BIG BREAKING : ಸಂಸದೀಯ ಕಾರ್ಯದರ್ಶಿ ಎದುರಿನಲ್ಲೇ ಸ್ಫೋಟಗೊಂಡ ಕಾಂಗ್ರೆಸ್ ಭಿನ್ನಮತ- ಸಭೆ ಅರ್ಧಕ್ಕೆ ಮೊಟಕು

Advertisement
Advertisement
Advertisement

ಸುಳ್ಯ: ವಿಧಾನ ಪರಿಷತ್ ಸದಸ್ಯ ಮತ್ತು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಎದುರಿನಲ್ಲೇ ಸುಳ್ಯದ ಕಾಂಗ್ರೆಸ್ ನ ಭಿನ್ನಮತ ಸ್ಪೋಟಗೊಂಡು ಕಾರ್ಯಕರ್ತರ ಸಭೆ ಅರ್ಧಕ್ಕೆ ಮೊಟಕುಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.

Advertisement

ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಕಂದಾಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಖಾಸಗೀ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಸಭೆಗೆ ಐವನ್ ಆಗಮಿಸಿದ್ದರು. ನ.ಪಂ.ಚುನಾವಣೆಯಲ್ಲಿ ಬೂಡು ವಾರ್ಡ್ ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ರಿಯಾಝ್ ಕಟ್ಟೆಕ್ಕಾರ್ ಕಾಂಗ್ರೆಸ್ ಸಭೆಗೆ ಆಗಮಿಸಿದ್ದು ಗದ್ದಲಕ್ಕೆ ಕಾರಣವಾಯಿತು. ರಿಯಾಝ್ ಸಭೆಯಲ್ಲಿ ಕುಳಿತಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿ ಗೆದ್ದ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಸಭೆಗೆ ಆಗಮಿಸಿದ್ದು ಯಾಕೆ ಎಂದು ಕಾರ್ಯಕರ್ತರು ಪ್ರಶ್ನಿಸಿದರು. ಬಳಿಕ ಅವರನ್ನು ಹೊರ ಹೋಗಬೇಕು ಎಂದು ಕಾಂಗ್ರೆಸ್ ಮುಖಂಡರು ಸೂಚಿಸಿದರು ಎನ್ನಲಾಗಿದೆ. ಇದರಿಂದ ಆರಂಭಗೊಂಡ ಮಾತಿನ ಚಕಮಕಿ ತಾರಕಕ್ಕೇರಿತು. ಚರ್ಚೆಯ ಮಧ್ಯೆ ಕಾಂಗ್ರೆಸ್‌ ನಾಯಕರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು.

Advertisement

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಮತ್ತು ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ ಮಧ್ಯೆ ಹಾಗು ವೆಂಕಪ್ಪ ಗೌಡ ಮತ್ತು ಗೋಕುಲ್ ದಾಸ್ ಮಧ್ಯೆ ವಾಗ್ಯುದ್ಧವೇ ನಡೆಯಿತು. ನಾಯಕರ ಮಧ್ಯೆ ಮಾತಿನ ಚಕಮಕಿ ತಾರಕಕ್ಕೇರಿ ಸಭೆಯಲ್ಲಿ ತೀವ್ರ ಗದ್ದಲ ಗೊಂದಲ ಉಂಟಾಯಿತು ಎಂದು ತಿಳಿದು ಬಂದಿದೆ. ಈ ಸಂದರ್ಭ ಸಭೆ ಅರ್ಧಕ್ಕೆ ಮೊಟಕು ಗೊಂಡಿತು.

ಬಳಿಕ ನಾಯಕರನ್ನು ಸಮಾಧಾನ ಪಡಿಸಿ ಐವನ್ ಡಿಸೋಜ ಸಭೆಯಿಂದ ತೆರಳಿದರು. ಹಲವು ಸಮಯಗಳಿಂದ ಹೊಗೆಯಾಡುತ್ತಿದ್ದ ಕಾಂಗ್ರೆಸ್ ಒಳಗಿನ ಭಿನ್ನಮತ ಇಂದು ರಾಜ್ಯ ನಾಯಕರ ಎದುರಿನಲ್ಲೇ ಒಮ್ಮಿಂದೊಮ್ಮೆಲೆ ಸ್ಫೋಟಗೊಂಡಿತು ಎಂದು ಹೇಳಲಾಗುತಿದೆ.

Advertisement
Advertisement

ಇದಕ್ಕೂ ಮುನ್ನ ನ.ಪಂ.ಪಕ್ಷೇತರ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಐವನ್ ಡಿಸೋಜ ಅವರನ್ನು ತನ್ನ ವಾರ್ಡ್ ಗೆ ಕರೆದೊಯ್ಯಲು ಪ್ರಯತ್ನ ನಡೆಸಿದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ ಕಾರಣ ಐವನ್ ಡಿಸೋಜ ಹೋಗಲು ಒಪ್ಪಿರಲಿಲ್ಲ. ಬಳಿಕ ರಿಯಾಝ್ ಸಭೆಗೆ ಆಗಮಿಸಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು ಎನ್ನಲಾಗುತಿದೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "BIG BREAKING : ಸಂಸದೀಯ ಕಾರ್ಯದರ್ಶಿ ಎದುರಿನಲ್ಲೇ ಸ್ಫೋಟಗೊಂಡ ಕಾಂಗ್ರೆಸ್ ಭಿನ್ನಮತ- ಸಭೆ ಅರ್ಧಕ್ಕೆ ಮೊಟಕು"

Leave a comment

Your email address will not be published.


*