ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ 60 ಅಡಿ ಉದ್ದದ ಕಬ್ಬಿಣದ ಸೇತುವೆ ಕಣ್ಮರೆಯಾಗಿದೆ. ಅದೂ ಹಾಡು ಹಗಲೇ…!. ನೀರಾವರಿ ಇಲಾಖೆಯ ಅಧಿಕಾರಿಗಳಂತೆ ನಟಿಸಿದ ಕಳ್ಳರ ಗುಂಪು ಜೆಸಿಬಿ, ಗ್ಯಾಸ್ ಕಟರ್ ಮತ್ತು ಇತರ ಕೆಲವು ಉಪಕರಣಗಳ ಮೂಲಕ ಸೇತುವೆಯನ್ನು ಒಡೆದು ಕಬ್ಬಣದೊಂದಿಗೆ ಪರಾರಿಯಾಗಿದೆ.
ವರದಿಗಳ ಪ್ರಕಾರ, ರೋಹ್ತಾಸ್ ಜಿಲ್ಲೆಯ ನಸ್ರಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮಿಯಾವರ್ ಗ್ರಾಮದಲ್ಲಿ ಸೇತುವೆ ಕಳ್ಳತನದ ಘಟನೆ ನಡೆದಿದೆ. 1972 ರ ಸುಮಾರಿಗೆ ಅರ್ರಾ ಕಾಲುವೆಯಲ್ಲಿ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಸಾಕಷ್ಟು ಹಳೆಯದಾಗಿತ್ತು ಮತ್ತು ಅಪಾಯಕಾರಿ ಎಂದು ಘೋಷಿಸಲಾಯಿತು. ಹಾಗಾಗಿ ಬಳಕೆಯಲ್ಲಿ ಇರಲಿಲ್ಲ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel