ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಚುನಾವಣಾ ತಯಾರಿ ನಡುವೆಯೇ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳನ್ನ ಘೋಷಿಸಿದ್ದ ಬಿಜೆಪಿ ಈಗ 72 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಹಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ.
ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಬದಲಿಗೆ ಬ್ರಿಜೇಶ್ ಚೌಟ, ಮೈಸೂರಿನಲ್ಲಿ ಪ್ರತಾಪ್ ಸಿಂಹ ಬದಲಿಗೆ ಯದುವೀರ ಒಡೆಯರ್ಗೆ , ಬಳ್ಳಾರಿಯಲ್ಲಿ ದೇವೇಂದ್ರಪ್ಪ ಬದಲಿಗೆ ಶ್ರೀರಾಮುಲುಗೆ , ಹಾವೇರಿಯಲ್ಲಿ ಶಿವಕುಮಾರ್ ಬದಲಿಗೆ ಬಸವರಾಜ ಬೊಮ್ಮಾಯಿಗೆ , ತುಮಕೂರಿನಲ್ಲಿ ಬಸವರಾಜು ಬದಲು ಸೋಮಣ್ಣ ಗೆ , ಕೊಪ್ಪಳದಲ್ಲಿ ಸಂಗಣ್ಣ ಕರಡಿ ಬದಲು ಡಾ.ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ನೀಡಲಾಗಿದೆ. ಸಂಸದ ಸದಾನಂದ ಗೌಡರಿಗೆ ಟಿಕೆಟ್ ನೀಡಲಾಗಿಲ್ಲ.
ಚಿಕ್ಕೋಡಿ -ಅಣ್ಣಾ ಸಾಹೇಬ್ ಜೊಲ್ಲೆ, ಬಾಗಲಕೋಟೆ -ಪಿ.ಸಿ.ಗದ್ದಿಗೌಡರ್, ಉಡುಪಿ-ಚಿಕ್ಕಮಗಳೂರು -ಕೋಟ ಶ್ರೀನಿವಾಸ ಪೂಜಾರಿ, ಹಾವೇರಿ -ಬಸವರಾಜ ಬೊಮ್ಮಾಯಿ, ಮೈಸೂರು -ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬೆಂಗಳೂರು ಗ್ರಾಮಾಂತರ -ಡಾ.ಸಿ.ಎನ್.ಮಂಜುನಾಥ , ಬೆಂಗಳೂರು ಉತ್ತರ -ಶೋಭಾ ಕರಂದ್ಲಾಜೆ , ಬೆಂಗಳೂರು ದಕ್ಷಿಣ -ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರ -ಪಿ.ಸಿ.ಮೋಹನ್, ತುಮಕೂರು -ವಿ.ಸೋಮಣ್ಣ, ದಕ್ಷಿಣ ಕನ್ನಡ -ಕ್ಯಾಪ್ಟನ್ ಬ್ರಿಜೇಶ್ ಚೌಟ, ಚಾಮರಾಜನಗರ -ಎಸ್.ಬಾಲರಾಜು, ಧಾರವಾಡ -ಪ್ರಹ್ಲಾದ್ ಜೋಶಿ, ಕೊಪ್ಪಳ -ಡಾ.ಬಸವರಾಜ ತ್ಯಾವಟೂರು, ದಾವಣಗೆರೆ -ಗಾಯತ್ರಿ ಸಿದ್ದೇಶ್ವರ್ , ಬಳ್ಳಾರಿ -ಬಿ.ಶ್ರೀರಾಮುಲು, ಕಲಬುರಗಿ -ಡಾ.ಉಮೇಶ್ ಜಾಧವ್ , ಬೀದರ್ -ಭಗವಂತ ಖೂಬಾ ವಿಜಯಪುರ -ರಮೇಶ್ ಜಿಗಜಿಣಗಿ, ಶಿವಮೊಗ್ಗ -ಬಿ.ವೈ.ರಾಘವೇಂದ್ರ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.