ಸುಳ್ಯ ತಾಲೂಕಿನ ನೀರಾವರಿ ಕೃಷಿ ಪಂಪ್ ಸೆಟ್ಟು | ವಿದ್ಯುತ್ ಶುಲ್ಕ ಬಾಕಿಯನ್ನು ಮನ್ನಾ ಮಾಡಲು ಸಚಿವರಿಗೆ ಮನವಿ |

August 25, 2022
7:05 PM

ಸುಳ್ಯ ತಾಲೂಕಿನ ನೀರಾವರಿ ಕೃಷಿ ಪಂಪ್ ಸೆಟ್ಟುಗಳ 2003 ರಿಂದ 2008 ರ ಅವಧಿಯ ವಿದ್ಯುತ್ ಶುಲ್ಕ ಬಾಕಿಯನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಸುಳ್ಯ ತಾಲೂಕಿನ ಭಾರತೀಯ ಕಿಸಾನ್‌ ಸಂಘದ ನಿಯೋಗವು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್ ಇವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.

Advertisement

ಕೃಷಿ ಪಂಪ್‌ಸೆಟ್ಟುಗಳು ಬಾಕಿಯನ್ನು ದ ಕ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮನ್ನಾ ಮಾಡಲಾಗಿತ್ತು. ಹಾಗಿದ್ದರೂ ಸುಳ್ಯ ತಾಲೂಕಿನ ಕೃಷಿ ಪಂಪುಸೆಟ್ಟುಗಳ ಬಾಕಿ ಮನ್ನಾ ಆಗಿರದೆ, ಈಗಲೂ ಹಳೆ ಬಾಕಿ ಎಂದು ನಮೂದಾಗುತ್ತಿತ್ತು.ಇದರಿಂದ ಕೃಷಿಕರ ಕೃಷಿ ಪಂಪ್ ಸೆಟ್ಟುಗಳ ಖಾತೆ ವರ್ಗಾವಣೆ‌ಯಾಗುವ ಸಂದರ್ಭ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಭಾ ಕಿ ಸಂ ಈ ಬಾಕಿಯನ್ನು ಸುಳ್ಯ ತಾಲೂಕಿನಲ್ಲೂ ಮನ್ನಾ ಮಾಡುವಂತೆ ಮನವಿ ಮಾಡಿದೆ.ಮನವಿ ನೀಡಿದ ವೇಳೆ ಸಚಿವರು ಮೆಸ್ಕಾಂ ಆಢಳಿತ ನಿರ್ದೇಶಕರ ಜೊತೆ ವಿಮರ್ಶಿಸಿ ಮನ್ನಾ ಮಾಡುವ ಭರವಸೆಯನ್ನು ನೀಡಿದರು. ಇದೇ ವೇಳೆ ಸುಳ್ಯ ತಾಲೂಕಿನ ನಿಂತಿಕಲ್ಲು ಸಮೀಪ ಕುಳಾಯಿತ್ತೋಡಿಯಲ್ಲಿ ಸ್ಥಾಪನೆಯಾಗಬೇಕಾದ 33 ಕೆ. ವಿ. ಉಪ ವಿದ್ಯುತ್ ಕೇಂದ್ರದ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಲಾಯಿತು.

ನಿಯೋಗದಲ್ಲಿ ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕಿನ ಅಧ್ಯಕ್ಷರಾದ  ಎನ್. ಜಿ. ಪ್ರಭಾಕರ ರೈ, ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ  ಪಿ. ಜಿ. ಎಸ್. ಎನ್. ಪ್ರಸಾದ್, ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕಿನ ಕಾರ್ಯದರ್ಶಿ ಬಿ. ಸಾಯಿಶೇಖರ್, ಖಜಾಂಚಿ ಕೆ. ಸೀತಾರಾಮ್, ನಿಕಟಪೂರ್ವ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಭಟ್ ನೆಟ್ಟಾರು, ಸದಸ್ಯರಾದ ಗೋಪಾಲಕೃಷ್ಣ ಭಟ್ ಕರುವಂಕಲ್ಲು, ಗಬ್ಲಡ್ಕ ಸದಾಶಿವ ಭಟ್, ಯತಿರಾಜ್ ಓಣಿಯಡ್ಕ ಭಾಗವಹಿಸಿದ್ದರು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ
ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ
April 12, 2025
8:44 PM
by: The Rural Mirror ಸುದ್ದಿಜಾಲ
ತಾಂತ್ರಿಕ ಸಮಸ್ಯೆ | ದೇಶಾದ್ಯಂತ ಯುಪಿಐ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ
April 12, 2025
8:40 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-04-2025 | ಅಲ್ಲಲ್ಲಿ ಗುಡುಗಿನೊಂದಿಗೆ ಸಾಮಾನ್ಯ ಮಳೆ ಸಾಧ್ಯತೆ | ಎ.13 ರಿಂದ ಮಳೆಯ ಪ್ರಮಾಣ ಕಡಿಮೆ
April 12, 2025
1:50 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group