ಸುಳ್ಯ ಪಯಸ್ವಿನಿ ಹಿರಿಯ ಜೇಸಿಗಳ ಸಂಘದ ವತಿಯಿಂದ ಸುಳ್ಯದ ಸಾಹಿತಿ , ಜ್ಯೋತಿಷಿ ಮತ್ತು ಚಿತ್ರ ನಿರ್ದೇಶಕರಾದ ಹಿರಿಯ ಜೇಸಿ ಎಚ್ .ಭೀಮರಾವ್ ವಾಷ್ಠರ್ ಅವರಿಗೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆದ ಪಯಸ್ವಿನಿ ಹಿರಿಯ ಜೇಸಿಗಳ ಮಾಸಿಕ ಸಭೆಯಲ್ಲಿ ಸನ್ಮಾನಿಸಿ ಗೌರವಿಸಿದರು.
Advertisement
ಸಾಹಿತ್ಯದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಹಿರಿಯ ಜೇಸಿಗಳ ಸಂಘದ ಅಧ್ಯಕ್ಷರಾದ ಜೇಸಿ ಪಿ ಎಸ್ ಗಂಗಾಧರ್ ಮತ್ತು ಜೇಸಿ ಎಂ ಬಿ ಸದಾಶಿವ ಅವರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.
Advertisement
ಈ ಸಂದರ್ಭದಲ್ಲಿ ಜೇಸಿ ಎಸ್ ಆರ್ ಸೂರಯ್ಯ , ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಹಿರಿಯ ಜೇಸಿಗಳಾದ ಜೇಸಿ ಚಂದ್ರಶೇಖರ್ ಪೇರಾಲು , ಜೇಸಿ ಕೆ ಎಮ್ ಮುಸ್ತಫಾ , ಜೇಸಿ ದಿನೇಶ್ ಮಡಪ್ಪಾಡಿ , ಜೇಸಿ ದಿನೇಶ್ ಅಂಬೆಕಲ್ಲು ,ಜೇಸಿ ಕೆ ಟಿ ವಿಶ್ವನಾಥ್ , ಜೇಸಿ ಲೋಕೇಶ್ ಪೆರ್ಲಂಪಾಡಿ ಇನ್ನಿತರರು ಉಪಸ್ಥಿತರಿದ್ದರು. ಸಾಹಿತಿ ಮತ್ತು ಗಾಯಕ ಭೀಮರಾವ್ ವಾಷ್ಠರ್ ರವರು ಕನ್ನಡ ರಾಜ್ಯೋತ್ಸವದ ಗೀತೆಗಳನ್ನು ಹಾಡಿದರು .
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement