ಕೊರೊನಾ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರ ಮಧ್ಯೆ ಹಕ್ಕಿ ಜ್ವರದ ಬಗ್ಗೆಯೂ ತಜ್ಞರು ಮಾಹಿತಿಯನ್ನು ನೀಡಿದ್ದಾರೆ. ಏಷ್ಯಾದಲ್ಲಿ ಹಾಗೂ ಯೂರೋಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಬಗೆಯ ಹಕ್ಕಿಜ್ವರ ಇರುವುದರಿಂದ ಇದು ಮನುಷ್ಯರಿಗೂ ಹರಡುವ ಸಾಧ್ಯತೆಯಿದೆಯೆಂದು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯು ಮಾಹಿತಿಯನ್ನು ನೀಡಿದೆ.
ಪಕ್ಷಿ ಜ್ವರ ಎಂಬುದು ಸಾಮಾನ್ಯವಾಗಿ ಚಳಿಗಾಲದಲ್ಲಿ ಪ್ರಾರಂಭವಾಗುತ್ತದೆ. ಇದು ಕಾಡು ಪಕ್ಷಿಗಳ ಚಲನೆಯ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹರಡುತ್ತದೆ. ಅಕ್ಟೋಬರ್‌ನಿಂದ ಡಿಸೆಂಬರ್ ಅಂತ್ಯದವರೆಗೆ 15 ದೇಶಗಳಲ್ಲಿ ಈ ಹಕ್ಕಿಜ್ವರದ ಪರಿಣಾಮವೂ ಬೀರಿದೆ ಎಂದು ತಿಳಿದು ಬಂದಿದೆ.
ಹಕ್ಕಿಜ್ವರದ ಪರಿಸ್ಥಿತಿಯೂ ಹೆಚ್ಚು ಕಷ್ಟಕರವಾಗಿದೆ ಮತ್ತು ಹೆಚ್ಚು ಅಪಾಯಕಾರಿಯಾಗಿದೆ. ಏಕೆಂದರೆ ಒಂದಕ್ಕಿತ ಹೆಚ್ಚು ರೂಪಾಂತರಗಳು ಕಾಣಿಸಿಕೊಂಡಿರುವುದನ್ನು ಈಗಾಗಲೇ ನೋಡಿದ್ದೇವೆ. ಈ ಜ್ವರವೂ ಮನುಷ್ಯನ ದೇಹವನ್ನು ಸೇರಿ ಹೊಸ ಆಯಾಮಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ವಿಶ್ವಪ್ರಾಣಿ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಮೋನಿಕ್ ಎಲ್ಲೋಯಿಟ್ ಹೇಳಿದ್ದಾರೆ.