಸಭಾಭವನದ ತುಂಬಾ ಕೃಷಿಕರು ಭಾಗವಹಿಸಿದ್ದರು. ಇದು ಕೃಷಿಕ ಹಾಗೂ ಒಂದು ಸಂಸ್ಥೆಯ ನಡುವಿನ ಒಡನಾಟ-ಸಂಬಂಧ.

Advertisement
Advertisement
Advertisement

ಸುಳ್ಯದ ಆಗ್ರೋ ಸರ್ವೀಸಸ್‌ ಸಂಸ್ಥೆ ಆರಂಭವಾಗಿ 50 ವರ್ಷಗಳು ಸಂದವು. ಸುಳ್ಯ ಕೃಷಿ ಪ್ರದಾನವಾದ ಊರು. ಬಹುತೇಕ ಗ್ರಾಮೀಣ ಪ್ರದೇಶವನ್ನು ಹೊಂದಿದೆ. ಸುಮಾರು 50 ವರ್ಷಗಳ ಹಿಂದೆ ಸುಳ್ಯ ಇನ್ನಷ್ಟು ಗ್ರಾಮೀಣ ಭಾಗದಿಂದಲೇ ಇತ್ತು, ಮೂಲಭೂತ ಸೌಲಭ್ಯಗಳ ನಿರೀಕ್ಷೆಯಲ್ಲಿಯೇ ಇತ್ತು. ಇಂದು ಬೆಳೆಯುತ್ತಾ ಸಾಗಿದೆ, ಅದರಲ್ಲಿ ಕೃಷಿಯೂ ಬೆಳೆದಿದೆ. ಉಳಿದೆಲ್ಲಾ ಬೆಳವಣಿಗೆಗೆ ಇಲ್ಲಿನ ವಿವಿಧ ಸಾಮಾಜಿಕ ಮುಖಂಡರು ಕೆಲಸ ಮಾಡಿದ್ದರೆ ಕೃಷಿ ಬೆಳವಣಿಗೆಗೆ ಆಗ್ರೋ ಸಂಸ್ಥೆ ಕಾರಣವಾಗಿದೆ. ಹೊಸ ಹೊಸ ಪ್ರಯೋಗಗಳನ್ನು ಕೃಷಿಕರಿಗೆ ಪರಿಚಯಿಸಿದೆ. ಹೀಗಾಗಿ ರೈತರ ಒಡನಾಟದ ಸಂಸ್ಥೆಯಾಗಿದೆ. ಹೀಗಾಗಿ ಈಗ 50 ನೇ ವರ್ಷದ ಸಂದರ್ಭ ಆಗ್ರೋ ಸಂಸ್ಥೆಯ ಮಾಲಕ ರಾಮಚಂದ್ರ ಪಿ ಅವರ ಆಹ್ವಾನವನ್ನು ಗೌರವಿಸಿ ಅನೇಕ ರೈತರು ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೆ ಭಾಗವಹಿಸಿದರು.

Advertisement
ಕೃಷಿ ಚಿಂತನ

ಇಡೀ ಕಾರ್ಯಕ್ರಮ ಆರಂಭವಾದ್ದೇ ಕೃಷಿ ಚಿಂತನದ ಮೂಲಕ. ಇಂದಿನ ಆವಶ್ಯಕತೆಗಳಲ್ಲಿ ಒಂದಾದ ನೀರಾವರಿ ವಿಷಯವೇ ಚಿಂತನದ ವಿಷಯವಾಗಿತ್ತು. ಮಧ್ಯಾಹ್ನ 3.30 ಕ್ಕೆ ಈ ಕಾರ್ಯಕ್ರಮ ಆರಂಭ. ಕೃಷಿ ಕಾರ್ಯಕ್ರಮ ಎಂದರೆ ಕೃಷಿಕರು ಸೇರುವುದು ಕಷ್ಟ. ತುರ್ತು ಕಾರ್ಯದ ನಡುವೆ ಆಸಕ್ತ ಕೃಷಿಕರು ಬರುತ್ತಾರೆ. ಹಾಗಾಗಿ ಎಲ್ಲೆಡೆಯೂ ಕೃಷಿ ಗೋಷ್ಟಿಗಳು ವಿಫಲ ಕಾಣುತ್ತದೆ. ಆದರೆ ಆಗ್ರೋ ಸುವರ್ಣ ಸಂಭ್ರಮದಲ್ಲಿ ಕೃಷಿ ಗೋಷ್ಟಿಗೇ ಕೃಷಿಕರು ಭಾಗವಹಿಸಿ ಆಸಕ್ತಿಯಿಂದ ಯುವ ಸಂಪನ್ಮೂಲ ವ್ಯಕ್ತಿಗಳ ಅನುಭವ ಕೇಳುತ್ತಿದ್ದರು. ನೀರಾವರಿ ವಿಷಯವೂ ಇಂದು ಕೃಷಿಕರಿಗೆ ಅಗತ್ಯವಾದ ವಿಷಯವೂ ಆಗಿದೆ. ಹೀಗಾಗಿ ಸಂಸ್ಥೆಯೊಂದು ಕೃಷಿಕರ ಪರವಾಗಿ ಹೇಗೆ ಬೆಳೆಯುಬಹುದು ಎನ್ನುದಕ್ಕೂ ಇದೊಂದು ಮಾದರಿ ಕಾರ್ಯಕ್ರಮ.

ಕೃಷಿಕರ ಸಂಸ್ಥೆಯೊಂದು ರೈತಪರವಾಗಿ ಹೇಗೆ ಬೆಳೆಯಬಹುದು ಹಾಗೂ ಆ ಸಂಸ್ಥೆಯ ಪ್ರೀತಿಗೆ ಅಷ್ಟೂ ಜನ ಕಾರ್ಯಕ್ರಮಕ್ಕ ಬರಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ಉದ್ಯಮ ಬೆಳೆಯಬೇಕು, ಕೃಷಿಯೂ ಬೆಳೆಯಬೇಕು. ಇದೆರಡೂ ಜೊತೆಯಾಗಿ ಸಾಗಿದರೆ ಮಾತ್ರವೇ ಅಲ್ಲಿ ಪ್ರೀತಿಯೂ ಬೆಳೆಯುತ್ತದೆ. ಅಂತಹದ್ದೊಂದು ಕಾರ್ಯಕ್ರಮ ಸುಳ್ಯದಲ್ಲಿ ನಡೆಯಿತು. ಸುಳ್ಯದ ಕೃಷಿ ಬೆಳೆವಣಿಗೆಯಲ್ಲಿ ಇಂತಹ ಹಲವು ಸಂಸ್ಥೆಗಳ ಪಾಲು ಇದೆ ಎನ್ನುವುದೂ ಸತ್ಯ. ಆಗ್ರೋದಂತಹ ಸಂಸ್ಥೆಗಳು 50 ವರ್ಷಗಳಿಂದ ಕೃಷಿಕರ ಗೂಗಲ್‌ ಆಗಿತ್ತು. ಏನು ಕೇಳಿದರೂ ಅಲ್ಲಿದೆ ಎನ್ನುವುದೇ ಕೃಷಿಕರ ನಂಬಿಕೆಯಾಗಿತ್ತು, ಅದೇ ವಿಶ್ವಾಸ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror