ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಡಳಿತ ಪಕ್ಷ ಬಿಜೆಪಿ 2ನೇ ಲಿಸ್ಟ್ ಬಿಡುಗಡೆ ಮಾಡಿದ್ದು, 23 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಈ ಲಿಸ್ಟ್ನಲ್ಲೂ 7 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಮೊದಲ ಲಿಸ್ಟ್ನಲ್ಲೂ 9 ಹಾಲಿ ಶಾಸಕರಿಗೆ ಟಿಕೆಟ್ ನೀಡಿರಲಿಲ್ಲ. ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ಹಾವೇರಿ ಶಾಸಕ ನೆಹರೂ ಓಲೇಕಾರ್ ಸೇರಿದಂತೆ 7 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಇನ್ನು ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಗೋವಿಂದರಾಜ, ಹೆಬ್ಬಾಳ, ಮಹದೇವಪುರ ಕ್ಷೇತ್ರಗಳ ಟಿಕೆಟ್ ಕೂಡ ಘೋಷಣೆಯಾಗಿಲ್ಲ. ಮಂಗಳವಾರ ಬಾಕಿ ಉಳಿಸಿಕೊಂಡಿದ್ದ 35 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿದೆ. ಇನ್ನೂ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಬಹಿರಂಗವಾಗಿಲ್ಲ.
ಬಿಜೆಪಿ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿತ್ತು. ಅದರಲ್ಲಿ 52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ಒಬಿಸಿಯ 32, ಎಸ್ಸಿ 30, ಎಸ್ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿತ್ತು. ಇದೀಗ 2ನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ.
ಟಿಕೆಟ್ ಫೈನಲ್ ಆಗದ ಕ್ಷೇತ್ರಗಳು: ನಾಗಠಾಣಾ, ಸೇಡಂ, ಮಾನ್ವಿ, ಕೊಪ್ಪಳ, ರೋಣ, ಹುಬ್ಬಳ್ಳಿ ಧಾರವಾಡ ಕೇಂದ್ರ, ಹಗರಿ ಬೊಮ್ಮನಹಳ್ಳಿ, ಶಿವಮೊಗ್ಗ ನಗರ, ಹೆಬ್ಬಾಳ, ಗೋವಿಂದರಾಜನಗರ, ಕೃಷ್ಣರಾಜ, ಮಹದೇವಪುರ, ಕ್ಷೇತ್ರ ಬಾಕಿ ಉಳಿದಿವೆ. ಇದರಲ್ಲೂ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಟಿಕೆಟ್ ವಂಚಿತ ಹಾಲಿ ಶಾಸಕರು:
ಮೂಡಿಗೆರೆ -ಎಂಪಿ ಕುಮಾರಸ್ವಾಮಿ ಬದಲಿಗೆ ದೀಪಕ್ ದೊಡ್ಡಯ್ಯಗೆ ಟಿಕೆಟ್
ಚೆನ್ನಗಿರಿ- ಮಾಡಾಳ್ ವಿರೂಪಾಕ್ಷಪ್ಪ ಬದಲಿಗೆ ಶಿವಕುಮಾರ್ಗೆ ಟಿಕೆಟ್
ಬೈಂದೂರು-ಸುಕುಮಾರ್ ಶೆಟ್ಟಿ ಬದಲಿಗೆ ಗುರುರಾಜ್ಗೆ ಟಿಕೆಟ್
ಕಲಘಟಗಿ- ನಿಂಬಣ್ಣನವರ್ ಬದಲಿಗೆ ನಾಗರಾಜ್ ಛಬ್ಬಿಗೆ ಟಿಕೆಟ್
ಮಾಯಕೊಂಡ- ಎನ್. ಲಿಂಗಣ್- ಬಸವರಾಜ್ ನಾಯ್ಕ್ಗೆ ಟಿಕೆಟ್ ಸಿಕ್ಕಿದೆ
ದಾವಣಗೆರೆ ಉತ್ತರ : ಎಸ್ ಎ ರವೀಂದ್ರನಾಥ್ ಬದಲಿಗೆ ನಾಗರಾಜ್ ಲೋಕಿಕೆರೆಗೆ ಟಿಕೆಟ್
2ನೇ ಲಿಸ್ಟ್ನಲ್ಲಿ ಟಿಕೆಟ್ ಪಡೆದವರು
ದೇವರಹಿಪ್ಪರಗಿ-ಸೋಮನಗೌಡ ಪಾಟೀಲ್
ಬಸವನಬಾಗೇವಾಡಿ -ಎಸ್ .ಕೆ.ಬೆಳ್ಳುಬ್ಬಿ
ಇಂಡಿ-ಕಾಸಗೌಡ ಬಿರಾದಾರ್
ಗುರುಮಿಠಕಲ್-ಲಲಿತ ಅನಪೂರ್
ಬೀದರ್-ಈಶ್ವರ್ ಸಿಂಗ್ ಠಾಕೂರ್
ಭಾಲ್ಕಿ -ಪ್ರಕಾಶ್ ಖಂಡ್ರೆ
ಗಂಗಾವತಿ -ಪರಣ್ಣ ಮುನವಳ್ಳಿ
ಕಲಘಟಗಿ-ನಾಗರಾಜ್ ಛಬ್ಬಿ
ಹಾನಗಲ್-ಶಿವರಾಜ್ ಸಜ್ಜನರ್
ಹಾವೇರಿ -ಗವಿಸಿದ್ದಪ್ಪ ದ್ಯಾಮಣ್ಣ ನವರ್
ಹರಪನಹಳ್ಳಿ-ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ-ಲೋಕೀಕೆರೆ ನಾಗರಾಜ್
ದಾವಣಗೆರೆ ದಕ್ಷಿಣ-ಅಜಯ್ ಕುಮಾರ್
ಮಾಯಕೊಂಡ -ಬಸವರಾಜ್ ನಾಯ್ಕ್
ಚನ್ನಗಿರಿ-ಶಿವಕುಮಾರ್
ಬೈಂದೂರು -ಗುರುರಾಜ್ ಗಂಟಿಹೊಳೆ
ಮೂಡಿಗೆರೆ-ದೀಪಕ್ ದೊಡ್ಡಯ್ಯ
ಗುಬ್ಬಿ -ಎಸ್.ಡಿ.ದಿಲೀಪ್ ಕುಮಾರ್
ಶಿಡ್ಲಘಟ್ಟ- ರಾಮಚಂದ್ರ ಗೌಡ
ಕೆಜಿಎಫ್ -ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ -ಚಿದಾನಂದ
ಅರಸೀಕೆರೆ-ಜಿ.ಬಿ.ಬಸವರಾಜು
ಹೆಗ್ಗಡದೇವನಕೋಟೆ-ಕೃಷ್ಣ ನಾಯ್ಕ್