ಬಿಜೆಪಿಯು ಸರ್ವವ್ಯಾಪಿ, ಸರ್ವಸ್ಪರ್ಶಿ, ಸರ್ವಗ್ರಾಹಿಯಾಗಿ ಬೆಳೆಯಬೇಕು – ಬಿ ಎಲ್‌ ಸಂತೋಷ್

November 13, 2021
3:06 PM

 ಬಿಜೆಪಿ ಪ್ರಾಬಲ್ಯ ಹೆಚ್ಚಾಗಲು ಸರ್ವವ್ಯಾಪಿಯಾಗಬೇಕು, ಸರ್ವಸ್ಪರ್ಶಿಯಾಗಬೇಕು ಹಾಗೂ ಸರ್ವಗ್ರಾಹಿಯಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು, ಬೂತ್‌ ಮಟ್ಟದಿಂದಲೂ ಬಿಜೆಪಿಯು ಯಾವತ್ತೂ ಸಂಘಟನಾತ್ಮಕವಾಗಿ ಬೆಳೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಹೇಳಿದರು.

Advertisement
Advertisement

ಅವರು ಶನಿವಾರ ಮಂಗಳೂರಿನಲ್ಲಿ  ನಡೆದ ಬಿಜೆಪಿ ಪ್ರಕೋಷ್ಟಗಳ ಎರಡು ದಿನಗಳ ಚಿಂತನಾ ವರ್ಗದ ಸಮಾರೋಪ ಭಾಷಣ ಮಾಡಿದರು. ಇಂದು ರಾಜ್ಯದಲ್ಲಿ  ರಾಜಕೀಯ ಚರ್ಚೆಯ ಮಟ್ಟ ಏರಿಸಬೇಕಿದೆ. ಏಕವಚನ ಸಹಿತ ಭಾಷೆಯ ಮೇಲೆ ಹಿಡಿತ ಇಟ್ಟುಕೊಂಡು ಪ್ರತಿಪಕ್ಷದ ವಿರುದ್ಧ ಮಾತನಾಡಬೇಕು. ಬಿಜೆಪಿಯಲ್ಲಿ ಪರಿಶ್ರಮದ ಮೇಲೆ ಅರ್ಹತೆಗಳು ಲಭ್ಯವಾಗುತ್ತಿದೆ. ಹೀಗಾಗಿ ಈಗ ಸಾಮಾನ್ಯ ಜನರೂ ಕೂಡಾ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ, ಪ್ರಧಾನಿಗಳ ಕೆಲಸದ ಮೇಲೆಯೇ ಗ್ರಾಪಂ, ಕಾರ್ಪೋರೇಟರ್‌ ಕೆಲಸವನ್ನೂ ತುಲನೆ ಮಾಡುತ್ತಾರೆ. ಹೀಗಾಗಿ ಪಕ್ಷದ ಹುದ್ದೆಗಳನ್ನೂ, ಸ್ಥಾನಮಾನಗಳನ್ನೂ ಸರಿಯಾಗಿ ನಿರ್ವಹಣೆ ಮಾಡುವ ಮಂದಿಯ ಅಗತ್ಯವಿದೆ ಎಂದ ಬಿ ಎಲ್‌ ಸಂತೋಷ್‌,  ಕಾರ್ಯಕರ್ತರೆಲ್ಲರೂ ಅಂತ್ಯೋದಯ, ಸರ್ವೋದಯ ಹಾಗೂ ರಾಮರಾಜ್ಯದ ಬಗ್ಗೆ ತಿಳಿದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಚಿವರುಗಳಾದ ಎಸ್‌ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್‌ ಮೂಡಬಿದ್ರೆ, ಭಾನುಪ್ರಕಾಶ್‌, ಶಿವಯೋಗಿ ಸ್ವಾಮೀಜಿ ಮೊದಲಾವರು ಇದ್ದರು.

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎರಡು ದಿನಗಳಿಂದ ಸಾಮಾನ್ಯ ಮಳೆ | ಗಾಳಿಯೊಂದಿಗೆ ಮಳೆ ಸಾಧ್ಯತೆ
July 29, 2025
6:47 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ಹಾವಳಿ | ಆನೆಗಳನ್ನು ಕಾಡಿಗಟ್ಟಲು  ಅರಣ್ಯಾಧಿಕಾರಿಗಳು ತುರ್ತು ಕ್ರಮವಹಿಸುವಂತೆ ಸೂಚನೆ
July 29, 2025
6:40 AM
by: The Rural Mirror ಸುದ್ದಿಜಾಲ
ಮಾಂಗಲ್ಯ ದೋಷದ ಭೀತಿ | ವಿವಾಹ ಜೀವನದ ರಕ್ಷಣೆಗೆ ಜ್ಯೋತಿಷ್ಯ ಉಪಾಯಗಳು | ಮಾಂಗಲ್ಯ ದೋಷದ ಜ್ಯೋತಿಷ್ಯ ಮಹತ್ವ
July 29, 2025
6:18 AM
by: ದ ರೂರಲ್ ಮಿರರ್.ಕಾಂ
ಜಾನುವಾರುಗಳನ್ನು ಅರಣ್ಯದಲ್ಲಿ ಮೇವು | ಆದೇಶವನ್ನು ಹಿಂಪಡೆಯುವಂತೆ ರೈತರು ಒತ್ತಾಯ
July 28, 2025
10:30 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group