ಬಿಹಾರದ ಸೋನೆಪುರದಲ್ಲಿ ನಡೆಸಿದ ಫುಟ್‌ಬಾಲ್ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಶಾಸಕ ವಿನಯ್ ಕುಮಾರ್ ಸಿಂಗ್ ಭಾರಿ ಪಟಾಕಿ ಹಚ್ಚಿ ಓಡುವಾಗ ಮುಗ್ಗರಿಸಿ ಬಿದ್ದ ಪ್ರಸಂಗ ನಡೆದಿದ್ದು, ಆ ಕ್ಷಣದ ವಿಡಿಯೋ ವೈರಲ್ ಆಗಿದೆ. ವಿನಯ್ ಸಿಂಗ್ ಅವರು ಬಿಹಾರ ಬಿಜೆಪಿಯ ಶಿಸ್ತು ಸಮಿತಿಯ ಅಧ್ಯಕ್ಷರಾಗಿದ್ದು ಸೋನೆಪುರದ ಶಾಸಕರೂ ಕೂಡ ಆಗಿದ್ದಾರೆ.
ಫುಟ್ಬಾಲ್ ಪಂದ್ಯವನ್ನು ಉದ್ಘಾಟಿಸಲು ಶಾಸಕರು ಮಂಗಳವಾರ ಮಲ್ಖಾಚಕ್‌ಗೆ ಆಗಮಿಸಿದ್ದರು. ಪಂದ್ಯಾವಳಿಗೆ ಚಾಲನೆ ಕೊಡಲಾಯಿತೆಂದು ಘೋಷಿಸಲು, ಸಿಂಗ್ ಪಟಾಕಿಯನ್ನು ಹೊತ್ತಿಸಬೇಕಾಗಿತ್ತು. ಅವರು ಪಟಾಕಿಯನ್ನು ಹೊತ್ತಿಸಿದ ತಕ್ಷಣ, ಬೆದರಿ ತಿರುಗಿ ಜೋರಾಗಿ ಓಡಿ ಬಿಟ್ಟರು. ಓಡುವಾಗ ಸಮತೋಲನ ಕಳೆದುಕೊಂಡು ಮುಗ್ಗರಿಸಿ ಬಿದ್ದಿದ್ದಾರೆ. ಕೊನೆಗೆ ಅಲ್ಲಿದ್ದ ಆಯೋಜಕರು ಅವರನ್ನು ಎತ್ತಿ ಉಪಚರಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel