ಹೃದಯ ವಿದ್ರಾವಕ ಘಟನೆಯೊಂದು ಮೆಕ್ಸಿಕೋದ ಕುವಾಹ್ಟೆಮೊಕ್ ನಗರದಲ್ಲಿ ನಡೆದಿದೆ. ನೂರಾರು ವಲಸೆ ಹಕ್ಕಿಗಳು ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದಿದೆ. ಹಳದಿ ಬಣ್ಣದ ತಲೆಯುಳ್ಳ ಕಪ್ಪು ಹಕ್ಕಿಗಳ ಹಿಂಡು ಒಂದೇ ಸಲಕ್ಕೆ ನೆಲಕ್ಕೆ ಬಿದ್ದಿರುವ ವಿಡೀಯೋ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.
ಈ ವರ್ಷದ ಸಮಯದಲ್ಲಿ ಕೆನಡಾದಿಂದ ಮೆಕ್ಸಿಕೊಕ್ಕೆ ಪ್ರಯಾಣಿಸುವ ಈ ಹಲವಾರು ವಲಸೆ ಹಕ್ಕಿಗಳು, ಫೆಬ್ರವರಿ 7-2022 ರಂದು ಕ್ವಾಹ್ಟೆಮೊಕ್‌ನ ರಸ್ತೆಗಳಲ್ಲಿ ಮತ್ತು ಪಾದಚಾರಿ ಮಾರ್ಗಗಳಲ್ಲಿ ಸತ್ತು ಬಿದ್ದಿರುವುದನ್ನು ಸ್ಥಳಿಯರು ಗುರುತಿಸಿದ್ದಾರೆ ಎಂದು ಮೆಕ್ಸಿಕನ್ ಪತ್ರಿಕೆ ಎಲ್ ಹೆರಾಲ್ಡೊಡಿ ಚಿಹುವಾಹುವಾದಲ್ಲಿ ವರದಿಯಾಗಿದೆ.
WARNING: GRAPHIC CONTENT
Security footage shows a flock of yellow-headed blackbirds drop dead in the northern Mexican state of Chihuahua pic.twitter.com/mR4Zhh979K
Advertisement— Reuters (@Reuters) February 14, 2022
ಹಠಾತ್ ವಿದ್ಯುದಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಪಶುವೈದ್ಯರು ಉಲ್ಲೇಖಿಸಿದ್ದಾರೆ. ಅಲ್ಲದೆ 100 ಕ್ಕೂ ಹೆಚ್ಚು ಪಕ್ಷಿಗಳ ಮೃತದೇಹ ದೊರಕಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 5ಜಿ ತಂತ್ರಜ್ಞಾನವೇ ಈ ರೀತಿ ಪಕ್ಷಿಗಳ ಮಾರಣಹೋಮ ನಡೆಯಲು ಕಾರಣ ಎಂದು ಹಲವಾರು ದೂರಿದ್ದಾರೆ.