ಒಂದು ಕಾಲದಲ್ಲಿ ಭಾರತದಲ್ಲಿ(India) ಉಗ್ರರ(Terrorist) ಅಟ್ಟಹಾಸಕ್ಕೆ ಕೊನೆಯೇ ಇರಲಿಲ್ಲ. ಆದರೆ ಇದೀಗ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಋಷಿಕೇಶದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ದುರ್ಬಲ ಮತ್ತು ಅಸ್ಥಿರ ಸರ್ಕಾರಗಳಿದ್ದಾಗ ಶತ್ರುಗಳು ಲಾಭ ಪಡೆದರು ಮತ್ತು ಭಯೋತ್ಪಾದನೆ (Terrorism) ಹರಡಿತು. ಆದರೆ ಬಲಿಷ್ಠ ಮೋದಿ ಸರ್ಕಾರದ ಅಡಿಯಲ್ಲಿ ನಮ್ಮ ಪಡೆಗಳು ಅವರ ನೆಲದಲ್ಲೇ ಅವರನ್ನು ಹತ್ಯೆ ಮಾಡುತ್ತಿದೆ ಎಂದು ಹೇಳಿದರು.
ಪಾಕಿಸ್ತಾನದಲ್ಲಿ (Pakistan) ಅಡಗಿರುವ ಭಾರತಕ್ಕೆ ಬೇಕಾಗಿರುವ ಉಗ್ರರು ನಿಗೂಢವಾಗಿ ಹತ್ಯೆಯಾಗುತ್ತಿದ್ದು, ಈ ಹತ್ಯೆಗಳ ಹಿಂದೆ ಭಾರತದ ಪಾತ್ರವಿದೆ ಎಂಬ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಭಾರತದಲ್ಲಿ ಸ್ಥಿರ ಸರ್ಕಾರದಿಂದ ಆಗುವ ಪ್ರಯೋಜನಗಳನ್ನು ಜನರು ನೋಡಿರುವುದರಿಂದ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಪ್ರತಿಧ್ವನಿ ದೇಶಾದ್ಯಂತ ಕೇಳಿಬರುತ್ತಿದೆ ಎಂದು ಹೇಳಿದರು.
ಹಿಂದಿನ ದುರ್ಬಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗಡಿಯಲ್ಲಿ ಮೂಲಸೌಕರ್ಯವನ್ನು ಬಲಪಡಿಸಲು ಸಾಧ್ಯವಾಗಲಿಲ್ಲ. ಆದರೆ ಈಗ ಗಡಿಯಲ್ಲಿ ರಸ್ತೆಗಳು ಮತ್ತು ಸುರಂಗಗಳನ್ನು ನಿರ್ಮಿಸಲಾಗುತ್ತಿದೆ ಎಂದು ದೂರಿದರು. ಉತ್ತರಾಖಂಡದ ಪೂಜ್ಯ ದೇವತೆಗಳಾದ ಮಾ ಧಾರಿ ದೇವಿ ಮತ್ತು ಜ್ವಾಲಾ ದೇವಿಯಿಂದ ಸಂಕೇತಿಸಲ್ಪಟ್ಟ ʼಶಕ್ತಿʼ ಅನ್ನು ತೊಡೆದುಹಾಕುವ ಬಗ್ಗೆ ಮಾತನಾಡುವ ಕಾಂಗ್ರೆಸ್‌ಗೆ ಉತ್ತರಾಖಂಡದ ಜನರು ತಕ್ಕ ಉತ್ತರವನ್ನು ನೀಡಬೇಕೆಂದು ಅವರು ಮನವಿ ಮಾಡಿದರು.
- ಅಂತರ್ಜಾಲ ಮಾಹಿತಿ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel