#Arecanut | ಭೂತಾನ್‌ ನಿಂದ ಹಸಿ ಅಡಿಕೆ ಆಮದು | ಭಾರತದ ಅಡಿಕೆಗೆ ಯಾವುದೇ ಪರಿಣಾಮ ಇಲ್ಲ | ಹಾಗಿದ್ದರೂ ಅಡಿಕೆ ಧಾರಣೆ ಏಕೆ ಕುಸಿಯುತ್ತಿದೆ..?

August 16, 2023
2:56 PM
ಭೂತಾನ್‌ನಿಂದ ಹಸಿ ಅಡಿಕೆ ಆಮದು ಆದರೂ ಭಾರತದ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಂ ಬೀರದು ಎಂದು ಎಲ್ಲರೂ ಹೇಳುತ್ತಲೇ ಇದ್ದಾರೆ. ಹಾಗಿದ್ದರೂ ಅಡಿಕೆ ಧಾರಣೆ ಕುಸಿಯುತ್ತಿದೆ. ಈಗ ಹಲವು ಕಡೆ ಅಡಿಕೆ ಕೊಯ್ಲು ಆರಂಭವಾಗುತ್ತದೆ. ಅದೇ ವೇಳೆ ಮಾರುಕಟ್ಟೆಯೂ ಕುಸಿದಿದೆ. ಇದರ ಹಿನ್ನೆಲೆ ಏನು ಎಂದು ಕೃಷಿಕ ಪ್ರಬಂಧ ಅಂಬುತೀರ್ಥ ಪ್ರಶ್ನಿಸಿದ್ದಾರೆ.

ಭೂತಾನ್ ನಿಂದ ಹಸಿ ಅಡಿಕೆ ಆಮದು.. ದೇಶಿ ಅಡಿಕೆ ದರಕ್ಕೆ ಯಾವುದೇ ಪರಿಣಾಮ ಬೀರದು.. ಈ ಹೇಳಿಕೆಯನ್ನು ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರು ಸೇರಿದಂತೆ ಎಲ್ಲಾ ಪ್ರಮುಖ ಸಹಕಾರಿಗಳೂ ನೀಡುತ್ತಿದ್ದಾರೆ. ಆದರೆ ಈ ಭೂತಾನ್ ಅಡಿಕೆ ಆಮದಿನ “ಮುಟ್ಟಸ” ಮಾಡಿದ ದಿನದಿಂದ ಅಡಿಕೆ ದರ ಕುಸಿಯುತ್ತಲೇ ಇದೆ. ಇದು ಏಕೆ?

ಮಲೆನಾಡಿನ ಅಸಂಖ್ಯಾತ ಚಿಕ್ಕ ಅತಿಚಿಕ್ಕ ಅಡಿಕೆ ಬೆಳೆಗಾರರಿಗೆ ಇದೊಂದು ಉಡುಗೊರೆಯನ್ನು ನಮ್ಮ ಸ್ಥಾಪಿತ ಮಾರುಕಟ್ಟೆ ಹಿತಾಸಕ್ತಿಗಳು ನಾವೇ ಅತ್ಯಂತ ಇಷ್ಟಪಟ್ಟು ಗೆಲ್ಲಿಸಿದ ಪಕ್ಷದ ಸರ್ಕಾರದ ಆಡಳಿತ ಯಂತ್ರವನ್ನು “ರಿಪೇರಿ” ಮಾಡಿಕೊಂಡು ಈ “ಬೂತ” ವನ್ನು ಆಮದು ಮಾಡಿ ಅಡಿಕೆ ಬೆಲೆ ಕುಸಿಯುವಂತೆ ಮಾಡುತ್ತಾರೆ. ಹದಿನೇಳು ಸಾವಿರ ಟನ್ ಹಸಿ ಅಡಿಕೆ ಯ ಆಮದಿನ ಜೊತೆಯಲ್ಲಿ ಇನ್ಯಾವ ಯಾವ ತರದ ಆಡಿಕೆ ಆ ಒಪ್ಪಂದ ಅಡಿಯಲ್ಲಿ “ನುಸುಳಿ ಕೊಂಡು “ಆಮದಾಗಿ ಬರುತ್ತದೋ…!! ಗೊತ್ತಿಲ್ಲ..!!

ಬಡ ಮದ್ಯಮ ಚಿಕ್ಕ ಹಿಡುವಳಿಯ ಅಡಿಕೆ ಬೆಳೆಗಾರ ನವೆಂಬರ್ ಡಿಸೆಂಬರ್ ನಲ್ಲಿ ತನ್ನ ಕೃಷಿ ಉತ್ಪನ್ನ ಬಿಸಿ ಬಿಸಿ ಅಡಿಕೆಯನ್ನು ಮಾರುಕಟ್ಟೆಗೆ ಕೊಂಡೊಯ್ದಾಗ ಯಥಾ ಪ್ರಕಾರ ಕೆಂಪಡಿಕೆಗೆ ಕ್ವಿಂಟಾಲ್ ಗೆ ನಲವತ್ತೆರೆಡು ಸಾವಿರ ರೂಪಾಯಿ ಮಾತ್ರ ವಾಗಿರುತ್ತದೆ.. ‌ಈ ಐವತ್ತಾರು ಐವತ್ತೆಂಟು ಸಾವಿರ ರೂಪಾಯಿ ಅಡಿಕೆ ದರ ಅದೃಷ್ಟವಂತ ದೊಡ್ಡ ಅಡಿಕೆ ಬೆಳೆಗಾರರಿಗೆ ಮಾತ್ರ….

ಈಗ ಬಯಲು ಸೀಮೆಯ ಅಡಿಕೆ ಕೊಯ್ಲು ಆರಂಭಿಕವಾಗಿದೆ. ಸೆಪ್ಟೆಂಬರ್ ಅಕ್ಟೋಬರ್ ತಿಂಗಳು ಕಳೆದು ನವೆಂಬರ್ ಹೊತ್ತಿಗೆ ಮಲೆನಾಡಿನ ಅಡಿಕೆ ಬೆಳೆಗಾರ ಸುಗ್ಗಿ ಶುರುಮಾಡುವಾಗ ಬಯಲು ಸೀಮೆಯ ಅಡಿಕೆ ಮಾರುಕಟ್ಟೆ ಗೆ ಬಂದ ಪರಿಣಾಮ ಆಗ ಈ ನೆಪಕ್ಕೆ ಇನ್ನೂ ದರ ಕೆಳಕ್ಕೆ ಕುಸಿದಿರುತ್ತದೆ.

ಒಟ್ಟಿನಲ್ಲಿ ಅಡಿಕೆ ಆಮದಾದರೂ ದರ ಕುಸಿಯೋಲ್ಲ.. ಹುಚ್ಚಾಪಟ್ಟೆ ಅಡಿಕೆ ಬೆಳೆ ವಿಸ್ತರಣೆಯಾದರೂ ಅಡಿಕೆ ದರ ಕುಸಿಯೋಲ್ಲ..
ಆದರೆ ಮಾರುಕಟ್ಟೆಯಲ್ಲಿ ಬೆಲೆ ಮಾತ್ರ ಕಡಿಮೆಯಾಗುತ್ತದೆ. ಈ ಒಗಟಿಗೆ ಯಾರಾದರೂ ಬುದ್ದಿವಂತ ರೈತರು ಉತ್ತರ ಕೊಡುವಿರಾ..?

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?
March 23, 2026
8:55 PM
by: ಅರುಣ್‌ ಕುಮಾರ್ ಕಾಂಚೋಡು
ಮಂಗಳೂರು ಅಡಿಕೆ ಮಾರುಕಟ್ಟೆ | ಐದು ವರ್ಷದ ಧಾರಣೆ ಹೇಳುವ ಏರುಪೇರುಗಳ ಕಥೆ..!
March 23, 2026
7:25 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ಉಷ್ಣತೆ ಕೃಷಿಗೆ ದೊಡ್ಡ ಸಂಕಷ್ಟ | ಉತ್ಪಾದನೆ ಕುಸಿತದ ಭೀತಿ
March 22, 2026
6:46 AM
by: ದ ರೂರಲ್ ಮಿರರ್.ಕಾಂ
ʼಕೊಕೊ ಕ್ರೀಂ’ ಗೆ ಬೇಡಿಕೆ…! ಇದು ರೈತನ ಇನೋವೇಶನ್ – ಇಲ್ಲಿ ಡೈರಿ ಇಲ್ಲ… ಕೆಮಿಕಲ್ ಇಲ್ಲ…ತೆಂಗಿನ ಹಾಲು ಮಾತ್ರಾ..!
March 21, 2026
7:41 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror