33 ಕೆವಿ ವಿದ್ಯುತ್‌ ಉಪಕೇಂದ್ರ | ತ್ವರಿತ ಕಾಮಗಾರಿಗೆ ಭಾಕಿಸಂ ಒತ್ತಾಯ

July 1, 2025
11:37 AM

ಭಾರತೀಯ ಕಿಸಾನ್ ಸಂಘ, ಎಣ್ಮೂರು ವಲಯದ ವತಿಯಿಂದ  ಪುತ್ತೂರು ವಿಭಾಗ  ಕಾರ್ಯನಿರ್ವಾಹಕ ಇಂಜಿನಿಯರ್ ಅವರಲ್ಲಿ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಕುಳಾಯಿತ್ತೋಡಿಯಲ್ಲಿ ನಿರ್ಮಾಣವಾಗಲಿರುವ 33 ಕೆ.ವಿ. ವಿದ್ಯುತ್ ಉಪಕೇಂದ್ರದ ಪ್ರಗತಿಯ ಬಗ್ಗೆ ವಿಚಾರಿಸಿ, ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಎಣ್ಮೂರು ವಲಯದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಮೆಸ್ಕಾಂ ಸುಬ್ರಹ್ಮಣ್ಯ ವಿಭಾಗದ ಎ.ಇ. ಅವರೊಂದಿಗೂ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿಕೊಟ್ಟು ಕುಳಾಯಿತ್ತೋಡಿ ವಿದ್ಯತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ನೆರವಾಗಬೇಕೆಂದು ಒತ್ತಾಯಿಸಲಾಯಿತು.  ಭಾರತೀಯ ಕಿಸಾನ್ ಸಂಘದ ಎಣ್ಮೂರು ವಲಯದ ಅಧ್ಯಕ್ಷ  ಶ್ರೀನಂದನ.ಕೆ ಇವರು ಮನವಿಯನ್ನು ಹಸ್ತಾಂತರಿಸಿದರು. ಭಾರತೀಯ ಕಿಸಾನ್ ಸಂಘ ಸುಳ್ಯದ ಅಧ್ಯಕ್ಷರಾದ ಎಂ.ಜಿ.ಪ್ರಭಾಕರ ರೈ, ಸದಸ್ಯರಾದ ನೆಟ್ಟಾರು ಗೋಪಾಲಕೃಷ್ಣ ಭಟ್, ಕರ್ವಂಕಲ್ಲು ಗೋಪಾಲಕೃಷ್ಣ ಭಟ್, ಸೀತಾರಾಮ, ಪಿ.ಆರ್.ಭಟ್ ದೇವಸ್ಯ,  ಭಾರತೀಯ ಕಿಸಾನ್ ಸಂಘದ ಎಣ್ಮೂರು ವಲಯದ ಕಾರ್ಯದರ್ಶಿ ಯತಿರಾಜ ಜೊತೆಗಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ
March 5, 2026
11:44 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror