ಪ್ರಕೃತಿಯಲ್ಲಿ ಇರುವ ಡಿಎನ್‌ಎ, ಪ್ರೋಟೀನ್‌ಗಳಂತೆ ಪ್ಲಾಸ್ಟಿಕ್‌ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ ಪ್ಲಾಸ್ಟಿಕನ್ನು ರೂಪಿಸಬಹುದು ಎಂಬ ಹೊಸ ಸಂಶೋಧನೆ ಬೆಳಕಿಗೆ ಬಂದಿದೆ. ಅಮೆರಿಕದ ರಟ್ಗರ್ಸ್ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನಿ ಯುವೇಯಿ ಗು ನೇತೃತ್ವದ ತಂಡ ಈ ಸಾಧನೆಯನ್ನು ಮಾಡಿದೆ.
ಈ ಸಂಶೋಧನೆಯಲ್ಲಿ ಪ್ಲಾಸ್ಟಿಕ್ ಅಣುಗಳೊಳಗೆ ಅತಿ ಸಣ್ಣ “ದುರ್ಬಲ ಕೊಂಡಿ”ಗಳನ್ನು ರೂಪಿಸಲಾಗಿದ್ದು, ಬಳಕೆಯ ಸಮಯದಲ್ಲಿ ಪ್ಲಾಸ್ಟಿಕ್ ಗಟ್ಟಿಯಾಗಿರುತ್ತದೆ. ಆದರೆ ತ್ಯಜಿಸಿದ ನಂತರ ತೇವ, ಗಾಳಿ, ಬೆಳಕು ಅಥವಾ ಹಾನಿಯಿಲ್ಲದ ಲೋಹ ಅಂಶಗಳ ಸ್ಪರ್ಶಕ್ಕೆ ಬಂದಾಗ ವೇಗವಾಗಿ ಕರಗುತ್ತದೆ. ಪ್ಲಾಸ್ಟಿಕ್‌ನ ಮೂಲ ರಚನೆಯನ್ನು ಬದಲಾಯಿಸದೇ, ಅದರ ಅಣುಗಳ ಜೋಡಣೆಯನ್ನು ಬದಲಿಸುವ ಮೂಲಕ ಕುಸಿಯುವ ಸಮಯವನ್ನು ನಿಯಂತ್ರಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಪ್ರಾರಂಭಿಕ ಪರೀಕ್ಷೆಗಳಲ್ಲಿ ಕುಸಿತದಿಂದ ಉಂಟಾಗುವ ದ್ರವಗಳು ವಿಷಕಾರಿಯಾಗಿಲ್ಲವೆಂದು ಕಂಡುಬಂದಿದೆ.
ಈ ತಂತ್ರಜ್ಞಾನದಲ್ಲಿ ಮತ್ತೊಂದು ವಿಶೇಷತೆ ಎಂದರೆ, ಪ್ಲಾಸ್ಟಿಕ್ ಎಷ್ಟು ದಿನ ಉಳಿಯಬೇಕು ಎಂಬುದನ್ನು ಅದರ ಅಣುಗಳ ಜೋಡಣೆಯ ಮೂಲಕ ನಿಯಂತ್ರಿಸಬಹುದು. ಉದಾಹರಣೆಗೆ, ಆಹಾರ ಪ್ಯಾಕೇಜಿಂಗ್‌ಗೆ ಕೆಲವು ದಿನಗಳಲ್ಲಿ ಕುಸಿಯುವ ಪ್ಲಾಸ್ಟಿಕ್ ಬಳಸಬಹುದು. ಕೃಷಿಯಲ್ಲಿ ಬೆಳೆ ರಕ್ಷಣೆಗೆ ಬಳಸುವ ಹಾಳೆಗಳು ಒಂದು ಋತುವಿನ ನಂತರ ಸ್ವಯಂ ನಾಶವಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಾರಂಭಿಕ ಪ್ರಯೋಗಗಳಲ್ಲಿ ಪ್ಲಾಸ್ಟಿಕ್ ಕುಸಿದ ನಂತರ ಉಂಟಾಗುವ ದ್ರವಗಳು ವಿಷಕಾರಿಯಾಗಿಲ್ಲವೆಂದು ಕಂಡುಬಂದಿದೆ. ಆದರೂ, ಮಣ್ಣು, ನೀರು ಮತ್ತು ಜೀವಜಾಲದ ಮೇಲೆ ಇದರ ದೀರ್ಘಕಾಲೀನ ಪರಿಣಾಮಗಳ ಕುರಿತು ಹೆಚ್ಚಿನ ಅಧ್ಯಯನ ನಡೆಯುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಹೊಸ ತಂತ್ರಜ್ಞಾನವನ್ನು ಈಗಿರುವ ಪ್ಲಾಸ್ಟಿಕ್ ಉತ್ಪಾದನಾ ಘಟಕಗಳಲ್ಲೇ ಅಳವಡಿಸಬಹುದೇ ಎಂಬುದರ ಕುರಿತು ಕೈಗಾರಿಕಾ ಸಂಸ್ಥೆಗಳೊಂದಿಗೆ ಚರ್ಚೆ ನಡೆಯುತ್ತಿದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಬದಲಾವಣೆ ಅಗತ್ಯವಿಲ್ಲದಿದ್ದರೆ, ಈ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ತಂತ್ರಜ್ಞಾನವನ್ನು ಆಹಾರ ಪ್ಯಾಕೇಜಿಂಗ್, ಕೃಷಿ ಬಳಕೆಗಳು, ವೈದ್ಯಕೀಯ ಉಪಕರಣಗಳು ಮತ್ತು ತಾತ್ಕಾಲಿಕ ಲೇಪನಗಳಲ್ಲಿ ಬಳಸಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅಧ್ಯಯನ ನೇಚರ್ ಕೆಮಿಸ್ಟ್ರಿ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ


