ಜಗದ ಹುಟ್ಟಿನ ಕಾರಣಕರ್ತ ಸೂರ್ಯದೇವ ಹುಟ್ಟಿದ ದಿನ | ರಥಸಪ್ತಮಿ ದಿನದ ವಿಶೇಷ ಆಚರಣೆ ಏನು..?

February 15, 2024
1:13 PM

ಪ್ರತಿ ವರ್ಷದಂತೆ ಮಾಘ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು, ರಥಸಪ್ತಮಿ(Ratha Saptami) ಎಂದು ಆಚರಿಸಲಾಗುತ್ತದೆ, ರಥಸಪ್ತಮಿಯ ದಿನದಂದು ಭಗವಂತ ಶ್ರೀ ಸೂರ್ಯನಾರಾಯಣನನ್ನು(Sun), ಪೂಜಿಸಲಾಗುತ್ತದೆ. ಅಲ್ಲದೇ ರಥಸಪ್ತಮಿಯ ಮತ್ತೊಂದು ವಿಶೇಷವೇನೆಂದರೆ, ಕರ್ನಾಟಕದ ಕೆಲವು ದೇವಸ್ಥಾನಗಳಲ್ಲಿ(Temple) ಈ ದಿನ ವಿಶೇಷ ಪೂಜೆ ನಡೆಯುತ್ತದೆ.

Advertisement

ರಥಸಪ್ತಮಿಯು ಪಂಚಾಂಗದ ಪ್ರಕಾರ ಫೆ.15 ರಂದು ಗುರುವಾರ ಬೆಳಗ್ಗೆ  ಬೆಳಿಗ್ಗೆ,10:12ರಿಂದ, ಫೆ.16 ಶುಕ್ರವಾರ ಬೆಳಿಗ್ಗೆ 08:54ರ ವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ರಥಸಪ್ತಮಿಯನ್ನು ಫೆಬ್ರವರಿ 16ರಂದು ಆಚರಿಸಲಾಗುತ್ತದೆ.

ಈ ದಿನ ಸ್ನಾನದ ಸಮಯ ಈ ರೀತಿ ಇರುತ್ತದೆ: ಬೆಳಿಗ್ಗೆ 05: 17am ರಿಂದ06:59am ರ ನಡುವೆ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಮಂಗಳಕರವಾಗಿರುತ್ತದೆ, ಈ ದಿನದಂದು ಸ್ನಾನ ಮತ್ತು ದಾನಕ್ಕೆ ಮಹತ್ವವಿದೆ, ರಥಸಪ್ತಮಿಯ ಶುಭ ಯೋಗ ಈ ರೀತಿ ಇರುತ್ತದೆ, ರಥಸಪ್ತಮಿಯ ದಿನ ಮಧ್ಯಾಹ್ನ 03:18pm ರವರೆಗೆ ಬ್ರಹ್ಮ ಯೋಗವು ರೂಪುಗೊಳ್ಳುತ್ತದೆ. ಈ ದಿನ ಇಂದ್ರ ಯೋಗವು ಸಹರೂಪಗೊಳ್ಳುತ್ತದೆ. ರಥಸಪ್ತಮಿಯ ದಿನದಂದು ಭದ್ರನು ಸ್ವರ್ಗದಲ್ಲಿ ನೆಲೆಸುತ್ತಾನೆ ಮತ್ತು ಭೂಲೋಕದ ಜನರಿಗೆ ಕಲ್ಯಾಣವನ್ನು ನೀಡುತ್ತಾನೆ ಎಂದು ನಂಬಲಾಗಿದೆ.

ಪೂಜಾ ನಿಯಮ: ಅಂದು ಮುಂಜಾನೆ  ಪೂರ್ಣ ಹೃದಯದಿಂದ ಸೂರ್ಯ ದೇವರಿಗೆ ನಮಸ್ಕರಿಸಿ ಪೂಜಾ ಕೋಣೆಯನ್ನು ಶುದ್ಧಗೊಳಿಸಿ ಪೂಜಾ ಸಾಮಾನುಗಳನ್ನು ಹೊಂದಿಸಿಕೊಳ್ಳಿ ಹಾಗೂ ಸೂರ್ಯದೇವನನ್ನು ಸ್ಥಾಪಿಸಿ, ಹೂವು, ಹಣ್ಣು, ಕುಂಕುಮ, ನೈವೇದ್ಯ ಎಲ್ಲವನ್ನು ಅರ್ಪಿಸಬೇಕು. ಅಲ್ಲದೆ ಕೆಂಪು ಹೂಗಳನ್ನು ನೀರಿನಲ್ಲಿ ಸೇರಿಸಿ ಅರ್ಗ್ಯವನ್ನು ಅರ್ಪಿಸಬೇಕು ಹಾಗೂ ಈ ದಿನ ಹಳದಿ ಬಟ್ಟೆಗಳನ್ನು ಧರಿಸಿ ನಿಮ್ಮ ಪೂರ್ಣ ಹೃದಯದಿಂದ ಸೂರ್ಯ ಚಾಲಿಸಾ ಅಥವಾ ಸೂರ್ಯ ಕವಚವನ್ನು ಪಠಿಸಿದರೆ ಉತ್ತಮ

ಬರಹ: ಎಲ್.ವಿವೇಕಾನಂದ ಆಚಾರ್ಯ

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …
May 14, 2025
9:43 PM
by: ಪ್ರಬಂಧ ಅಂಬುತೀರ್ಥ
ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ
May 14, 2025
11:31 AM
by: ಸಾಯಿಶೇಖರ್ ಕರಿಕಳ
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ
May 14, 2025
11:20 AM
by: The Rural Mirror ಸುದ್ದಿಜಾಲ
ಜೂ.30 ರೊಳಗೆ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲಾಗವುದು | ಕಂದಾಯ ಸಚಿವ ಕೃಷ್ಣಬೈರೇಗೌಡ
May 14, 2025
11:15 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group