Advertisement
MIRROR FOCUS

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

Share

ಕೃಷಿ ಕೂಳೆ ಇನ್ನು ಮುಂದೆ ಮಾಲಿನ್ಯದ ಮೂಲವಲ್ಲ, ಆದಾಯದ ಮೂಲವಾಗಲಿದೆ. ಬಯೋ-ಬಿಟುಮೆನ್ ತಂತ್ರಜ್ಞಾನದಿಂದ ಕೂಳೆಯಿಂದ ರಸ್ತೆ ನಿರ್ಮಾಣ ಸಾಧ್ಯವಾಗುತ್ತಿದ್ದು, ರೈತರ ಆದಾಯ ಹೆಚ್ಚಿಸುವ ಜೊತೆಗೆ ಪರಿಸರ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಕೂಳೆ ಈಗ ಸಂಪತ್ತಾಗಲಿದೆ : ಹಿಂದೆ ರೈತರಿಗೆ ತೊಂದರೆ ಹಾಗೂ ಮಾಲಿನ್ಯದ ಕಾರಣವಾಗಿದ್ದ ಕೃಷಿ ಕೂಳೆ ಈಗ ಆದಾಯದ ಮೂಲವಾಗುತ್ತಿದೆ. ಹೊಸ ಬಯೋ-ಬಿಟುಮೆನ್ ತಂತ್ರಜ್ಞಾನ ಮೂಲಕ ಕೂಳೆಯನ್ನು ರಸ್ತೆ ನಿರ್ಮಾಣದಲ್ಲಿ ಬಳಸುವ ವ್ಯವಸ್ಥೆ ಅಭಿವೃದ್ಧಿಯಾಗಿದೆ.

ದೆಹಲಿಯಲ್ಲಿ ಮಹತ್ವದ ಘೋಷಣೆ : ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ದೆಹಲಿಯಲ್ಲಿ ನಡೆದ ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇದು ದೇಶಕ್ಕೆ ಐತಿಹಾಸಿಕ ಹೆಜ್ಜೆ ಎಂದು ಹೇಳಿದರು. ಈ ತಂತ್ರಜ್ಞಾನವು ರೈತರ ಆದಾಯ ಹೆಚ್ಚಿಸುತ್ತದೆ, ಮಾಲಿನ್ಯ ಕಡಿಮೆ ಮಾಡುತ್ತದೆ, ಬಿಟುಮೆನ್ ಆಮದು ಕಡಿಮೆ ಮಾಡುತ್ತದೆ, ಸ್ವಾವಲಂಬಿ ಭಾರತ ಗುರಿಗೆ ನೆರವಾಗುತ್ತದೆ ಎನ್ನುವುದು ಈ ತಂತ್ರಜ್ಞಾನದ ಲಾಭಗಳು.

ಕೂಳೆ ಸುಡುವುದಕ್ಕೆ ಬ್ರೇಕ್ :  ಕೃಷಿ ಕೂಳೆ ಸುಡುವುದನ್ನು ಪ್ರಕೃತಿಗೆ ವಿರುದ್ಧವೆಂದು ಹೇಳಿದ ಸಚಿವರು, ಇದರಿಂದಾಗಿ ಸಣ್ಣ ಜೀವಿಗಳು ನಾಶವಾಗುತ್ತವೆ, ಮಣ್ಣಿನ ಆರೋಗ್ಯ ಹಾನಿಯಾಗುತ್ತದೆ ಹಾಗೂ ವಾಯು ಮಾಲಿನ್ಯ ಹೆಚ್ಚುತ್ತದೆ.  ಇದಕ್ಕೆ ಪರಿಹಾರವಾಗಿ ಕೂಳೆಯಿಂದ ಆದಾಯ ಗಳಿಸುವ ದಾರಿ ಕಂಡುಕೊಳ್ಳಲಾಗಿದೆ ಎಂದು ಹೇಳಿದರು.

ರೈತರಿಗೆ ಹೊಸ ಆದಾಯದ ದಾರಿ : ಹಿಂದೆ ಕೃಷಿ ಕೂಳೆಯನ್ನು ಪಶು ಮೇವು ಅಥವಾ ಗೃಹಬಳಕೆಗೆ ಬಳಸಲಾಗುತ್ತಿತ್ತು. ಆದರೆ ಈಗ ಸಮಯದ ಕೊರತೆಯಿಂದ ರೈತರು ಅದನ್ನು ಸುಡುತ್ತಿದ್ದರು. ಈ ಹೊಸ ತಂತ್ರಜ್ಞಾನದಿಂದ, ಕೂಳೆ ಖರೀದಿ ಮಾರುಕಟ್ಟೆ ಸೃಷ್ಟಿಯಾಗುತ್ತದೆ, ರೈತರಿಗೆ ಹೆಚ್ಚುವರಿ ಆದಾಯ ಸಿಗುತ್ತದೆ ಹಾಗೂ ತ್ಯಾಜ್ಯವು ಸಂಪತ್ತಾಗಿ ಮಾರ್ಪಡುತ್ತದೆ.

ಆಮದು ಕಡಿಮೆಯಾಗಲಿದೆ :  ಬಯೋ-ಬಿಟುಮೆನ್ ಬಳಕೆಯಿಂದ ದೇಶದ ಬಿಟುಮೆನ್ ಆಮದು ವೆಚ್ಚ ಕಡಿಮೆಯಾಗಲಿದೆ.  ಇದರಿಂದ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ವಿಜ್ಞಾನ ಮತ್ತು ಕೃಷಿಯ ಸಂಗಮ :  ಸಚಿವರು ವಿಜ್ಞಾನಿಗಳನ್ನು ಶ್ಲಾಘಿಸಿ, ಇದು ಕೇವಲ ತಂತ್ರಜ್ಞಾನವಲ್ಲ. ಕೃಷಿ ಹಾಗೂ ವಿಜ್ಞಾನ ಮತ್ತು ರಸ್ತೆ ನಿರ್ಮಾಣದ ಅದ್ಭುತ ಸಂಯೋಜನೆ ಎಂದು ಹೇಳಿದರು. ಹೀಗಾಗಿ ಇದು  “ಜೈ ಕಿಸಾನ್, ಜೈ ಸೈನ್ಸ್” ಹೊಸ ಮಾದರಿಯಾಗಿದ್ದು ಇದರಿಂದಾಗಿ ರೈತರಿಗೆ ಹೊಸ ಮಾರುಕಟ್ಟೆ, ಪರಿಸರ ರಕ್ಷಣೆ ಹಾಗೂ ರಸ್ತೆ ಅಭಿವೃದ್ಧಿ ಇವುಗಳನ್ನೆಲ್ಲ ಒಟ್ಟಿಗೆ ಸಾಧಿಸುವ ಹೊಸ ಮಾದರಿಯಾಗಲಿದೆ ಎಂದು ಸಚಿವರು ಹೇಳಿದರು.

Bio-bitumen technology converts crop residue into material for road construction, reducing pollution and increasing farmers’ income. The initiative can lower import costs, support sustainability, and strengthen India’s self-reliance while solving stubble burning issues.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

11 hours ago

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಥೆನಾಲ್ ಖರೀದಿ 1,200 ಕೋಟಿ ಲೀಟರ್‌ಗೆ ಏರಿಕೆ

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಪಾವತಿಯ…

16 hours ago

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ – ಕಾಫಿ ಬಗ್ಗೆ ಜಾಗೃತಿಗೆ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ

ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ‘ಸೈಕಲ್ ಫಾರ್ ಕಾಫಿ’ ಜಾಥಾ ಆಯೋಜಿಸಲಾಗಿದ್ದು,…

16 hours ago

ಏಷ್ಯನ್ ಗೇಮ್ಸ್‌ ಕ್ರಿಕೆಟ್‌ : ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಫೈನಲ್‌

ಏಷ್ಯನ್‌ ಗೇಮ್ಸ್‌ ಪುರುಷರ ಕ್ರಿಕೆಟ್‌ ಫೈನಲ್‌ನಲ್ಲಿ ಅ.3ರಂದು ಭಾರತ ಮತ್ತು ಪಾಕಿಸ್ತಾನ ಚಿನ್ನದ…

17 hours ago

ಮಳೆ ಕೊರತೆ ಮುಂದುವರಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೇಗಿರಲಿದೆ?

ಮಳೆಯ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ…

17 hours ago

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…

1 day ago