ಮಹಿಳೆಯರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಸರಕಾರ ಹಲವು ಯೋಜನೆಯನ್ನು ಜಾರಿಗೊಳಿಸಿದೆ. ಅದರಲ್ಲಿ ಈ ಬಿಮಾ ಸಖಿ ಯೋಜನೆಯೂ ಒಂದು. ಈ ಯೋಜನೆಯ ಮೂಲಕ ಮಹಿಳೆಯರಿಗೆ ತರಬೇತಿ, ವೃತ್ತಿ ಕೌಶಲ್ಯ ಮತ್ತು ಹಣಕಾಸಿನ ವಿತರಣೆ ನೀಡಲಾಗುತ್ತದೆ. ಇದರಿಂದ ಮಹಿಳೆಯರಿಗೆ ಆದಾಯದ ಗಳಿಸಲು ಸಹಾಯಕವಾಗಿದೆ. ದೇಶದ ಅತಿದೊಡ್ಡ ಸರಕಾರ ವಿಮಾ ಸಂಸ್ಥೆ, ಲೈಫ್ ಇನ್ಸೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಇದನ್ನು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿದೆ.
ಈ ಬಿಮಾ ಯೋಜನೆಯಲ್ಲಿ ಆದಾಯದ ದೃಷ್ಟಿಯಲ್ಲಿ ನೋಡುವುದಾದರೆ ತುಂಬಾ ಅನುಕೂಲಕರವಾಗಿದೆ. ಹೇಗೆಂದರೆ ಮೊದಲ ವರ್ಷಕ್ಕೆ ತಂಗಳಿಗೆ 7000 ರೂ ಎರಡನೇ ವರ್ಷಕ್ಕೆ 6000 ರೂ ಮೂರನೇ ವರ್ಷ 5000 ರೂ ಗಳಂತೆ ಸ್ಟೈಪೆಂಡ್ ಸಿಗುತ್ತದೆ. ಜೊತೆಗೆ ವಿಮೆ ಪಾಲಿಸಿಗಳ ಮಾರಾಟದ ಮೇಳೆ ಕಮಿಷನ್ ಹಾಗೂ ಬೋನಸ್ ಗಳ ಮೂಲಕ 10,000 ರಿಂದ 30,000 ರೂ ಮಾನಿಕ ಆದಾಯ ಗಳಿಸುವ ಸಾಧ್ಯತೆಗಳಿರುತ್ತದೆ.
ಬಿಮಾ ಯೋಜನೆಯಲ್ಲಿ ಬೇಕಾಗಿರುವ ಆರ್ಹತೆಗಳು:
- ಭಾರತೀಯ ನಾಗರಿಕನಾಗಿರಬೇಕು.
- 18ರಿಂದ 70ವಯಸ್ಸಿನ ನಡುವೆ ಇರಬೇಕು.
- ಕನಿಷ್ಠ 10 ನೇ ತರಗತಿ ಪಾಸ್ ಆಗಿರಬೇಕು.
- ಹಿಂದಿನ ಎಲ್ಐಸಿ ಏಜೆಂಟ್ ಅಥವಾ ಕುಟುಂಬ ಸದಸ್ಯರಾಗಿರಬಾರದು.
- ಹಿಂದುಳಿದ ವರ್ಗದ ಮಹಿಳೆಯರಿಗೆ ವಿಶೇಷ ಆದ್ಯತೆ.
ಬೇಕಾದ ದಾಖಲೆಗಳು:
- 10ನೇ ತರಗತಿ ಅಂಕಪಟ್ಟಿ
- ಅಧಿಕೃತ ಗುರುತು ಚೀಟಿ
- ಪಾಸ್ಪೋರ್ ಸೈಜ್ ಪೋಟೋಗೂ
- ಬ್ಯಾಂಕ್ ಖಾತೆ ವಿವರಗಳು
- ಆಧಾರ್ ಕಾರ್ಡ್
- ಜಮೆಯ ಮಾರ್ಗಸೂಚಿ
ಅರ್ಜಿ ಸಲ್ಲಿಸುವ ವಿಧಾನ:
- ಆನ್ ಲೈನ್ ವಿಧಾನ: ಎಲ್ಐಸಿ ಅಧಿಕೃತ ವೆಬ್ ಸೈಟ್ lcindia̤in ನಲ್ಲಿ ವಿಭಾಗದಿಂದ, ಓಟಿಪಿ ಮೂಲಕ ಲಾಗಿನ್ ಮಾಡಿ.
- ಆಪ್ ಲೈನ್ ವಿಧಾನ: ಸಮೀಪದ ಎಲ್ಐಸಿ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸಿಬ್ಬಂದಿ ನೆರವು ಸಿಗುತ್ತದೆ.


