ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ 60 ಅಡಿ ಉದ್ದದ ಕಬ್ಬಿಣದ ಸೇತುವೆ ಕಣ್ಮರೆಯಾಗಿದೆ. ಅದೂ ಹಾಡು ಹಗಲೇ…!. ನೀರಾವರಿ ಇಲಾಖೆಯ ಅಧಿಕಾರಿಗಳಂತೆ ನಟಿಸಿದ ಕಳ್ಳರ ಗುಂಪು ಜೆಸಿಬಿ, ಗ್ಯಾಸ್ ಕಟರ್ ಮತ್ತು ಇತರ ಕೆಲವು ಉಪಕರಣಗಳ ಮೂಲಕ ಸೇತುವೆಯನ್ನು ಒಡೆದು ಕಬ್ಬಣದೊಂದಿಗೆ ಪರಾರಿಯಾಗಿದೆ.
ವರದಿಗಳ ಪ್ರಕಾರ, ರೋಹ್ತಾಸ್ ಜಿಲ್ಲೆಯ ನಸ್ರಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮಿಯಾವರ್ ಗ್ರಾಮದಲ್ಲಿ ಸೇತುವೆ ಕಳ್ಳತನದ ಘಟನೆ ನಡೆದಿದೆ. 1972 ರ ಸುಮಾರಿಗೆ ಅರ್ರಾ ಕಾಲುವೆಯಲ್ಲಿ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಸಾಕಷ್ಟು ಹಳೆಯದಾಗಿತ್ತು ಮತ್ತು ಅಪಾಯಕಾರಿ ಎಂದು ಘೋಷಿಸಲಾಯಿತು. ಹಾಗಾಗಿ ಬಳಕೆಯಲ್ಲಿ ಇರಲಿಲ್ಲ.
ಇದೇ ವೇಳೆ ನೀರಾವರಿ ಇಲಾಖೆಯ ಅಧಿಕಾರಿಗಳು ಎಂಬ ನೆಪದಲ್ಲಿ ಸ್ಥಳೀಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಾಯವನ್ನೂ ಪಡೆದು ಅವರ ಸಮ್ಮುಖದಲ್ಲೇ ಇಡೀ ಸೇತುವೆಯನ್ನು ಕಳ್ಳರು ಕದ್ದೊಯ್ದಿರುವುದು ಪ್ರಕರಣದ ಕುತೂಹಲಕಾರಿ ಸಂಗತಿ. 3 ದಿನಗಳ ಕಾಲ ಕಳ್ಳರು ಕಾರ್ಯಾಚರಣೆ ಮುಂದುವರಿಸಿದರೂ ಸ್ಥಳೀಯ ನೌಕರರಿಗಾಗಲಿ, ಉನ್ನತ ಅಧಿಕಾರಿಗಳಿಗಾಗಲಿ, ಗ್ರಾಮಸ್ಥರಿಗಾಗಲಿ ಸುಳಿವು ಸಿಕ್ಕಿರಲಿಲ್ಲ.
ಕರ್ನಾಟಕದ ವಿವಿಧ ಭಾಗಗಳಲ್ಲಿ ಮತ್ತೆ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಹಾಗೂ…
ರಾಜ್ಯದ ಹಲವೆಡೆ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಹಗುರ ಮಳೆಯ ಸಾಧ್ಯತೆ…
ರಾಜ್ಯದಲ್ಲಿ ಹೋಟೆಲ್‌ಗಳಿಗೆ ವಾಣಿಜ್ಯ LPG ಕೊರತೆಯನ್ನು ಸರಿಪಡಿಸಲು ಮಂಗಳವಾರದಿಂದ ಹೆಚ್ಚುವರಿ ಸಿಲಿಂಡರ್ ಸರಬರಾಜು…
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.…
ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಿಂದ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.…
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಚಟುವಟಿಕೆ ಮತ್ತೆ ಆರಂಭವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ…