Advertisement
ಸುದ್ದಿಗಳು

ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |

Share

ಪುತ್ತೂರಿನ ಪರ್ಪುಂಜದ ಸೌಗಂಧಿಕ ಆವರಣದಲ್ಲಿ ನ.2 ರಿಂದ 10ರ ವರೆಗೆ ಹವ್ಯಾಸಿ ಛಾಯಾಚಿತ್ರ ಗ್ರಾಹಕ ಅಭಿಷೇಕ.ಡಿ,ಪುಂಡಿತ್ತೂರು ಅವರ ಪಕ್ಷಿ, ವನ್ಯಜೀವಿ-ಪ್ರಕೃತಿ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.

ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ನ.1, ಶುಕ್ರವಾರ, ಸಂಜೆ 5ಕ್ಕೆ, ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ. ಶ್ರೀಶ ಕುಮಾರ ಎಂ.ಕೆ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಪಕ್ಷಿ ತಜ್ಞೆ, ವರ್ಣಚಿತ್ರ ಕಲಾವಿದೆ ಪಿ. ವಸಂತಿ ಸಾಮೆತ್ತಡ್ಕ, ಹಕ್ಕಿಗಳ ಕುರಿತಾಗಿ ಹಲವು ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ.
ಬೆಳಗ್ಗೆ 9 ರಿಂದ ಸಂಜೆ 6ರ ವೆರೆಗೆ ಒಂಭತ್ತು ದಿನಗಳ ಕಾಲ ನಡೆಯಲಿರುವ ಛಾಯಾಚಿತ್ರ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಚಿತ್ರಗಳ ಖರೀದಿಗೂ ಅವಕಾಶ ಕಲ್ಪಿಸಲಾಗಿದೆ.

ಛಾಯಾಚಿತ್ರಗ್ರಾಹಕರ ಬಗ್ಗೆ:  ಪುತ್ತೂರು ವಿವೇಕಾನಂದ ಕಾಲೇಜಿನ ನಯನ ಫೊಟೋಗ್ರಫಿ ಕ್ಲಬ್ ಮೂಲಕ ಕ್ಯಾಮರಾ ಹಾಗೂ ಛಾಯಾಗ್ರಹಣದಲ್ಲಿ ಆಸಕ್ತಿ ಬೆಳಸಿಕೊಂಡ, ಅಭಿಷೇಕ.ಡಿ, ಪುತ್ತೂರಿನ ಸಂಪ್ಯ ನಿವಾಸಿ. ಮೂಲತಃ ಬಲ್ನಾಡಿನ ಪುಂಡಿತ್ತೂರಿನವರಾದ ಇವರು, ಪ್ರಸ್ತುತ ನವದೆಹಲಿಯಲ್ಲಿ ಟೈಮ್ಸ್ ಆಫ್ ಇಂಡಿಯಾದ ಟೈಮ್ಸ್ ಇಂಟರ್ನೆಟ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಪ್ರೊಡಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012-13 ರಿಂದ ಫೊಟೋಗ್ರಫಿಯ ಹವ್ಯಾಸ ಬೆಳೆಸಿಕೊಂಡ ಇವರು, ಕಳೆದ ಮೂರ್ನಾಲ್ಕು ವರ್ಷಗಳಿಂದ ಪಕ್ಷಿ-ವನ್ಯ ಜೀವಿಗಳ ಕುರಿತಾಗಿ ಅವುಗಳ ಜೀವನ ಹಾಗೂ ಛಾಯಾಗ್ರಹಣದತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅಂತೆಯೇ “Abhijna-capturing moments” ಲೋಗೋದಡಿ, ತಮ್ಮ ಫೊಟೋಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: 9945854213 – ಅಭಿಷೇಕ ಡಿ. ಪುಂಡಿತ್ತೂರು, 9900409380- ಚಂದ್ರ ಸೌಗಂಧಿಕ

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

58 minutes ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

1 hour ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

1 hour ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

2 hours ago

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳು ಸೇವನೆ ಉತ್ತಮ

ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…

2 hours ago

ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ವಿತರಣೆ ಸಚಿವ ಸಂಪುಟದಲ್ಲಿ ನಿರ್ಣಯ

ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ…

2 hours ago