ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ(Cabinet Meeting), ಬಹಳ ದೂರಗಾಮಿ ಭವಿಷ್ಯದ ಪರಿಣಾಮಗಳನ್ನು ಹೊಂದಿರುವ ಹೆಗ್ಗುರುತು ಉಪಕ್ರಮವೊಂದರಲ್ಲಿ ಸ್ವಚ್ಛ, ಹಸಿರು, ಸಮೃದ್ಧ ಮತ್ತು ಸ್ವಾವಲಂಬಿ ಭಾರತಕ್ಕಾಗಿ ಉನ್ನತ ಕಾರ್ಯಕ್ಷಮತೆಯ ಜೈವಿಕ ಉತ್ಪಾದನೆಯನ್ನು(Biological Production) ಉತ್ತೇಜಿಸಲು ಜೈವಿಕ ತಂತ್ರಜ್ಞಾನ ಇಲಾಖೆಯ (DBT) ಬಯೋಇ3(Bio E3) (ಆರ್ಥಿಕತೆ, ಉದ್ಯೋಗ ಮತ್ತು ಪರಿಸರಕ್ಕಾಗಿ ಜೈವಿಕ ತಂತ್ರಜ್ಞಾನ) ನೀತಿಗೆ ತನ್ನ ಅನುಮೋದನೆ ನೀಡಿದೆ. ಇದು ವಿಶ್ವದ ಭವಿಷ್ಯದ ಆರ್ಥಿಕ ಬೆಳವಣಿಗೆಯ(Economical Development) ಆರಂಭಿಕ ಮಾರ್ಗದರ್ಶಿ ದಾರಿದೀಪಗಳಲ್ಲಿ ಒಂದಾಗಿ ಜಾಗತಿಕ ರಂಗದಲ್ಲಿ ಭಾರತಕ್ಕೆ ಹಿರಿತನದ ಪ್ರವರ್ತಕ ಪಾತ್ರವನ್ನು ಖಾತ್ರಿಪಡಿಸುತ್ತದೆ.
ವಸ್ತುಗಳನ್ನು ಸಂಪನ್ಮೂಲಗಳನ್ನು ಬಳಕೆ ಮಾಡುವಾಗ ವಿವೇಚನಾರಹಿತವಾಗಿ ಸಮರ್ಥನೀಯವಲ್ಲದ ಮಾದರಿಯಲ್ಲಿ ಬಳಕೆ ಮಾಡುವುದು, ಅತಿಯಾದ ಸಂಪನ್ಮೂಲ ಬಳಕೆ ಮತ್ತು ಆ ಮೂಲಕ ತ್ಯಾಜ್ಯ ಉತ್ಪಾದನೆಯು ಕಾಡ್ಗಿಚ್ಚು, ಕರಗುವ ಹಿಮನದಿಗಳು ಮತ್ತು ಜೀವವೈವಿಧ್ಯತೆಯಲ್ಲಿ ಕುಸಿತದಂತಹ ಜಾಗತಿಕ ವಿಪತ್ತುಗಳಿಗೆ ಕಾರಣವಾಗುತ್ತಿದೆ. ಭಾರತವನ್ನು ವೇಗವರ್ಧಿತ ‘ಹಸಿರು ಬೆಳವಣಿಗೆ’ಯ ಹಾದಿಯಲ್ಲಿ ಮುನ್ನಡೆಸುವ ರಾಷ್ಟ್ರೀಯ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಮಗ್ರ ಜೈವಿಕ ಇ 3 (ಆರ್ಥಿಕತೆ, ಪರಿಸರ ಮತ್ತು ಉದ್ಯೋಗಕ್ಕಾಗಿ ಜೈವಿಕ ತಂತ್ರಜ್ಞಾನ) ನೀತಿಯು ಹವಾಮಾನ ಬದಲಾವಣೆ, ನವೀಕರಿಸಲಾಗದ ಸಂಪನ್ಮೂಲಗಳ ಕ್ಷೀಣಿಸುವಿಕೆ ಮತ್ತು ಸುಸ್ಥಿರ ತ್ಯಾಜ್ಯ ಉತ್ಪಾದನೆಯ ಸವಾಲಿನ ಹಿನ್ನೆಲೆಯಲ್ಲಿ ಸುಸ್ಥಿರ ಬೆಳವಣಿಗೆಯತ್ತ ಸಕಾರಾತ್ಮಕ ಮತ್ತು ನಿರ್ಣಾಯಕ ಹೆಜ್ಜೆಯಾಗಿದೆ. ರಾಸಾಯನಿಕ ಆಧಾರಿತ ಕೈಗಾರಿಕೆಗಳನ್ನು ಹೆಚ್ಚು ಸುಸ್ಥಿರ ಜೈವಿಕ-ಆಧಾರಿತ ಕೈಗಾರಿಕಾ ಮಾದರಿಗಳಿಗೆ ಪರಿವರ್ತಿಸುವುದನ್ನು ಉತ್ತೇಜಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ. ಇದು ವೃತ್ತಾಕಾರದ ಜೈವಿಕ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಜೈವಿಕ ಆಧಾರಿತ ಉತ್ಪನ್ನಗಳನ್ನು ಉತ್ಪಾದಿಸಲು ಬಯೋಮಾಸ್ (ಸೂಕ್ಷ್ಮಜೀವಿಯ ಕೋಶ ಕಾರ್ಖಾನೆಗಳು -ಜೀವರಾಶಿ), ಭೂಕುಸಿತಗಳು/ ಭೂಮಿಯ ಹೊಂಡಗಳನ್ನು ತುಂಬಿಸಲು ಬಳಸುವ ತ್ಯಾಜ್ಯ, ಹಸಿರು ಮನೆ ಅನಿಲಗಳು ಇತ್ಯಾದಿಗಳಿಂದ ಲಭಿಸುವ ತ್ಯಾಜ್ಯವನ್ನು ಬಳಸುವುದನ್ನು ಉತ್ತೇಜಿಸುವ ಮೂಲಕ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸಲು ಪ್ರಚೋದನೆ ನೀಡುತ್ತದೆ.
ಇದಲ್ಲದೆ, ಬಯೋಇ 3 ನೀತಿಯು ಭಾರತದ ಜೈವಿಕ ಆರ್ಥಿಕತೆಯ ಬೆಳವಣಿಗೆಯನ್ನು ಉತ್ತೇಜಿಸಲು ಹೊಸ ಪರಿಹಾರಗಳನ್ನು ಸೃಷ್ಟಿಸುತ್ತದೆ. ಜೈವಿಕ ಆಧಾರಿತ ಉತ್ಪನ್ನಗಳ ಪ್ರಮಾಣ ಹೆಚ್ಚಳ ಮತ್ತು ವಾಣಿಜ್ಯೀಕರಣಕ್ಕೆ ಅನುಕೂಲ ಮಾಡಿಕೊಡುತ್ತದೆ; ತ್ಯಾಜ್ಯ ವಸ್ತುಗಳನ್ನು ಕಡಿಮೆ ಮಾಡುವುದು, ಮರುಬಳಕೆ ಮಾಡುವುದು ಮತ್ತು ರೀಸೈಕ್ಲಿಂಗ್ (ತ್ಯಾಜ್ಯವನ್ನು ಬಳಸಿ ವಸ್ತುಗಳ ಮರು ಉತ್ಪಾದನೆ) ಮಾಡುವುದು; ಹೆಚ್ಚು ನುರಿತ ಉದ್ಯೋಗಿಗಳ ಸಮೂಹವನ್ನು ವಿಸ್ತರಿಸುವುದು; ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳ; ಮತ್ತು ಉದ್ಯಮಶೀಲತೆಯ ವೇಗವನ್ನು ಹೆಚ್ಚಿಸುವುದಕ್ಕೆ ಇದು ಅನುಕೂಲಗಳನ್ನು ಮಾಡಿಕೊಡುತ್ತದೆ.
ನೀತಿಯ ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ :
ವಿವಿಧ ಕ್ಷೇತ್ರಗಳಲ್ಲಿ ಬಯೋಇ 3 ನೀತಿಯ ಅನುಷ್ಠಾನವು ದೇಶದ ಜೈವಿಕ ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುವ ಸಾಧ್ಯತೆಯಿದೆ ಮತ್ತು ಅದು ‘ಹಸಿರು ಬೆಳವಣಿಗೆ’ಯನ್ನು ಉತ್ತೇಜಿಸುತ್ತದೆ. ದೇಶದ ಉನ್ನತ ಕಾರ್ಯಕ್ಷಮತೆಯ ಜೈವಿಕ ಉತ್ಪಾದನಾ ಉಪಕ್ರಮಗಳನ್ನು ಪೋಷಿಸುವ ಮೂಲಕ ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಆವಿಷ್ಕಾರಗಳನ್ನು ಬಳಸಿಕೊಳ್ಳುವ ಮೂಲಕ ಇದಕ್ಕೆ ಅಡಿಪಾಯ ಹಾಕಲಾಗುವುದು. ಜೈವಿಕ ಉತ್ಪಾದನೆಯು ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಪ್ರಮುಖ ಆಧಾರಸ್ತಂಭವಾಗಿದೆ ಮತ್ತು 21 ನೇ ಶತಮಾನದ ಬೇಡಿಕೆಗಳನ್ನು ಪೂರೈಸಲು ಪರಿವರ್ತಕ ವಿಧಾನವನ್ನು ಒದಗಿಸುತ್ತದೆ.
ಬಹುಶಿಸ್ತೀಯ ಪ್ರಯತ್ನವಾಗಿ, ಇದು ಮಾನವ ಜೀವಕೋಶಗಳು ಸೇರಿದಂತೆ ಸೂಕ್ಷ್ಮಜೀವಿಗಳು, ಸಸ್ಯಗಳು ಮತ್ತು ಪ್ರಾಣಿ ಕೋಶಗಳ ಸಾಮರ್ಥ್ಯವನ್ನು ತೆರೆದಿಡುವ ಶಕ್ತಿಯನ್ನು ಹೊಂದಿದೆ. ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳು ಮತ್ತು ಸಹಯೋಗದ ಪ್ರಯತ್ನಗಳ ಮೂಲಕ ಜೈವಿಕ-ಆಧಾರಿತ ಉತ್ಪನ್ನಗಳ ತಯಾರಿಕೆ, ಅಭಿವೃದ್ಧಿ ಮತ್ತು ವಾಣಿಜ್ಯೀಕರಣವನ್ನು ವೇಗವರ್ಧಿಸುವ ಕೇಂದ್ರೀಕೃತ ಸೌಲಭ್ಯಗಳಾಗಿ ಜೈವಿಕ ಉತ್ಪಾದನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ ಎಂದು ಊಹಿಸಲಾಗಿದೆ. ಇದು ಜೈವಿಕ ಉತ್ಪಾದನಾ ಪ್ರಕ್ರಿಯೆಗಳ ವ್ಯಾಪ್ತಿ ಹೆಚ್ಚಳ (ಸ್ಕೇಲಬಿಲಿಟಿ), ಸುಸ್ಥಿರತೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಸಂಪನ್ಮೂಲಗಳು, ಪರಿಣತಿ ಮತ್ತು ತಂತ್ರಜ್ಞಾನವನ್ನು ಹಂಚಿಕೊಳ್ಳುವ ಸಮುದಾಯವನ್ನು ಸೃಷ್ಟಿಸುತ್ತದೆ. ಈ ಜೈವಿಕ ಉತ್ಪಾದನಾ ಕೇಂದ್ರಗಳು ಜೈವಿಕ ಆಧಾರಿತ ಉತ್ಪನ್ನಗಳ ‘ಲ್ಯಾಬ್-ಟು-ಪೈಲಟ್’ ಮತ್ತು “ವಾಣಿಜ್ಯ ಪೂರ್ವ ಪ್ರಮಾಣದ’ ಉತ್ಪಾದನೆಯ ನಡುವಿನ ಅಂತರವನ್ನು ಕಡಿಮೆ ಮಾಡುತ್ತವೆ.
ನವೋದ್ಯಮಗಳು ಹೊಸ ಆಲೋಚನೆಗಳನ್ನು ತರುವ ಮತ್ತು ಅಭಿವೃದ್ಧಿಪಡಿಸುವ ಮೂಲಕ ಮತ್ತು ಅವುಗಳನ್ನು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಎಸ್‌ಎಂಇಗಳು) ಮತ್ತು ಸ್ಥಾಪಿತ ತಯಾರಕರಿಗೆ ನೀಡುವ ಮೂಲಕ ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬಯೋಫೌಂಡ್ರಿ ಎಂದರೆ ಜೈವಿಕ ಎಂಜಿನಿಯರಿಂಗ್ ಪ್ರಕ್ರಿಯೆಗಳನ್ನು ವಿಸ್ತರಿಸಲು/ಸ್ಕೇಲೆಬಲ್ ಮಾಡಲು ಸುಧಾರಿತ ಗುಚ್ಛಗಳ (ಕ್ಲಸ್ಟರ್ಗಳ) ರಚನೆ. ಇದು ಆರಂಭಿಕ ವಿನ್ಯಾಸ ಮತ್ತು ಪರೀಕ್ಷಾ ಹಂತಗಳಿಂದ ಪ್ರಾಯೋಗಿಕ ಮತ್ತು ವಾಣಿಜ್ಯ-ಪೂರ್ವ ಉತ್ಪಾದನೆಯವರೆಗೆ ಇರುತ್ತದೆ. ವಿವಿಧ ರೀತಿಯ ಅನ್ವಯಿಕ ಬಳಕೆಗಳಿಗೆ ಸಂಬಂಧಿಸಿ ಎಂ.ಆರ್. ಎನ್.ಎ. ಆಧಾರಿತ ಲಸಿಕೆಗಳು ಮತ್ತು ಪ್ರೋಟೀನ್ಗಳ ದೊಡ್ಡ ಪ್ರಮಾಣದ ಉತ್ಪಾದನೆಯು ಬಯೋಫೌಂಡ್ರಿಯ ಕೆಲವು ಪ್ರಶಂಸನೀಯ ಉದಾಹರಣೆಗಳಾಗಿದ್ದು, ಅವು ಬಹಳ ಮೌಲ್ಯಯುತವಾದುದಾಗಿರುತ್ತವೆ. ಈ ಗುಚ್ಛಗಳು ಪ್ರಮಾಣೀಕೃತ ಮತ್ತು ಸ್ವಯಂಚಾಲಿತ ಪ್ರಕ್ರಿಯೆಗಳನ್ನು ಬಳಸಿಕೊಂಡು ಜೈವಿಕ ವ್ಯವಸ್ಥೆಗಳು ಮತ್ತು ಜೀವಿಗಳನ್ನು ವಿನ್ಯಾಸಗೊಳಿಸುವಲ್ಲಿ, ನಿರ್ಮಿಸುವಲ್ಲಿ ಮತ್ತು ಪರೀಕ್ಷಿಸುವಲ್ಲಿ ಪರಿಣತಿ ಹೊಂದಿರುತ್ತವೆ.
ಜೈವಿಕ ಎಐ ಕೇಂದ್ರಗಳು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಎಐ ಏಕೀಕರಣವನ್ನು ಪ್ರೋತ್ಸಾಹಿಸುವ ಮತ್ತು ಉತ್ತೇಜಿಸುವ ಕೇಂದ್ರ ಬಿAದುವಾಗಿ ಕಾರ್ಯನಿರ್ವಹಿಸುತ್ತವೆ. ಈ ಬಯೋ-ಎಐ ಕೇಂದ್ರಗಳು (ಹಬ್ ಗಳು) ಜೈವಿಕ ತಂತ್ರಜ್ಞಾನ ಪರಿಣತಿ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಎಐ ಮತ್ತು ಯಂತ್ರ ಕಲಿಕೆಯನ್ನು ಬಳಸಿಕೊಂಡು ದೊಡ್ಡ ಪ್ರಮಾಣದ ಜೈವಿಕ ಡೇಟಾದ ಏಕೀಕರಣ, ಸಂಗ್ರಹಣೆ ಮತ್ತು ವಿಶ್ಲೇಷಣೆಗೆ ವ್ಯವಸ್ಥಾಪನಾ ಬೆಂಬಲವನ್ನು ಒದಗಿಸುತ್ತವೆ.
ಈ ಸಂಪನ್ಮೂಲಗಳನ್ನು ವಿವಿಧ ವಿಭಾಗಗಳ ತಜ್ಞರಿಗೆ ಲಭ್ಯವಾಗುವಂತೆ ಮಾಡಲಾಗುವುದು. (ಉದಾಹರಣೆಗೆ ಜೀವಶಾಸ್ತ್ರ, ಸಾಂಕ್ರಾಮಿಕ ರೋಗಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಎಂಜಿನಿಯರಿಂಗ್, ಡೇಟಾ ವಿಜ್ಞಾನ). ನವೀನ ಜೈವಿಕ-ಆಧಾರಿತ ಉತ್ಪನ್ನಗಳ ಸೃಷ್ಟಿಗೆ ಇದು ಅನುಕೂಲ ಮಾಡಿಕೊಡುತ್ತದೆ – ಅದು ಹೊಸ ರೀತಿಯ ಜೀನ್ ಚಿಕಿತ್ಸೆಯಾಗಿರಬಹುದು ಅಥವಾ ಹೊಸ ಆಹಾರ ಸಂಸ್ಕರಣಾ ಪರ್ಯಾಯವಾಗಿರಬಹುದು. ಈ ಸಂಘಟಿತ ಉಪಕ್ರಮಗಳ ಮೂಲಕ, ಬಯೋಇ 3 ನೀತಿಯು ಉದ್ಯೋಗದಲ್ಲಿ ಹೆಚ್ಚಳವನ್ನು ತರುತ್ತದೆ, ವಿಶೇಷವಾಗಿ ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಲ್ಲಿ, ಬಯೋಮಾಸ್ ಮೂಲಗಳ ಸಾಮೀಪ್ಯದಿಂದಾಗಿ ಜೈವಿಕ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ಭಾರತದ ಆರ್ಥಿಕತೆ,ಪರಿಸರ ಮತ್ತು ಉದ್ಯೋಗದಲ್ಲಿ ಹೂಡಿಕೆ ಮಾಡುವ ಮೂಲಕ, ಈ ಸಮಗ್ರ ನೀತಿಯು ರಾಷ್ಟ್ರದ ‘ವಿಕ್ಷಿತ್ ಭಾರತ್’ ಸಂಕಲ್ಪಕ್ಕೆ ಕೊಡುಗೆ ನೀಡುತ್ತದೆ. ಪರಿಣಾಮಕಾರಿ ವಿಜ್ಞಾನ ನೀತಿಯಾಗಿ ಇದು ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡಬಹುದು ಎಂಬುದನ್ನು ಎತ್ತಿ ತೋರಿಸುವ ಮಾನದಂಡವಾಗಿಯೂ ಕಾರ್ಯನಿರ್ವಹಿಸುತ್ತದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…