ಭಾರತೀಯ ಕಿಸಾನ್ ಸಂಘದ ವತಿಯಿಂದ ಸುಳ್ಯ ತಾಲೂಕು ಮಟ್ಟದ ಬಲರಾಮ ಜಯಂತಿ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ಬಾಳಿಲ ವಿದ್ಯಾಬೋಧಿನೀ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.
Advertisement
ಭಾಕಿಸಂ ತಾಲೂಕು ಅಧ್ಯಕ್ಷ ಎನ್ ಜಿ ಪ್ರಭಾಕರ ರೈ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಕೃಷಿಕ ರಮೇಶ್ ದೇಲಂಪಾಡಿ ಉದ್ಘಾಟಿಸಿದರು. ಇದೇ ವೇಳೆ ಹೈನುಗಾರಿಕೆ ಬಗ್ಗೆ ಕೃಷಿಕ ಹಿಂದಾರು ಜಯಗುರು ಆಚಾರ್ ಮಾಹಿತಿ ನೀಡಿದರು.ಭಾಕಿಸಂ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಕುಮ್ಕಿ ಹಕ್ಕಿನ ಬಗ್ಗೆ ಮಾಹಿತಿ ನೀಡಿದರು.
Advertisement
ಇದೇ ಸಂದರ್ಭ ಪ್ರಗತಿಪರ ಕೃಷಿಕ ವೆಂಕಟ್ರಮಣ ಭಟ್ ಪವನ, ಪ್ರಗತಿಪರ ಹೈನುಗಾರರಾದ ಶಾಂಭವಿ ಎನ್ ರೈ ಪಿಜಾವು ಅವರನ್ನು ಸನ್ಮಾನಿಸಲಾಯಿತು.
ಭಾಕಿಸಂ ಬಾಳಿಲ ಘಟಕದ ಅಧ್ಯಕ್ಷ ರಾಜಾರಾಮ ನಿಡ್ಮಾರು ಸ್ವಾಗತಿಸಿ ಗೋಪಾಲಕೃಷ್ಣ ಭಟ್ ನೆಟ್ಟಾರು ಪ್ರಸ್ತಾವನೆಗೈದರು. ಭಾಕಿಸಂ ತಾಲೂಕು ಕಾರ್ಯದರ್ಶಿ ಸಾಯಿಶೇಖರ ಕರಿಕಳ ನಿರೂಪಿಸಿದರು.ಪ್ರಸನ್ನ ಬಿಎಸ್ ಹಾಗೂ ಪವನ ಬಿಎಸ್ ಪ್ರಾರ್ಥಿಸಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement